ಎನ್‌ಟಿ ರೋಡ್‌ ಪುಟ್‌ಪಾತ್‌ ಮೇಲೆ ಮಲಗಿದ್ದ ವ್ಯಕ್ತಿ ಸಾವು | ಕೈ ಮೇಲಿತ್ತು ಈ ಹಚ್ಚೆ

old man was found dead on the footpath opposite the Power Glass House warehouse on N.T. Road, under the jurisdiction of Doddapete Police Station,

ಎನ್‌ಟಿ ರೋಡ್‌ ಪುಟ್‌ಪಾತ್‌ ಮೇಲೆ ಮಲಗಿದ್ದ ವ್ಯಕ್ತಿ ಸಾವು  | ಕೈ ಮೇಲಿತ್ತು ಈ ಹಚ್ಚೆ
Doddapete Police Station

SHIVAMOGGA | MALENADUTODAY NEWS | Jun 12, 2024 ಮಲೆನಾಡು ಟುಡೆ 

ಶಿವಮೊಗ್ಗನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಟಿ. ರಸ್ತೆ ಪವರ್‌ ಗ್ಲಾಸ್ ಹೌಸ್ ಗೋದಾಮಿನ ಎದುರು ಫುಟ್ಬಾತ್ ಮೇಲೆ 75-80 ವರ್ಷದ ವ್ಯಕ್ತಿ ಮಲಗಿದ್ದಲ್ಲೇ ಮೃತನಾಗಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ  ಎಂದು ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಮೃತನ ಗುರುತು ಪತ್ತೆಗೆ ಮನವಿ ಮಾಡಿದೆ. 

ಅಪರಿಚಿತ ವ್ಯಕ್ತಿ ಸಾವು: ಪೊಲೀಸ್ ಇಲಾಖೆ ಸೂಚನೆ

ಸುಮಾರು 5.10 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲುಮುಖ, ತೆಳುವಾದ ಮೈಕಟ್ಟು ಹೊಂದಿದ್ದಾರೆ. ಎಡಗೈನ ಮುಂಗೈ ಒಳಭಾಗದಲ್ಲಿ ಹಚ್ಚೆ ಗುರುತು ಇದೆ. ಮೈ ಮೇಲೆ ಕಪ್ಪು ಬಣ್ಣದ ತುಂಬು ತೋಳಿನ ಸ್ಟೇಟರ್ ಮಾದರಿಯ ಶರ್ಟ್, ಕಪ್ಪು ನೈಟ್ ಪ್ಯಾಂಟ್ ಧರಿಸಿದ್ದಾನೆ. ಈ ವ್ಯಕ್ತಿಯ ವಾರಸುದಾರರ ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ. 08182-261414 | 9611761255 ಇಲ್ಲಿಗೆ ಸಂಪರ್ಕಿಸಿ, ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

A 75-80 year old man was found dead on the footpath opposite the Power Glass House warehouse on N.T. Road, under the jurisdiction of Doddapete Police Station, Shivamogga city.