ಅನೈತಿಕ ಸಂಬಂಧ | ಗೃಹಿಣಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವಿವಾಹಿತ ವ್ಯಕ್ತಿ

One 307 case reported in tunga nagar ps limits

ಅನೈತಿಕ ಸಂಬಂಧ | ಗೃಹಿಣಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವಿವಾಹಿತ ವ್ಯಕ್ತಿ
307 case , tunga nagar ps limits

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆʼ 

ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯ ಲಿಮಿಟ್ಸ್‌ನಲ್ಲಿ ಅನೈತಿಕ ಸಂಬಂಧ ಕಾರಣಕ್ಕೆ ಜಗಳ ನಡೆದು ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಎಸ್‌ಪಿ ಮಿಥುನ್‌ ಕುಮಾರ್‌ ಮಾಧ್ಯಮಗಳ ವಾಟ್ಸಾಪ್‌ ಗ್ರೂಪ್‌ನಲ್ಲಿ ಮಾಹಿತಿ ನೀಡಿದ್ದಾರೆ. 

ಎಸ್‌ಪಿಯವರು ನೀಡಿರುವ ಮಾಹಿತಿಯನ್ನು ಗಮನಿಸುವುದಾದರೆ, ತುಂಗಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 35 ವರ್ಷದ ಗೃಹಿಣಿಯೊಬ್ಬರು ವಾಸಿಸುತ್ತಿದ್ದರು. ಅವರೊಂದಿಗೆ ವಿವಾಹಿತ 35 ವರ್ಷದ ಶಿವಾನಾಯ್ಕ ಸಂಬಂಧ ಹೊಂದಿದ್ದ. ಇಬ್ಬರ ನಡುವಿನ ಅನೈತಿಕ ಸಂಬಂಧ ಮುಂದುವರೆದಿದ್ದು, ಇವತ್ತು ಆಕೆಯ ಮನೆಗೆ ತೆರಳಿದ್ದ ಶಿವಾನಾಯ್ಕ ಚೂಪಾದ ಮಾರಕಾಸ್ತ್ರವೊಂದರಿಂದ ಆಕೆಯ ಕುತ್ತಿಗೆಗೆ ಬಳಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ  ಐಪಿಸಿ 307 ಅಡಿಯಲ್ಲಿ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. 

 One 307 case reported in thunganagar ps limits..