#SAVEVISL : ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿ ಹೋರಾಟ: ಸಂಸದ ಬಿ.ವೈ. ರಾಘವೇಂದ್ರರವರ ಮಹತ್ವದ ಮಾತು

#SAVEVISL: Save Bhadravathi VISL Factory Campaign MP B.Y. Raghavendra's Statement

#SAVEVISL : ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿ ಹೋರಾಟ: ಸಂಸದ ಬಿ.ವೈ. ರಾಘವೇಂದ್ರರವರ ಮಹತ್ವದ ಮಾತು
#SAVEVISL : ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿ ಹೋರಾಟ: ಸಂಸದ ಬಿ.ವೈ. ರಾಘವೇಂದ್ರರವರ ಮಹತ್ವದ ಮಾತು

#SAVEVISL ಭದ್ರಾವತಿಯಲ್ಲಿ ನಡೆಯುತ್ತಿರುವ ಸೇವ್​ ವಿಐಎಸ್​ಎಲ್​(#savevisl) ಪ್ರತಿಭಟನೆ ಸಂಬಂಧ ಇವತ್ತು ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಮಾತನಾಡಿದ್ದಾರೆ. ಇದುವರೆಗೂ ಅಧಿಕೃತವಾಗಿ ಕಾರ್ಖಾನೆಯನ್ನು ಮುಚ್ಚುವ ಆದೇಶ ಬಂದಿಲ್ಲ ಎಂದ ಅವರು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನೌಕರರ ಜೊತೆಗೆ ನಾನು ಸಹ ನಿಲ್ಲುತ್ತೇನೆ ಎಂದಿದ್ದಾರೆ.  

*ಯುವತಿ ಮೇಲೆ ಲೈಂಗಿಕ ದೌರ್ಜನ್ಯ! ತೀರ್ಥಹಳ್ಳಿ ಯುವಕನಿಗೆ 10 ವರ್ಷ ಶಿಕ್ಷೆ ,57 ಸಾವಿರ ದಂಡ*

ಭದ್ರಾವತಿಯ ವಿಐಎಸ್ಎಲ್ ಹಾಗೂ ಎಂಪಿಎಂ ವಿಷಯ ಅನೇಕ ವರ್ಷದಿಂದ ಚರ್ಚೆಯಲ್ಲಿದೆ, ಮುಚ್ಚುವ ಸ್ಥಿತಿಯಲ್ಲಿದ್ದ ಅವುಗಳನ್ನು ಉಳಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಮತ್ತು ಸಂಘಟನೆ ಮಾಡಿದೆ, ವಿಐಎಸ್ಎಲ್ ಕಾರ್ಖಾನೆ ನಡೆಸುವ ಪ್ರಯತ್ನ ರಾಜ್ಯ ಸರ್ಕಾರ  ನಡೆಸಿದರೂ ಸಫಲವಾಗಲಿಲ್ಲ  ವಿಐಎಸ್ ಎಲ್ ಕಾರ್ಖಾನೆಯನ್ನು ಯುಪಿಎ ಆಡಳಿತದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮುನ್ನೆಡೆಸುವ ಯತ್ನ ನಡೆದು ಅದಕ್ಕೆ ವಿರೋಧ ವ್ಯಕ್ತವಾಯಿತು.

TODAY NEWS : ಜನವರಿ 30 ಕ್ಕೆ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ ಇಲ್ಲಿದೆ! ಇವತ್ತಿನ ಇನ್ನಷ್ಟು ಸುದ್ದಿಗಳು ಇಲ್ಲಿವೆ

*#SAVEVISL : ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಫ್ಯಾಕ್ಟರಿ ಉಳಿಸಲು ಧರಣಿ ಕುಳಿತ ವಿನಯ್ ಗುರೂಜಿ!| ಭದ್ರಾವತಿಯಲ್ಲಿ ಭುಗಿಲೆದ್ದ ಹೋರಾಟ*

ನಂತರ ಈಗಿನ ಸರ್ಕಾರ ಖಾಸಗಿಯವರಿಂದ ಟೆಂಡರ್ ಆಹ್ವಾನಿಸಿದರೂ ಪ್ರಯೋಜನವಾಗಲಿಲ್ಲ 2019 ರಿಂದ 2022ರ ತನಕ ಎರಡೆರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆದರೂ ವಿಫಲವಾಯಿತು. ಇನ್ನು ಕೇಂದ್ರ ಉಕ್ಕು ಖಾತೆ ಸಚಿವರನ್ನು ಕಾರ್ಖಾನೆಗೆ ಕರೆದುಕೊಂಡು ಬಂದು ವಿಐಎಸ್ಎಲ್ ಉಳಿಸುವ ಪ್ರಯತ್ನ ಸಹ ಕೈಗೊಳ್ಳಲಾಯ್ತು.  ಬಂಡವಾಳ ಹಿಂತೆಗೆತ VISLಗೆ ಮಾತ್ರ ಸೀಮಿತವಲ್ಲ  2018-19 ರಲ್ಲಿ 28 ಹಾಗೂ 2019-20 ರಲ್ಲಿ 15 ಹಾಗೂ 2020-21 ರಲ್ಲಿ 18, 2022-23 ರಲ್ಲಿ 8 ಕಾರ್ಖಾನೆಯಿಂದ ತನ್ನ ಪಾಲಿನ ಶೇರುಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಇನ್ನೂ ಕೇಂದ್ರದ ಸೇಲ್ ಗೆ ವಹಿಸಿದರೂ VISLನ ನಷ್ಟದ ಪ್ರಮಾಣ ತಗ್ಗಲಿಲ್ಲ. ಆದಾಗ್ಯೂ ಕಾರ್ಖಾನೆಯ ಕೆಲ ವಿಭಾಗಗಳನ್ನು ಉಳಿಸುವ ಕೆಲಸ ಮಾಡಲಾಯ್ತು,  ಇದರ ಪರಿಣಾಮ ಕಾರ್ಖಾನೆಯ ಕೆಲ ವಿಭಾಗದಲ್ಲಿ ಉತ್ಪಾದನೆ ನಡೆದಿತ್ತು, ಒಟ್ಟಾರೆ ಯಾರಾದರೂ ಖಾಸಗಿಯವರು ಮುಂದೆ ಬಂದರೆ ಈಗಿರುವ ಗುತ್ತಿಗೆ ನೌಕರರು ಮುಂದುವರಿಯುವ ಸಾಧ್ಯತೆ ಇದೆ ರಾಜಕೀಯವಾಗಿ ಭದ್ರಾವತಿಯಲ್ಲಿ ನಮಗೆ ಹಿನ್ನಡೆಯಾದರೂ ಬೇರೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದೆ ಹಾಗಾಗಿ ಜನರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ರು.

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com