ರೋಡಲ್ಲೆ ಗಾಂಜ ಮಾರ್ತಿದ್ದ ಆರೋಪಿಗಳು! ಪೊಲೀಸರ ರೇಡ್​ನಲ್ಲಿ ಸಿಕ್ಕ ಮಾದಕವಸ್ತು ಎಷ್ಟು ಗೊತ್ತಾ?

CEN police arrest accused of smuggling ganja on road

ರೋಡಲ್ಲೆ ಗಾಂಜ ಮಾರ್ತಿದ್ದ ಆರೋಪಿಗಳು! ಪೊಲೀಸರ ರೇಡ್​ನಲ್ಲಿ ಸಿಕ್ಕ ಮಾದಕವಸ್ತು ಎಷ್ಟು ಗೊತ್ತಾ?
ರೋಡಲ್ಲೆ ಗಾಂಜ ಮಾರ್ತಿದ್ದ ಆರೋಪಿಗಳು! ಪೊಲೀಸರ ರೇಡ್​ನಲ್ಲಿ ಸಿಕ್ಕ ಮಾದಕವಸ್ತು ಎಷ್ಟು ಗೊತ್ತಾ?

    MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಸಿಇಎನ್ ಪೊಲೀಸರು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮೊನ್ನೆ  ಬೆಳಗ್ಗೆ ಅಂದರೆ 23 ರಂದು ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆ ಹತ್ತಿರ ಸಾರ್ವಜನಿಕರ ರಸ್ತೆಯಲ್ಲಿ ಇಬ್ಬರು  ಅಕ್ರಮವಾಗಿ ಮಾದಕ ವಸ್ತು  ಮಾರಾಟ ಮಾಡ್ತಿದ್ಧಾರೆ ಎಂಬ ಮಾಹಿತಿ ಸಿಇಎನ್ ಸ್ಟೇಷನ್​ಗೆ ಬಂದಿದೆ. 

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಗಾಂಜಾ ಮಾರುತ್ತಿರುವವರು ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.  ಸದ್ಯ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ

  • 1)ಧನುಶ್ @ ಧನು, 20 ವರ್ಷ, ಮಂಜುನಾಥ್ ಬಡಾವಣೆ, ಶಿವಮೊಗ್ಗ ಟೌನ್ 
  • 2)ಸುರೇಶ್ @ ಸೀನು @ ಗಾರೆ ಮಂಜ, 21 ವರ್ಷ, ಲಷ್ಕರ್ ಮೊಹಲ್ಲಾ, ಶಿವಮೊಗ್ಗ ಟೌನ್

ದಸ್ತಗಿರಿ ಮಾಡಿ, ಅಂದಾಜು ಮೌಲ್ಯ 30,000/-  ರೂ ಗಳ ಒಟ್ಟು 1 ಕೆಜಿ 150 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 200/- ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿದ್ಧಾರೆ. ಇನ್ನೂ ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0017/2023  ಕಲಂ 20(b)(ii)B NDPS ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga