MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಇವತ್ತು 331.81ಲಕ್ಷರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ. ಜೊತೆಯಲ್ಲಿ ಬಜೆಟ್ ಮಂಡನೆಯ ನಡುವೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಜೊತೆ ಕನ್ನಡಿಯೊಳಗಿನ ಗಂಟಿನ ಕಲಹವೂ ಜೋರಾಗಿ ನಡೆಯಿತು. ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಆರತಿ ಅ.ಮಾ. ಪ್ರಕಾಶ್ ಅವರು, ಪ್ರತಿಪಕ್ಷಗಳ ವಿರೋಧದ ನಡುವೆ ಬಜೆಟ್ನ್ನು ಓದಿದರು. ಬಜೆಟ್ ನಲ್ಲಿ ಪಾಲಿಕೆ ಆವರಣ ದಲ್ಲಿ ಎಲ್ಲಾ ಸದಸ್ಯರು ಒಂದೇ ಸೂರಿನಡಿ ಸೇವೆ ಸಲ್ಲಿಸಲು ಸಹಕಾರಿ ಯಾಗುವಂತೆ 50ಲಕ್ಷ ರೂ. ವೆಚ್ಚದಲ್ಲಿ ಆಡಳಿತ ಭವನ ನಿರ್ಮಿಸಲು ಅವಕಾಶ ನೀಡಲಾಗಿದೆ.
ಇನ್ನೂ ಸಭೆಯಲ್ಲಿ ವಿಪಕ್ಷದ ನಾಯಕಿ ರೇಖಾ ರಂಗನಾಥ್, ಹೆಚ್.ಸಿ. ಯೋಗೀಶ್, ನಾಗರಾಜ್ ಕಂಕಾರಿ, ರಮೇಶ್ ಹೆಗ್ಡೆ ಸೇರಿದಂತೆ ವಿಪಕ್ಷಗಳ ಸದಸ್ಯರು ಸಭೆಯ ಭಾವಿಗಿಳಿದು ಆಡಳಿತ ಪಕ್ಷದ ಬಜೆಟ್ ಕನ್ನಡಿಯೊಳಗಿನ ಗಂಟು ಎಂದು ಕನ್ನಡಿಯನ್ನು ಪ್ರದರ್ಶಿಸಿದ್ರು. ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳೇ ಜಾರಿಯಾಗಿಲ್ಲ. ಕೇವಲ ಬೋಗಸ್ ಬಜೆಟ್ ಮಂಡಿಸುತ್ತಿದ್ದೀರಿ ಎಂದು ಆಕ್ಷೇಪಿಸಿದ್ರು
READ | *ಉದ್ಘಾಟನೆಗೆ ಸಿದ್ದಗೊಂಡಿರುವ ಏರ್ಪೋರ್ಟ್ ಹೇಗೆ ಜಗಮಗ ಅಂತಿದೆ, ವಿಡಿಯೋ ನೋಡಿ*
ಹೆಚ್ಸಿ ಯೋಗಿಶ್ V/s ಚೆನ್ನಬಸಪ್ಪ ವಾಗ್ವಾದ
ಈ ಮಧ್ಯೆ ವಿಪಕ್ಷದ ಸದಸ್ಯ ಹೆಚ್ಸಿ ಯೋಗೀಶ್ ಹಾಗೂ ಉಳಿದ ಸದಸ್ಯರು ಬಜೆಟ್ ಮಂಡಿಸುತ್ತಿದ್ದ ಆರತಿಯವರಿಗೆ ಕನ್ನಡಿ ತೋರಿಸುತ್ತಾ ಘೋಷಣೆಗಳನ್ನು ಕೂಗಿದರು. ಇದರಿಂದ ಅಲ್ಲಿಯವರೆಗು ಪ್ರತಿಪಕ್ಷಗಳ ದಿಕ್ಕಾರ, ಪ್ರತಿಘೋಷಣೆಗಳನ್ನು ಕೂಗುತ್ತಿದ್ದ ಆಡಳಿತ ಪಕ್ಷದ ಸದಸ್ಯರು ಆಕ್ರೋಶಗೊಂಡರು.ಅಲ್ಲದೆ ಸಿಟ್ಟಿಗೆದ್ದ ಚೆನ್ನಬಸಪ್ಪರವರು ಯೋಗೀಶ್ರವರೇ ಹಿಂದಕ್ಕೆ ಹೋಗಿ ಎಂದು ಅವರ ಬಳಿಯೇ ಬಂದು ಸಿಟ್ಟಾಗಿ ಹೇಳಿದರು. ಈ ವೇಳೆ ಕೈ ಏಕೆ ಮುಟ್ಟುತ್ತೀರಿ ಎಂದು ಯೋಗೀಶ್ ಸಿಟ್ಟಾದರು. ಇಬ್ಬರ ನಡುವೆಯು ಕೆಲಕಾಲ ಮಾತುಕತೆ ವಾಗ್ವಾದದ ಸ್ವರೂಪದಲ್ಲಿ ನಡೆಯಿತು. ಇನ್ನೂ ಇಬ್ಬರು ನಾಯಕರು ಪರ ಉಳಿದವರು ಕೂಡಿಕೂಂಡು ಬಜೆಟ್ ಸಭೆ ಕಚ್ಚಾಟದ ಸಭೆಯಾಗಿ ಕೆಲಹೊತ್ತು ಮಾರ್ಪಾಡಾಗಿತ್ತು.
READ | *ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವವರಿಗೆ ‘ಕಪ್ಪು’ ನಿಷೇಧವೇಕೆ? ಏನೇನು ತರಬೇಕು? ಏನೇನು ತರಬಾರದು? ಎಸ್ಪಿ, ಡಿಸಿ ಹೇಳಿದ್ದೇನು?*
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
