ಶಿವಮೊಗ್ಗದ ಮಹಾವೀರ ಸರ್ಕಲ್​ನಲ್ಲಿ ಜಿಲ್ಲಾ ಕಾಂಗ್ರೆಸ್​ನಿಂದ ಜೋರು ಪ್ರತಿಭಟನೆ

Loud protest by District Congress in Shimoga's Mahaveera Circle

ಶಿವಮೊಗ್ಗದ ಮಹಾವೀರ ಸರ್ಕಲ್​ನಲ್ಲಿ ಜಿಲ್ಲಾ ಕಾಂಗ್ರೆಸ್​ನಿಂದ ಜೋರು ಪ್ರತಿಭಟನೆ

SHIVAMOGGA  |  Dec 22, 2023  |   ಶಿವಮೊಗ್ಗ : ಲೋಕಸಭೆ ಮತ್ತು ರಾಜ್ಯ ಸಭೆಯ ಎರಡೂ ಸದನದ 142 ಸದಸ್ಯರನ್ನ ಅಮಾನತ್ತು ಮಾಡಿರುವ ನಿರ್ಧಾರ ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್  ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.. 

ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು  ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಕೇಂದ್ರ ಬಿಜೆಪಿ ಸರ್ಕಾರ ಹಿಟ್ಲರ್ ರೀತಿಯಲ್ಲಿ ವರ್ತಿಸುತ್ತಿದ್ದು,  ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ರು.  ಇತಿಹಾಸದಲ್ಲಿಯೇ ಎಂದಿಗೂ ಈ ರೀತಿ ಆಗಿರಲಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

READ : ತಿಂಗಳಿಗೆ ಆರು ಸಾವಿರ ರೂಪಾಯಿ ಶಿಷ್ಯವೇತನದ ಜೊತೆಗೆ ಸಿಗಲಿದೆ ಮಸಾಜಿಸ್ಟ್ ತರಬೇತಿ! ವಿವರ ಇಲ್ಲಿದೆ

ಇನ್ನೂ ಮಹಾವೀರ ವೃತ್ತದ ಬಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಪಕ್ಷದ ಬಾವುಟ, ಪ್ರಧಾನಿ ಮೋದಿ ಸರ್ವಾಧಿಕಾರಿ, ಪ್ರಜಾಪ್ರಭುತ್ವದ ಕಗ್ಗೋಲೆ ಎಂಬ ಪ್ಲೇಕಾರ್ಡ್ ಮತ್ತು ಬ್ಯಾನರ್ ಹಿಡಿದು ಧರಣಿ ನಡೆಸಿದ್ರು. 

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಸದಸನದಲ್ಲಿ ಆಗುಂತುಕರಿಗೆ ಪಾಸ್ ಕೊಟ್ಟ ಸಂಸದ ಪ್ರತಾಪ್ ಸಿಂಹರ ವಿರುದ್ಧ ಕ್ರಮ ತೆಗೆದುಕೊಳ್ಳದ ಬಿಜೆಪಿ 142 ಜನರನ್ನ ಅಮಾನತ್ತುಗೊಳಿಸಿ ಪ್ರಜಾಪ್ರಭುತ್ವವನ್ನ ಕಗ್ಗೋಲೆ ಮಾಡಿದೆ ಎಂದು ಆರೋಪಿಸಿದ್ರು.