KARNATAKA NEWS/ ONLINE / Malenadu today/ May 31, 2023 SHIVAMOGGA NEWS
ಬೆಳಗಾವಿ/ (viral video karnataka)ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವುಗಳು ಮನೆ ಬದಿಯಲ್ಲಿ ಓಡಾಡಲು ಕಾಣ ಸಿಗುವುದು ಸಾಮಾನ್ಯ. ಹೀಗೆ ಬಂದ ಹಾವೊಂದರಿಂದ ಪುಟ್ಟ ಬಾಲಕಿಯೊಬ್ಬಳು ಜಸ್ಟ್ ಸೆಕೆಂಡ್ನಲ್ಲಿ ಬಚಾವ್ ಆದ ವಿಡಿಯೋವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಡೆದಿದ್ದೇನು?
49 ಸೆಕೆಂಡ್ಗಳ ದೃಶ್ಯ ವೈರಲ್ ಆಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಈ ದೃಶ್ಯ ಮನೆಯೊಂದ ಸಿಸಿ ಕ್ಯಾಮಾರದಲ್ಲಿ ಸೆರೆಯಾದ ವಿಡಿಯೋವಾಗಿದ್ದು, ಬಾಲಕಿಯೊಬ್ಬಳು ಒಂದು ಬದಿಯಿಂದ ನಡೆದುಕೊಂಡು ಮನೆಯೊಳಗೆ ಬರಲು ಮುಂದಾಗುತ್ತಾಳೆ. ಅದೇ ಸಮಯದಲ್ಲಿ ಹಾವೊಂದು ಮನೆಯ ಬಾಗಿಲ ಬಳಿದ ಹರಿದಾಡುತ್ತಿರುತ್ತದೆ. ಇದನ್ನ ನೋಡದ ಬಾಲಕಿ ಹೊಸ್ತಿಲು ದಾಟಿ ಬಾಗಿಲ ಒಳಕ್ಕೆ ಕಾಲಿಡುತ್ತಾಳೆ. ಅಷ್ಟರಲ್ಲಿ ಏನೋ ಅನ್ನಿಸಿ ಕೆಳಕ್ಕೆ ನೋಡುವಾಗ ಹಾವು ಹೆಡೆಯೆತ್ತಿರುತ್ತದೆ. ತಕ್ಷಣವೇ ಬುದ್ದಿ ಉಪಯೋಗಿಸಿದ ಬಾಲಕಿ ಹಿಂದಕ್ಕೆ ಹಾರಿ ಓಡುತ್ತಾಳೆ. ಹಾವು ಸಹ ಹೆದರಿ ಇನ್ನೊಂದು ದಿಕ್ಕಿಗೆ ಹರಿದು ಹೋಗುತ್ತದೆ. ಸದ್ಯ ಈ ದೃಶ್ಯ ವೈರಲ್ ಆಗುತ್ತಿದ್ದು, ಸಂಕಷ್ಟ ಬಂದಾಗ ದೇವರು ಹೇಗೋ ಕಾಪಾಡುತ್ತಾನೆ ಎಂಬಂತಹ ಚರ್ಚೆಗಳು ನಡೆಯುತ್ತಿವೆ.
Viral video / ಹೊಸ್ತಿಲು ಬಳಿ ವಿಷಸರ್ಪ! ಮನೆಯೊಳಗೆ ಬರಲು ಹೊರಟಿದ್ದ ಬಾಲಕಿ ಪಾರು #viralvideo #belgavi #kannadanews pic.twitter.com/EIkOXZLjz7
— malenadutoday.com (@CMalenadutoday) May 31, 2023
ಲೋಕಾಯುಕ್ತ ರೇಡ್ / 8 ಕಡೆಗಳಲ್ಲಿ ದಾಳಿ , 3.5 ಕೆಜಿ ಚಿನ್ನ 300 ಜೊತೆ ಶೂ ಸೇರಿದಂತೆ ಆಸ್ತಿಪತ್ರಗಳು ಪತ್ತೆ! ಪೂರ್ತಿ ವಿವರ ಓದಿ
ಶಿವಮೊಗ್ಗ/ ಬೆಳಿಗ್ಗೆ ಬೆಳಿಗ್ಗೆ ಇವತ್ತು ಶಿವಮೊಗ್ಗ ಜಿಲ್ಲೆ 8 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ರೇಡ್ ನಡೆಸಿದ್ದಾರೆ. ಈ ವೇಳೇ ಆದಾಯಕ್ಕೂ ಮೀರಿದ ಆಸ್ತಿ ಪತ್ರಗಳು ಸೇರಿದಂತೆ ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದೆ.
ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜನಿಯರ್ ಪ್ರಶಾಂತ್ ರವರ ಮನೆ, ತೋಟದ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಇವರಿಗೆ ಸಂಬಂಧಿಸಿದಂತೆ ಒಟ್ಟು 5 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಎಲ್ಲೆಲ್ಲಿ ರೇಡ್?
ಶಿವಮೊಗ್ಗದ ಕೆ.ಹೆಚ್.ಬಿ. ಕಾಲೋನಿಯ ಮನೆ, ಭದ್ರಾವತಿ ತಾಲೂಕು ಶೆಟ್ಟಿಹಳ್ಳಿಯ ತೋಟದ ಮನೆಯಲ್ಲಿ ಹಾಗೂ ಅವರ ಕಚೇರಿಯಲ್ಲಿ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. ಅಲ್ಲದೆ ಶರಾವತಿ ನಗರದಲ್ಲಿರುವ ಪ್ರಶಾಂತ್ ಅವರ ಪತ್ನಿಯ ಸಹೋದರ ನಾಗೇಶ್ ಎಂಬುವವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ಮಾಡಿದ್ದಾರೆ.
ಕೆಜಿಗಟ್ಟಲೇ ಚಿನ್ನ ಪತ್ತೆ
ತುಂಗಾ ಮೇಲ್ದಂಡೆ ಯೋಜನೆ ಇಂಜಿನಿಯರ್ ಪ್ರಶಾಂತ್ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ- ಬೆಳ್ಳಿ ಪತ್ತೆಯಾಗಿದೆ. ಇದುವರೆಗೂ ಸಿಕ್ಕ ಮಾಹಿತಿ ಪ್ರಕಾರ, 3.5 ಕೆಜಿ ಬಂಗಾರ, 24 ಕೆಜಿ ಬೆಳ್ಳಿ ಹಾಗೂ 25 ಲಕ್ಷ ಹಾರ್ಡ್ ಕ್ಯಾಶ್ ಪತ್ತೆಯಾಗಿದೆ . 50 ಬಾಟಲ್ ನಷ್ಟು ವಿದೇಶಿ ಮದ್ಯ ಹಾಗೂ ಸುಮಾರು 300 ಜೊತೆ ಶೂ ಸಹ ಪತ್ತೆಯಾಗಿದೆ. 6 ಎಕರೆ ಕೃಷಿ ಜಮೀನು ಹಾಗೂ ಎರಡು ಸೈಟ್ ಗಳ ದಾಖಲೆಗಳನ್ನು ಲೋಕಾಯುಕ್ತರು ಜಪ್ತಿ ಮಾಡಿದ್ದಾರೆ.
ಲೋಕಾಯುಕ್ತ ಚಿತ್ರದುರ್ಗ ಎಸ್.ಪಿ ವಾಸುದೇವರಾಮ್ ದಾಳಿಯ ನೇತೃತ್ವನ್ನ ವಹಿಸಿಕೊಂಡಿದ್ದು, . ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್, ಲೋಕಾಯುಕ್ತ ಇನ್ಸ್ಪೆಕ್ಟರ್ ಮೃತ್ಯುಂಜಯ ತಂಡ ದಾಳಿಯಲ್ಲಿ ಪಾಲ್ಗೊಂಡಿದೆ. ಸ್ಥಳದಲ್ಲಿ ಶೋಧಕಾರ್ಯಾಚರಣೆ ಮುಂದುವರಿದಿದೆ. ಸಂಜೆ ಹೊತ್ತಿಗೆ ದಾಳಿ ಸಂಪೂರ್ಣ ಮಾಹಿತಿ ಸಿಗುವ ಸಾಧ್ಯತೆ ಇದೆ.
ಶಿಕಾರಿಪುರದಲ್ಲಿಯು ಮುಂದುವರಿದ ಕಾರ್ಯಾಚರಣೆ
ಶಿಕಾರಿಪುರದಲ್ಲಿಯು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ಪಂಚಾಯಿತಿ ಜೂನಿಯರ್ ಇಂಜಿನಿಯರ್ ಶಂಕರ್ ನಾಯ್ಕ್ ರವರಿಗೆ ಸೇರಿದ ಮೂರು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಅವರ ಮನೆಯಲ್ಲಿಯು 350 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಹಾಗೂ 10 ಎಕರೆ ಜಮೀನು ದಾಖಲೆ ಪತ್ತೆಯಾಗಿದೆ ಎನ್ನಲಾಗಿದೆ.