ಮುಂಗಾರು ಆಗಮನಿಸುತ್ತಿರುವ ಹಿನ್ನೆಲೆ ಅಡಿಕೆ ಬೆಳೆಗಾರರಿಗೆ ಮುಂಜಾಗ್ರತೆಯ ಸಲಹೆ ನೀಡಿದ ತೋಟಗಾರಿಕೆ ಇಲಾಖೆ ! ಏನದು ವಿವರ ಇಲ್ಲಿದೆ

With the onset of monsoon, the horticulture department has issued an advisory to arecanut growers to take precautionary measures against leaf spot disease.

ಮುಂಗಾರು ಆಗಮನಿಸುತ್ತಿರುವ ಹಿನ್ನೆಲೆ ಅಡಿಕೆ ಬೆಳೆಗಾರರಿಗೆ  ಮುಂಜಾಗ್ರತೆಯ ಸಲಹೆ ನೀಡಿದ ತೋಟಗಾರಿಕೆ ಇಲಾಖೆ ! ಏನದು ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯಲ್ಲಿ  ಮುಂಗಾರು ಆರಂಭವಾಗುವ ಹಂತದಲ್ಲಿರುವುದರಿಂದ ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾದಲ್ಲಿ ಎಲೆಚುಕ್ಕೆ ರೋಗ (leaf spot disease) ಉಲ್ಬಣವಾಗುವ ಸಂಭವವಿರುತ್ತದೆ. ಹೀಗಾಗಿ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರೈತರು ಈ ಕೆಳಕಂಡ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಕೋರಿದೆ.

ನಿರ್ವಹಣೆ ಕ್ರಮಗಳು: ele chukke roga

ಅಡಿಕೆ ತೋಟಗಳಲ್ಲಿ ಕಳೆದ ಬಾರಿಯ ರೋಗಬಾಧಿತ ಒಣಗಿರುವ ಮತ್ತು ಹಳದಿಯಾಗಿರುವ ಗರಿಗಳನ್ನು ತೆಗೆದು ರಾಶಿಹಾಕಿ ಸುಡುವುದರಿಂದ ಸೋಂಕು ಕಡಿಮೆಗೊಳಿಸಬಹುದಾಗಿದೆ. ಮುಂಗಾರು ಪ್ರಾರಂಭದಲ್ಲಿ ಅಡಿಕೆ ಗೊನೆಗಳಿಗೆ ಜೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ ಎಲೆಗಳಿಗೂ ಸಿಂಪರಣೆ ಮಾಡಬೇಕು. 

 

ಹೆಚ್ಚು ಬಾಧೆಯಿರುವ ತೋಟಗಳಲ್ಲಿ ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಇಲ್ಲದಾಗ ಪ್ರೋಪಿಕೋನಝೋಲ್ (Propiconazole 25, EC) ಶಿಲೀಂದ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿ ಲೀಟರ್ ಪ್ರಮಾಣದಂತೆ ಎಲೆಗಳಿಗೆ ಸಿಂಪಡಣೆ ಮಾಡಬೇಕು. 

 

ಎರಡನೇ ಸಿಂಪಡಣೆಗೆ ಕಾರ್ಬರ್ಬೆನ್ಡಜಿಮ್ 12% + ಮ್ಯಾಂಕೋಜೆಟ್ 63% + (ಒಂದು ಲೀಟರ್ ನೀರಿಗೆ ಎರಡು ಗ್ರಾಂ) ಅಥವಾ ಅಂರ್ತವ್ಯಾಪಿ ಶಿಲೀಂದ್ರನಾಶಕಗಳಾದ ಹೆಕ್ಸಾಕೊನಝೋಲ್ (Hexaconazole 5 %) ಅಥವಾ ಟೆಬುಕೊನಝೋಲ್ (Tebuconazole, 38.9 %) ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿ ಲೀಟರ್ ಪ್ರಮಾಣದಂತೆ ಬಳಸಬಹುದು. 

 

ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ನೀಡುವುದೊಳಿತು. ಸಾಮಾನ್ಯವಾಗಿ, ಅಡಿಕೆ ಮರಕ್ಕೆ 12 ಕಿಲೋಗ್ರಾಂ ಹಟ್ಟಿಗೊಬ್ಬರ ಮತ್ತು ಹಸಿರೆಲೆ, ಯೂರಿಯ (220 ಗ್ರಾಂ), ರಾಕ್ ಫಾಸ್ಫೇಟ್ (200 ಗ್ರಾಂ) ಮತ್ತು ಪೋಟಾಷ್ (240-350 ಗ್ರಾಂ) ನೀಡಬೇಕು. 

 

ರಸಗೊಬ್ಬರಗಳನ್ನು ಕನಿಷ್ಟ ಎರಡು ಕಂತುಗಳಲ್ಲಿ ನೀಡಬೇಕು. ಜೊತೆಗೆ ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಕೂಡ ನೀಡಬಹುದು. 

 

ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ. ಹಾಗಾಗಿ ರೋಗ ಪೀಡಿತ ಅಡಿಕೆ ಸಸಿಗಳನ್ನು ರೋಗವಿಲ್ಲದ ಪ್ರದೇಶಕ್ಕೆ ಸಾಗಿಸದಿರುವುದು ಮತ್ತು ಸಮುದಾಯ ಮಟ್ಟದ ರೋಗ ನಿಯಂತ್ರಣ ಬಹು ಮುಖ್ಯವಾಗುತ್ತವೆ.

 

ಹೆಚ್ಚಿನ ಮಾಹಿತಿಗಾಗಿ, ರೈತರುಗಳು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಅಥವಾ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯ ಪಡೆಯಬಹುದಾಗಿದೆ.
ರಾಂಗ್​ ಸೈಡ್​ನಲ್ಲಿ ವಾಹನ ಓಡಿಸಬೇಡಿ! ಭೀಕರ ಆಕ್ಸಿಡೆಂಟ್​ನ ಸಾಕ್ಷಿ ತೋರಿಸ್ತಿದೆ ನೋಡಿ ಸಿಸಿಟಿವಿ

 

ಶಿವಮೊಗ್ಗ ನಗರದ  ಪೆಸಿಟ್​ ಕಾಲೇಜು ಬಳಿಯಲ್ಲಿ ಸಂಭವಿಸಿದ ಅಪಘಾತದ ಸಿಸಿಟಿವಿ ದೃಶ್ಯವೊಂದು ಲಭ್ಯವಾಗಿದ್ದು, ರಾಂಗ್​ ಸೈಡ್​ನಲ್ಲಿ ವಾಹನ ಓಡಿಸುವುದು ಎಷ್ಟೊಂದು ಅಪಾಯಕಾರಿ ಎನ್ನುವುದಕ್ಕೆ ಸಾಕ್ಷಿಯಾಗಿದೆ. 

ನಡೆದಿದ್ದೇನು?

ಕಳೆದ ಜೂನ್ 5 ರಂದು ಈ ಘಟನೆ ಸಂಭವಿಸಿದ್ದು, ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಇನ್ನೋವ್ಹಾ ಕಾರಿಗೆ ಬೈಕ್​ವೊಂದು ಡಿಕ್ಕಿಯಾಗಿತ್ತು. ಘಟನೆಗೆ ಆ ಸಂದರ್ಭದಲ್ಲಿ ಕಾರಣ ಸ್ಪಷ್ಟವಾಗಿರಲಿಲ್ಲ. ಘಟನೆಯಲ್ಲಿ ಸಾಗರ ತಾಲ್ಲೂಕಿನ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಬೈಕ್​ ಜಖಂ ಆಗಿತ್ತಷ್ಟೆ ಅಲ್ಲದೆ ಕಾರಿಗೂ ಹಾನಿಯಾಗಿತ್ತು. ಇನ್ನೂ ಘಟನೆಯ ದೃಸ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದ್ದು, ಅದರಲ್ಲಿ  ರಾಂಗ್​ ಸೈಡ್​ನಲ್ಲಿ ಬಂದು ಬೈಕ್​ ಸವಾರ ಕಾರಿಗೆ ಡಿಕ್ಕಿ ಹೊಡೆದಿರವುದು ಕಾಣುತ್ತಿದೆ. ಸದ್ಯ ಈ ದೃಶ್ಯ ಮೊಬೈಲ್​ಗಳಲ್ಲಿ ಹರಿದಾಡುತ್ತಿದ್ದು, ಘಟನೆ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

 


ಶಿವಮೊಗ್ಗ-ಬೆಂಗಳೂರು ರೈಲ್ವೆ ಪ್ರಯಾಣದ ಸಮಯ ಕಡಿಮೆಯಾಗಬಹುದು! ಕಾರಣವೇನು ಗೊತ್ತಾ? ಸಾರ್ವಜನಿಕರಿಗೆ ರೈಲ್ವೆ ಇಲಾಖೆ ನೀಡಿದೆ ಎಚ್ಚರಿಕೆ!? ಏನದು? ವಿವರ ಓದಿ

ರೈಲ್ವೆ ಪ್ರಯಾಣಿಕರಿಗೆ , ಭಾರತೀಯ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಇದೇ ಜೂನ್ 17 ರಂದು  ಶಿವಮೊಗ್ಗಕ್ಕೆ  ಮೊದಲ  ವಿದ್ಯುತ್‌ ಚಾಲಿತ ರೈಲು ಆಗಮಿಸುತ್ತಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 

 

ಬೀರೂರು ಮತ್ತು ಶಿವಮೊಗ್ಗ ಮಾರ್ಗವು ಆರು ತಿಂಗಳ ಹಿಂದೆಯೇ ವಿದ್ಯುದೀಕರಣಗೊಂಡಿತ್ತು. ಆದರೆ   ವಿಧಾನಸಭಾ ಚುನಾವಣೆ ಬಂದ ಹಿನ್ನೆಲೆ ವಿದ್ಯುತ್‌ ಚಾಲಿತ ಹೊಸ ರೈಲುಗಳ ಸಂಚಾರ ಆರಂಭವಾಗಿರಲಿಲ್ಲ. ಇದೀಗ  ಶಿವಮೊಗ್ಗಕ್ಕೆ ಮೂರು - ವಿದ್ಯುತ್‌ ಚಾಲಿತ ರೈಲುಗಳನ್ನು ಮಂಜೂರು ಮಾಡಲಾಗಿದೆ.ಈಗಾಗಲೇ ಸಂಚರಿಸುತ್ತಿರುವ 3 - ರೈಲುಗಳಿಗೆ ಡೀಸಲ್ ಇಂಜಿನ್ ಬದಲಾಗಿ ವಿದ್ಯುತ್‌ ಚಾಲಿತ - ಎಂಜಿನ್‌ಗಳನ್ನು ಅಳವಡಿಸಲಾಗುತ್ತಿದೆ. 

ಯಾವ್ಯಾವ ಟ್ರೈನ್​ 

 

 

ಸಾರ್ವಜನಿಕರಿಗೆ ಎಚ್ಚರಿಕೆ 

ಇನ್ನೂ ವಿದ್ಯುತ್ ಚಾಲಿತ ರೈಲುಗಳ ಸಂಚಾರಕ್ಕಾಗಿ ಬೀರೂರು-ಶಿವಮೊಗ್ಗ ರೈಲು ಮಾರ್ಗಕ್ಕೆ ಅಳವಡಿಸಿರುವ ವಿದ್ಯುತ್‌ ಮಾರ್ಗವನ್ನು ಈಗಾಗಲೇ ಚಾಲನೆಗೊಳಿಸಲಾಗಿದೆ. ವಿದ್ಯುತ್ ಚಾಲಿತ ರೈಲುಗಳ ಪರೀಕ್ಷಾರ್ಥ ಚಾಲನೆ ಸಹ ನಡೆಯುತ್ತಿದೆ. ವಿದ್ಯುತ್‌ ಮಾರ್ಗದಲ್ಲಿ 25 ಸಾವಿರ ಕೆ.ವಿ. ವಿದ್ಯುತ್‌ ಹರಿಯುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ. 

 

ರೈಲು ಮಾರ್ಗದ ಮೇಲೆ ಸಂಚರಿಸುವುದು, ರೈಲು ಮಾರ್ಗದ ಸಮೀಪದಲ್ಲಿ ಮರಗಳ ರೆಂಬೆ ಕೊಂಬೆಗಳನ್ನು ಕಡಿಯುವುದು, ತಂತಿ, ಹಸಿ ಕೋಲುಗಳನ್ನು ಎಸೆಯುವುದು, ವಿದ್ಯುತ್ ಕಂಬಗಳು, ಟಿಸಿಗಳ ಸಮೀಪ ಹೋಗುವುದು ಅಪಾಯಕಾರಿ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.