ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಎನ್ ಎ ಇ ವಿದ್ಯಾಲಯದಲ್ಲಿ 500 ಮೀಟರ್ ತ್ರಿವರ್ಣ ದ್ವಜದ ಮೆರವಣಿಗೆ

Flagahtahan, Adichunchanagiri

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಎನ್ ಎ ಇ ವಿದ್ಯಾಲಯದಲ್ಲಿ 500 ಮೀಟರ್ ತ್ರಿವರ್ಣ ದ್ವಜದ ಮೆರವಣಿಗೆ

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ 50ನೇ ವರ್ಷದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಫ್ಲಾಗಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 15ರ ಸ್ವತಂತ್ರ ದಿನದಂದು ಭದ್ರಾವತಿಯ ಕಾರೇಹಳ್ಳಿಯ ಎಸ್ ಎ ಇ ವಿದ್ಯಾಲಯದಲ್ಲಿ FLAGATHON (ಫ್ಲಾಗಥಾನ್) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  500 ಮೀಟರ್ ನ  ಭಾರತದ ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದು ವಿದ್ಯಾರ್ಥಿಗಳು ಶಾಲೆಯ ಆಡಳಿತ ವರ್ಗದವರು, ಶಿಕ್ಷಕರು, ಸಿಬ್ಬಂದಿವರ್ಗದವರು, ಶಾಲೆಯ ಹಳೆ ವಿದ್ಯಾರ್ಥಿಗಳು  ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಾರಂದೂರಿನಿಂದ ಶುರುವಾದ ದ್ವಜ ಮೆರವಣಿಗೆ  ಕೆಂಪೇಗೌಡ ನಗರ, ಕಾರೇಹಳ್ಳಿ, ಬೊಮ್ಮೇನಹಳ್ಳಿ  ಮಾರ್ಗವಾಗಿ ಎಸ್ ಎ ಇ ವಿದ್ಯಾಲಯವನ್ನು ತಲುಪಿತು. ಮಾರ್ಗ ಮಧ್ಯೆ ಸಾಗುವಾಗ ಬಾರಂದೂರಿನ ಗ್ರಾಮಸ್ಥರು, ಕೆಂಪೇಗೌಡ ನಗರದ ಗ್ರಾಮಸ್ಥರು, ಕಾರೇಹಳ್ಳಿ ಹಾಗೂ ಬೊಮ್ಮೇನಹಳ್ಳಿ ಗ್ರಾಮಸ್ಥರು ಭಾರತ ಮಾತೆಗೆ ಪೂಜೆಯನ್ನು ಮಾಡಿ ಪುಷ್ಪಾರ್ಚನೆಯನ್ನು ಸಲ್ಲಿಸುವುದರ ಮೂಲಕ ಗೌರವವನ್ನು ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಕಾರ್ಯದರ್ಶಿಗಳಾಗಿರುವ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಕಾರೇಹಳ್ಳಿ ಶಾಖ ಮಠದ ಶ್ರೀ ವಿಶ್ವದೇವಾನಂದಪುರಿ ಸ್ವಾಮೀಜಿಗಳು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಭದ್ರಾವತಿ ಇದರ ಆಡಳಿತ ಅಧಿಕಾರಿಗಳಾದ ಜಗದೀಶ ಬಿ ಹಾಗೂ ಭದ್ರಾವತಿ ಕಾಗದನಗರದ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಕವಿತಾ ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪನವರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.