ಒಂದೆ ಕುಟುಂಬದ ನಾಲ್ವರ ಕೊಲೆ! ಆಸ್ತಿಗಾಗಿ ಅಮಾನುಷ ಕೃತ್ಯ

Four members of a family were murdered! Inhuman act for property

ಒಂದೆ ಕುಟುಂಬದ ನಾಲ್ವರ ಕೊಲೆ! ಆಸ್ತಿಗಾಗಿ ಅಮಾನುಷ ಕೃತ್ಯ

 MALENADUTODAY.COM |  #KANNADANEWSWEB

ಭಟ್ಕಳ ತಾಲ್ಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕಾಗಿ ನಿನ್ನೆ ಶುಕ್ರವಾರ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಹಾಡುವಳ್ಳಿ ಓಣಿಬಾಗಿಲು ನಿವಾಸಿ ಶಂಭು ಭಟ್ (70), ಅವರ ಪತ್ನಿ ಮಾದೇವಿ ಭಟ್ (60), ಅವರ ಮಗ ರಾಘು (ರಾಜು ಭಟ್) (40) ಹಾಗೂ ಸೊಸೆ ಕುಸುಮಾ ಭಟ್ (35) ಕೊಲೆಯಾದವರು, 

READ | ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿನ ಬಜೆಟ್ ಸಭೆಯಲ್ಲಿ ಕನ್ನಡಿಯೊಳಗಿನ ಗಂಟಿನ ಕಲಹ! ಏನಿದು? ವಿಡಿಯೋ ಸ್ಟೋರಿ ಇಲ್ಲಿದೆ

ಕುಟುಂಬದ ಸಂಬಂಧಿ ವಿನಯ ಶ್ರೀಧರ ಭಟ್ ಕತ್ತಿಯಿಂದ ಹಲ್ಲೆ ಮಾಡಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. 'ಕಳೆದ ಏಳು ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದರಂತೆ. 

READ |ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರವರನ್ನ ಹಾಡಿ ಹೊಗಳಿಗೆ ಪ್ರಧಾನಿ ನರೇಂದ್ರ ಮೋದಿ! ಕಾರಣವೇನು? ವರದಿ ಇಲ್ಲಿದೆ

ಬಳಿಕ ಅವರ ಪತ್ನಿ ವಿದ್ಯಾಭಟ್​ಗೆ ಆಸ್ತಿಯಲ್ಲಿ ಪಾಲು ಕೊಡುವ ವಿಚಾರಕ್ಕೆ ಜಗಳ ನಡೆದಿತ್ತು ಎನ್ನಲಾಗುತ್ತಿದೆ. ನಂತರ ರಾಜಿ ಪಂಚಾಯ್ತಿ ನಡೆದು ಆಕೆಗೆ ಆಸ್ತಿ ಪಾಲು ಕೊಟ್ಟಿದ್ದರು. ಆ ಆಸ್ತಿಯನ್ನು ವಿದ್ಯಾ ಭಟ್​ರ ಸಹೋದರ ನೋಡಿಕೊಳ್ಳುತ್ತಿದ್ದರು. ಇದೀಗ ಈತನೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನೂ ಇಡೀ ಕುಟುಂಬಸ್ಥರನ್ನ ಕೊಲೆ ಮಾಡುವ ಉದ್ದೇಶ ಹೊಂದಿರುವ ಸಾಧ್ಯತೆ ಇದ್ದು, ಅದೃಷ್ಟಕ್ಕೆ ಹತ್ತು ವರ್ಷದ ಮಗುವೊಂದು ಪಕ್ಕದ ಮನೆಯಲ್ಲಿದ್ದಿದ್ದರಿಂಧ ಬಚಾವ್ ಆಗಿದೆ. ಅಲ್ಲದೆ ಇನ್ನೊಂದು ಮಗು ಮನೆಯಲ್ಲಿಯೇ ಮಲಗಿತ್ತು. ಹೀಗಾಗಿ ಬಚಾವ್ ಆಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. 

 HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga