#savevisl ಪ್ರಧಾನಿ ಮೋದಿಗೆ ಮನವಿ ಕೊಡಲು ಹೊರಟಿದ್ದವರಿಗೆ ಪೊಲೀಸರ ಶಾಕ್: ಶಾಸಕ ಸಂಗಮೇಶ್ ಸೇರಿ ಹಲವರು ವಶಕ್ಕೆ

#savevisl  ಪ್ರಧಾನಿ ಮೋದಿಗೆ ಮನವಿ ಕೊಡಲು ಹೊರಟಿದ್ದವರಿಗೆ ಪೊಲೀಸರ ಶಾಕ್:  ಶಾಸಕ ಸಂಗಮೇಶ್ ಸೇರಿ ಹಲವರು ವಶಕ್ಕೆ

ಶಿವಮೊಗ್ಗದಲ್ಲಿ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಕೊಡಲು ಹೊರಟಿದ್ದವರನ್ನ  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ...ಭದ್ರಾವತಿ ಶಾಸಕ ಸಂಗಮೇಶ್ ಸೇರಿದಂತೆ ಗುತ್ತಿಗೆ ಕಾರ್ಮಿಕರು ಹಾಗು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ..

ಕಾರ್ಖಾನೆ ಮಂದೆ ಗುತ್ತಿಗೆ ಕಾರ್ಮಿಕರು ಕಳೆದೊಂದು ತಿಂಗಳಿನಿಂದ‌ ವಿಐಎಸ್ ಎಲ್ ಗಾಗಿ ಹೋರಾಟ ನಡೆಸ್ತಿದ್ದಾರೆ..ಇವತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸೋಗಾನೆ ವಿಮಾನ‌ ನಿಲ್ದಾಣದವರೆಗೂ ಪಾದಯಾತ್ರೆ ನಡೆಸಿ, ಮೋದಿಯವರಿಗೆ ಮನವಿ ನೀಡಲು ಮುಂದಾಗಿದ್ದರು..ಈ ಹೋರಾಟಕ್ಕೆ ಕಾಂಗ್ರೆಸ್  ಕೂಡ ಸಾಥ್ ನೀಡಿತ್ತು.....ಪ್ರತಿಭಟನಾಕಾರರು ಬಿಳಕಿ ಕ್ರಾಸ್ ಬಳಿ ಬರುತ್ತಲೇ ಪೊಲೀಸರು ಅವರನ್ನು ಅಡ್ಡಗಟ್ಟಿದ್ರು..ಅಲ್ಲದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು  ಅಜ್ಞಾತ ಪ್ರದೇಶಕ್ಕೆ ಕರೆದೊಯ್ದರು..