ಶಿವಮೊಗ್ಗ-ಭದ್ರಾವತಿ | ಒಂದೇ ದಿನ ನಡೆಯಿತು ಮೂರು ಅಪರಾಧ | ಸಣ್ಣ ಕಾರಣಕ್ಕೆ ಏನಿದೆಲ್ಲಾ?

Three crime incidents occurred in Shivamogga district, Karnataka, today.

ಶಿವಮೊಗ್ಗ-ಭದ್ರಾವತಿ | ಒಂದೇ ದಿನ ನಡೆಯಿತು ಮೂರು ಅಪರಾಧ | ಸಣ್ಣ ಕಾರಣಕ್ಕೆ ಏನಿದೆಲ್ಲಾ?
Shivamogga district, Karnataka, today

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆ

ಶಿವಮೊಗ್ಗದಲ್ಲಿ ಒಂದೇ ದಿನ ಮೂರು ಕ್ರೈಂ ಘಟನೆಗಳು ನಡೆದಿವೆ. ಒಂದು ಘಟನೆ ಭದ್ರಾವತಿಯಲ್ಲಿ ನಡೆದಿದ್ದರೇ ಇನ್ನೆರಡು ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಮಟನ್ ಶಾಪ್ ನಲ್ಲಿ ಅಪ್ರಾಪ್ತ ನಿಂದ ಮಚ್ಚು ಬೀಸಿ ಹಲ್ಲೆ 

ಇನ್ನು ಮಟನ್ ಅಂಗಡಿಯಲ್ಲಿ ಮಟನ್ ಗೆ ಹೆಚ್ಚಿನ ಎಲುಬು ಇರುವುದನ್ನು ಪ್ರಶ್ನಿಸಿದ ಗ್ರಾಹಕನಿಗೆ ಅನ್ಯಕೋಮಿನ ಅಪ್ರಾಪ್ತ ಯುವಕ ಹಲ್ಲೆ ಮಾಡಿದ ಘಟನೆ  ಇಂದು ನಡೆದಿದೆ. ಮಲ್ಲೇಶ್(40)  ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ.  ಮಲ್ಲೇಶ್  ಗಾಡಿಕೊಪ್ಪದ ನಿವಾಸಿಯಾಗಿದ್ದು ಟುಪ್ಪು ನಗಜಲ್ಲಿರುವ ಮಟನ್ ಅಂಗಡಿಗೆ ಮಾಂಸ ಕೊಳ್ಳಲು ಹೋಗಿದ್ದಾರೆ. ಮಾಂಸದಂಗಡಿಯಲ್ಲಿ ಮಾಲೀಕನ ಮಗನಿದ್ದ., ಆತ ಕಟ್ ಮಾಡಿದ ಮಾಂಸದಲ್ಲಿ ಎಲುಬು ಜಾಸ್ತಿ ಇದ್ದದ್ದನ್ನು ಮಲ್ಲೇಶ್ ತೆಗೆಯುವಂತೆ ಹೇಳಿದ್ದಾನೆ. ಅಲ್ಲದೆ ಮಾಲೀಕನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ ಇದರಿಂದ ಕೆರಳಿದ ಮಾಲೀಕನ ಮಗ, ಮಲ್ಲೇಶೇ  ಮಟನ್ ಕತ್ತರಿಸುವ ಚಾಕುವಿನಿಂದಲೇ ಕುತ್ತಿಗೆ ಮೇಲೆ ಹಲ್ಲೆ ಮಾಡಿದ್ದಾನೆ., ರಕ್ತದ ಮಡುವಿನಲ್ಲಿದ್ದ ಮಲ್ಲೇಶ್ ನನ್ನು ನಂತರ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಆರೋಪಿಯನ್ನು ಬಂಧಿಸಿದ್ದಾರೆ.

ನಾಯಿಯನ್ನ ಕಡಿಯಲು ಹೋದವ ಅಜ್ಜಿಯನ್ನ ಕೊಂದ 

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಯುವಕನೊಬ್ಬ ನಾಯಿಯನ್ನು ಕೊಲ್ಲಲು ಮಚ್ಚು ಎತ್ತಿಕೊಂಡ..ಈತನ ಮಚ್ಚಿನೇಟಿಗೆ ನಾಯಿ ಸಿಗಲಿಲ್ಲ. ಇದರ ಬೆನ್ನಲ್ಲೆ ಆತ ಎದುರುಗಡೆ ಮನೆಯ ಅಜ್ಜಿಯನ್ನೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆಯೊಂದು ಭದ್ರಾವತಿಯಲ್ಲಿ ನಡೆದಿದೆ.  ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮದಲ್ಲಿ ಮಾನಸಿಕ ಸ್ಥಿಮಿತಕಳೆದೊಂಡಿರುವ ಮಂಜುನಾಥ ಎಂಬ ಯುವಕ ಎದುರು ಮನೆಯ ಅಜ್ಜಿಯನ್ನೇ ಕೊಂದಿರುವ ಆರೋಪಿ. 

ಅನೈತಿಕ ಸಂಬಂಧ , ಗೃಹಿಣಿ ಮೇಲೆ ಹಲ್ಲೆ 

ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯ ಲಿಮಿಟ್ಸ್‌ನಲ್ಲಿ ಅನೈತಿಕ ಸಂಬಂಧ ಕಾರಣಕ್ಕೆ ಜಗಳ ನಡೆದು ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಎಸ್‌ಪಿ ಮಿಥುನ್‌ ಕುಮಾರ್‌ ಮಾಧ್ಯಮಗಳ ವಾಟ್ಸಾಪ್‌ ಗ್ರೂಪ್‌ನಲ್ಲಿ ಮಾಹಿತಿ ನೀಡಿದ್ದಾರೆ. 

ಎಸ್‌ಪಿಯವರು ನೀಡಿರುವ ಮಾಹಿತಿಯನ್ನು ಗಮನಿಸುವುದಾದರೆ, ತುಂಗಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 35 ವರ್ಷದ ಗೃಹಿಣಿಯೊಬ್ಬರು ವಾಸಿಸುತ್ತಿದ್ದರು. ಅವರೊಂದಿಗೆ ವಿವಾಹಿತ 35 ವರ್ಷದ ಶಿವಾನಾಯ್ಕ ಸಂಬಂಧ ಹೊಂದಿದ್ದ. ಇಬ್ಬರ ನಡುವಿನ ಅನೈತಿಕ ಸಂಬಂಧ ಮುಂದುವರೆದಿದ್ದು, ಇವತ್ತು ಆಕೆಯ ಮನೆಗೆ ತೆರಳಿದ್ದ ಶಿವಾನಾಯ್ಕ ಚೂಪಾದ ಮಾರಕಾಸ್ತ್ರವೊಂದರಿಂದ ಆಕೆಯ ಕುತ್ತಿಗೆಗೆ ಬಳಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ  ಐಪಿಸಿ 307 ಅಡಿಯಲ್ಲಿ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. Three crime incidents occurred in Shivamogga district, Karnataka, today.