ಶಿವಮೊಗ್ಗ ಜಿಲ್ಲೆ | ಮೂರು ದಿನ ಪವರ್‌ ಕಟ್‌ | ಎಲ್ಲೆಲ್ಲಿ ಎನ್ನುವ ಪೂರ್ತಿ ವಿವರ ಇಲ್ಲಿದೆ

Shimoga District | Power cut for three days Here is the complete details‌ Anandpur, Konandur, Theerthahalli News, Sagar News.

ಶಿವಮೊಗ್ಗ ಜಿಲ್ಲೆ | ಮೂರು ದಿನ ಪವರ್‌ ಕಟ್‌ | ಎಲ್ಲೆಲ್ಲಿ ಎನ್ನುವ ಪೂರ್ತಿ ವಿವರ ಇಲ್ಲಿದೆ
Anandpura, Konanduru, Theerthahalli News, Sagar News.

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ 

ಶಿವಮೊಗ್ಗದ ಎರಡು ಪ್ರಮುಖ ಪ್ರದೇಶಗಳಲ್ಲಿ ಮೂರು ದಿನಾಂಕಗಳಿಗೆ ಸಂಬಂಧಿಸಿದಂತೆ ವಿದ್ಯುತ್‌ ಇರೋದಿಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸುತ್ತಮುತ್ತ ಇಂದು ಹಾಗೂ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸುತ್ತಮುತ್ತ  ನಾಳೆ ಮತ್ತು 24 ರಂದು ವಿದ್ಯುತ್‌ ವ್ಯತ್ಯಯವಾಗಲಿದೆ 

ಸಾಗರ ತಾಲ್ಲೂಕು ಆನಂದಪುರದಲ್ಲಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಇಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಇವತ್ತು ಅಂದರೆ ಮೇ 21ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ತಿಳಿಸಿದದೆ. 

ಆನಂದಪುರ, ಉಳ್ಳೂರು, ಗೌತಮಪುರ, ಯಡೇಹಳ್ಳಿ, ಹೊಸೂರು, ಆಚಾಪುರ, ತ್ಯಾಗರ್ತಿ, ಹಿರೇಬಿಲಗುಂಜಿ, ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ’ ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ನಾಳೆ ಒಂದು ದಿನ ಪವರ್‌ ಕಟ್

ಕೋಣಂದೂರು ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಮುಂದುವರಿದಿದ್ದು ಮೇ 22ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕೋಣಂದೂರು ಮತ್ತು ಹಾದಿಗಲ್ಲು ಮಾರ್ಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಹೇಳಿದೆ. 

ಅಲ್ಲದೆ ಇದೇ  ಮೇ 24ರಂದು ಕೋಣಂದೂರಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಕೋಣಂದೂರು ಶಾಖಾ ವ್ಯಾಪ್ತಿಯ ಕೋಣಂದೂರು, ಹಾದಿಗಲ್ಲು, ಹುಂಚದಕಟ್ಟೆ, ಗುಡ್ಡೆಕೊಪ್ಪ, ದೇಮ್ಲಾಪುರ ಹಾಗೂ ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

TAGS : Anandpura, Konanduru, Theerthahalli News, Sagar News.