ಚಿಕ್ಕಮಗಳೂರಿನ ಕುಂದೂರು ಬಳಿ ಸೆರೆಯಾದ ಕಾಡಾನೆ ಸಕ್ರೆಬೈಲಿಗೆ ಶಿಫ್ಟ್ | ಕಗ್ಗತ್ತಲ ರಾತ್ರಿಯಲ್ಲಿ ಕಾಡಾನೆ ಸ್ಥಳಾಂತರಿಸಿದ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

Wild tusker captured in kundur chikkamagalore dist

ಚಿಕ್ಕಮಗಳೂರಿನ ಕುಂದೂರು ಬಳಿ ಸೆರೆಯಾದ ಕಾಡಾನೆ ಸಕ್ರೆಬೈಲಿಗೆ ಶಿಫ್ಟ್ |  ಕಗ್ಗತ್ತಲ ರಾತ್ರಿಯಲ್ಲಿ ಕಾಡಾನೆ ಸ್ಥಳಾಂತರಿಸಿದ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಸಕ್ರೆಬೈಲು ಆನೆ ಬಿಜಾರದ ಖೆಡ್ಡಾಗೆ ಹೊಸ ಅತಿಥಿಯ ಆಗಮನವಾಗಿದೆ. ಚಿಕ್ಕಮಗಳೂರಿನ ಕುಂದೂರು ಸಮೀಪದಲ್ಲಿ ಸೆರೆಯಾದ ಕಾಡಾನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ. ಕಗ್ಗತ್ತಿನ ರಾತ್ರಿಯಲ್ಲಿಯೇ ಲಾರಿಯಲ್ಲಿ ಬಂದ ಕಾಡಾನೆಯನ್ನು ಬಿಡಾರದ ಸಿಬ್ಬಂದಿಗಳು ಕ್ರೇನ್ ಬಳಸಿ ಕ್ರಾಲ್ ಒಳಗೆ ಆನೆಯನ್ನು ಇರಿಸಿದ್ದೇ ಒಂದು ರೋಚಕದ ಸಂಗತಿ

ಕಿಲ್ಲರ್ ಸಲಗ ಬಿಟ್ಟು ಸೆರೆಯಾಯ್ತಾ ಬೇರೆ ಸಲಗ...?

ಗುಂಪಿನಲ್ಲಿದ್ದು ಸಿಬ್ಬಂದಿಗಳಿಗೆ ಕನ್ ಪ್ಯೂಸ್ ಮಾಡಿದ ಕಾಡಾನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇಶದಂತೆ ಸೆರೆಯಾಗಬೇಕಿದ್ದ ನರಂಹತಕ ಕಾಡಾನೆ ಕಾರ್ಯಾಚರಣೆಯಲ್ಲಿ ಆನೆ ಸಿಬ್ಬಂದಿಗಳಿಗೆ ಕೊಂಚ ಹಿನ್ನಡೆಯಾಗಿದೆ. ಇಬ್ಬರನ್ನು ಬಲಿಪಡೆದ ಕಾಡಾನೆಯನ್ನು ಸೆರೆ ಹಿಡಿಯಬೇಕಾದ ಮಾವುತ ಕಾವಾಡಿ ಹಾಗು ಸಿಬ್ಬಂದಿಗಳ ತಂಡ ಬೇರೆ ಆನೆಯನ್ನು ಸೆರೆ ಹಿಡಿದಿದ್ದಾರಾ ಎಂಬ ಅನುಮಾನ ಮೂಡುವಂತೆ ಮಾಡಿದೆ. ಈ ಗೊಂದಲ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೂ ಇದೆ.

ಚಿಕ್ಕಮಗಳೂರು ಜಿಲ್ಲೆಯ ಕುಂದೂರು ಸಮೀಪ ಬೀಡುಬಿಟ್ಟಿದ್ದ ಕಾಡಾನೆ ನಾಲ್ಕೈದು ಕಾಡಾನೆಗಳಿರುವ ಗುಂಪು ಸೇರಿಕೊಂಡ ನಂತರ  ಅಧಿಕಾರಿಗಳಿಗೆ ಗೊಂದಲ ಸೃಷ್ಟಿಯಾಗಿದೆ. ಗುಂಪಿನಲ್ಲಿ ನರಹಂತಕ ಆನೆ ಯಾವುದು ಎಂಬ ಗೊಂದಲದ ಅಂದಾಜಿನಲ್ಲಿ ಕುಂದೂರು ಸಮೀಪ ಬೀಡುಬಿಟ್ಟಿದ ದೈತ್ಯ ಕಾಡಾನೆಯನ್ನು ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಈ ಕಾಡಾನೆ ಸೆರೆ ಹಿಡಿಯಲು ವನ್ಯ ಜೀವಿ ವೈದ್ಯರ ತಂಡ ಹಾಗು ಮಾವುತ, ಕಾವಾಡಿ, ಟ್ರಾಕರ್ಸ್, ಡಾರ್ಟ್ ಎಕ್ಸ್ ಪರ್ಟ್ ಗಳ ತಂಡ ಕಳೆದ ಒಂದು ವಾರದಿಂದ ಸ್ಥಳಧಲ್ಲಿ ಬೀಡುಬಿಟ್ಟಿತ್ತು. ಸೆರೆ ಸಿಕ್ಕ ಕಾಡಾನೆಯನ್ನು ಕ್ರಾಲ್ ಮುಖಾಂತರ ಲಾರಿಗೆ ಹಾಕಿ, ನಂತರ ಸಕ್ರೆಬೈಲು ಆನೆ ಬಿಡಾರದ ಕ್ರಾಲ್ ಗೆ ಶಿಫ್ಟ್ ಮಾಡಲಾಗಿತ್ತು.. ಕಾಡಾನೆ ತರಲಾಗುತ್ತಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಸಕ್ರೆಬೈಲಿನ ಸುತ್ತಮುತ್ತಲ ಜನತೆ ಅದನ್ನು ಕಣ್ತುಂಬಿಕೊಳ್ಳಲು ರಾತ್ರಿಯೆಲ್ಲಾ ಕಾದಿದ್ದರು. ಬಿಡಾರಕ್ಕೆ ಆನೆ ಬರುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸಿಬ್ಬಂದಿಗಳು ಕಾಡಾನೆಯನ್ನು ಕ್ರಾಲ್ ಗೆ ಹಾಕುವ ಬಿಗ್ ಟಾಸ್ಕ್ ಕಗ್ಗತ್ತಲ ರಾತ್ರಿಯಲ್ಲಿ ಎದುರಾಗಿತ್ತು. 

ಎರಡು ಗಂಟೆಯ ಕಾರ್ಯಾಚರಣೆ

ಲಾರಿಯಲ್ಲಿದ ದೈತ್ಯ ಕಾಡಾನೆಯ ಸಲಗವೇ ಆಕರ್ಷಣೆಯವಾಗಿದೆ. ಈ ಕಾಡಾನೆ ಲಾರಿಯಲ್ಲಿಯೇ ಘಳಿಟ್ಟು ಬಿಡಾರದ ಸಾಕಾನೆಗಳನ್ನೇ ಮೆಟ್ಟಿ ನಿಲ್ಲುವಂತೆ ಘೀಳುಡುತ್ತಿತ್ತು. ಕಾಡಾನೆ ಸುತ್ತ ಕುಮ್ಕಿ ಆನೆಗಳನ್ನು ನಿಯೋಜನೆ ಮಾಡಲಾಗಿತ್ತು. ಎದುರಿದ್ದ ಬಿಡಾರದ ಆನೆಯನ್ನೇ ತಿವಿದು ಲಾರಿಯಿಂದ ಹೊರಬರಲು ಕಾಡಾನೆ ಪ್ರಯತ್ನಿಸುತ್ತಿತ್ತು. ಪ್ರಜ್ಞಾವಸ್ಥೆಯಲ್ಲಿದ್ದ ಕಾಡಾನೆ ಸುಸ್ತಾಗಿದ್ದರೂ..ಅದು ಎದುರಾಳಿಯನ್ನು ಮೆಟ್ಟಿ ನಿಲ್ಲುವಂತಿತ್ತು. ಕಾಡಾನೆಯನ್ನು ಸಾವಕಾಶವಾಗಿ ಪುನಃ ಕ್ರೇನ್ ಬಳಸಿ ..ಅದನ್ನು ಎತ್ತಿ ಕ್ರಾಲ್ ಬಳಿ ಹಾಕಲು ಆನೆ ಸಿಬ್ಬಂದಿಗಳಿಗೆ ಎರಡು ಗಂಟೆಯ ಕಾಲಾವಕಾಶ ಬೇಕಾಯಿತು ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲದಿದ್ದರೂ, ಮಾವುತ ಕಾವಾಡಿಗಳು ಟಾರ್ಚ್ ಬಳಸಿಯೇ...ಕಾಡಾನೆಯನ್ನು ಕ್ರಾಲ್ ಗೆ ತಳ್ಳಿದರು. ನಂತರ ಕಾಡಾನೆ ಖೆಡ್ಡಾದಲ್ಲಿ ಬಂಧಿಯಾಯ್ತು. ಬಿಜಾರಕ್ಕೆ ಹೊಸ ಅತಿಥಿಯ ಆಗಮನವಾಗಿರುವುದು ಸಿಬ್ಬಂದಿಗಳಿಗೆ ಸಂತಸ ಮೂಡಿಸಿದೆ.