TODAY VIRAL VIDEO | ಬಸ್‌ನಲ್ಲಿಯೇ ಮಗುವಿಗೆ ಜನ್ಮ ಕೊಟ್ಟ ಮಹಿಳೆ | ಆಸ್ಪತ್ರೆಯ ಬಾಗಿಲಲ್ಲಿಯೇ ನಡೆಯಿತು ಶುಶ್ರೂಷೆ |
Kerala Viral Video: 37-Year-Old Woman Gives Birth To Baby Girl In KSRTC Bus While Travelling From Thrissur To Kozhikode
SHIVAMOGGA | MALENADUTODAY NEWS | May 30, 2024 ಮಲೆನಾಡು ಟುಡೆ
ನಾವು ಅಂದುಕೊಳ್ಳುತ್ತೇವೆ..ಸಮಾಜದಲ್ಲಿ ಮಾನವೀಯತೆ ಇಲ್ಲ ಸತ್ತೋಗಿದೆ. ಎಷ್ಟು ಕ್ರೂರವಾಗಿದೆ ಜಗತ್ತು ಎಂದು.ಆದರೆ ಕೆಲವೊಮ್ಮೆ ಕೆಲವೊಂದು ಕಾರಣಕ್ಕಾಗಿ ಅಪರಿಚಿತರೆಲ್ಲಾ ಒಂದಾಗಿ ಏನನ್ನೋ ಸಾಧಿಸಿಬಿಡುತ್ತಾರೆ. ಅಂತಹ ಘಟನೆಯೊಂದು ನೆರೆಯ ಕೇರಳದಲ್ಲಿ ನಡೆದಿದೆ. ಆಗ ತಾನೆ ಹುಟ್ಟಿದ ಜೀವವೊಂದಕ್ಕಾಗಿ ಅದೆಷ್ಟು ಮಂದಿ ಸಾಹಸ ಪಟ್ಟಿದ್ದಾರೆ ಎನ್ನುವುದಕ್ಕೆ ಸಿಸಿ ಕ್ಯಾಮರಾದ ದೃಶ್ಯಗಳು ಸಾಕ್ಷಿಯಾಗಿವೆ. ಅದರ ವಿವರ ಹೀಗಿದೆ.
ಮೇ 29 ರಂದು ಕೇರಳ ಸರ್ಕಾರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ತುರ್ತು ಪರಿಸ್ಥಿತಿ ಎದುರಾಗಿತ್ತು. ತುಂಬು ಬಸುರಿ ಬಸ್‌ನಲ್ಲಿ ಹೋಗುತ್ತಿರುವಾಗಲೇ ಆಕೆಯ ಯೋಗಕ್ಷೇಮ ವಿಚಾರಿಸ್ತಿದ್ದ ಪ್ರಯಾಣಿಕರು, ಆಕೆಗೆ ನೋವು ಶುರುವಾಗುತ್ತಲೇ ತಾಯ್ತನ ಮೆರೆದರು, ಪುರುಷರು ಆಸ್ಪತ್ರೆಯನ್ನು ಸಂಪರ್ಕಿಸುವ ಕೆಲಸ ಮಾಡಿದರೆ, ಮಹಿಳೆಯರು ಆಕೆಯನ್ನು ಸಾವರಿಸುತ್ತ ಆಕೆಯ ದೈರ್ಯಕ್ಕೆ ನಿಂತು ಅಲ್ಲಿಯೆ ಮರೆಮಾಡಿದರು. ಬಸ್ ಡ್ರೈವರ್ ಹಾಗೂ ಕಂಡಕ್ಟರ್ ತಮ್ಮ ರೂಟ್ ಬಿಟ್ಟು ಆಸ್ಪತ್ರೆಯತ್ತ ಬಸ್ ಚಲಾಯಿಸಿದರು. ಹಾಗಂತ ಧಾವಂತದಲ್ಲಿ ಬಸ್ ಓಡಿಸುವಂತಿರಲಿಲ್ಲ. ಇದೆಲ್ಲದರ ನಡುವೆ ಘಟನೆಯೊಂದು ನಡೆದು ಹೋಯಿತು
ತ್ರಿಶೂರ್‌ನಿಂದ ಕೋಝಿಕ್ಕೋಡ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆಕೆ ಮಗುವಿಗೆ ಜನ್ಮ ನೀಡುತ್ತಲೇ ಬಸ್ ಆಸ್ಪತ್ರೆಯೊಂದರ ಎದುರು ಬಸ್ ಬಂದು ನಿಂತಿತ್ತು. ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಯ ಬಾಗಿಲಿಗೆ ಬಸ್ ಬಂದು ನಿಂತಿದ್ದನ್ನ ನೋಡಿ ಅಲ್ಲಿದ್ದ ಸಿಬ್ಬಂದಿ ತುಸು ಗಾಬರಿಯಾದರಾದರೂ ಸಹ, ಏನೋ ಎಮರ್ಜೆನ್ಸಿ ಎಂದು ಕೊಂಡು ಎಲ್ಲರೂ ಸಿದ್ದರಾದರು
ಆನಂತರ ನಡೆದಿದ್ದು ಕೆಲವೇ ನಿಮಿಷಗಳ ಕಾರ್ಯಾಚರಣೆ. ಬಸ್ ಬಂದು ನಿಲ್ಲುತ್ತಲೇ ಬಸ್ ಏರಿ ನೋಡಿದ ಸ್ಟಾಪ್ ನರ್ಸ್‌ಗಳು ಡೆಲಿವರಿ ಆಗಿರುವುದನ್ನ ಕಂಡುಕೊಂಡರು. ತಕ್ಷಣವೇ ಹೆರಿಗೆಗೆ ಬೇಕಿದ್ದ ಸಲಕರಣೆಗಳನ್ನ ತರಿಸಿಕೊಂಡರು, ಅಷ್ಟೊತ್ತಿಗೆ ವೆದ್ಯರು ಸಹ ಓಡಿ ಬಂದು ಬಸ್ ಹತ್ತಿದರು, ಏಳೆಂಟು ಮಂದಿ ಬಸ್‌ನಲ್ಲಿ ಆಕೆಯ ಶುಶ್ರೂಷೆ ಮಾಡುತ್ತಿದ್ದಾರೆ. ಬಸ್ ಕಳೆಗೆ ಒಂದಷ್ಟು ಮಂದಿ ಅವಶ್ಯಕ ಸಹಾಯವನ್ನು ಮಾಡುತ್ತಿದ್ದರು. ಕೆಲವು ನಿಮಿಷಗಳ ನಂತರ ಸುರಕ್ಷಿತವಾದ ಬಟ್ಟೆಯಲ್ಲಿ ಸುತ್ತಿಕೊಂಡು ನರ್ಸ್ ಒಬ್ಬಳು ನವಜಾತ ಶಿಶುವನ್ನು ಎತ್ತಿಕೊಂಡು ಬಸ್‌ನಿಂದ ಇಳಿದು ಆಸ್ಪತ್ರೆಯೊಳಕ್ಕೆ ಓಡುತ್ತಾರೆ. ಆ ಮಗುವಿಗೆ ಬೇಕಿರುವ ಚಿಕಿತ್ಸೆಗಾಗಿ ಆಕೆ ಓಡಿದ ದೃಶ್ಯ ಮನಕಲಕಿಸುತ್ತದೆ.
ಇತ್ತ ಮತ್ತೊಂದಿಷ್ಟು ಸಿಬ್ಬಂದಿ ಮಗುವಿಗೆ ಜನ್ಮ ನೀಡಿದ ಮಹಿಳೆಯನ್ನು ಜಾಗರೂಕತೆಯಲ್ಲಿ ಆಸ್ಪತ್ರೆಯೊಳಕ್ಕೆ ಶಿಫ್ಟ್ ಮಾಡಿದರು. ಅಷ್ಟಾಗುವ ಹೊತ್ತಿಗೆ ಅಲ್ಲಿದ್ದವರಿಗೆಲ್ಲಾ ಎನೋ ಸಾಧಿಸಿದ ಭಾವ, ತೃಪ್ತ ನಗು, ಎಲ್ಲರೊಳಗೆ ಒಂದಾದ ಖುಷಿ ಮತ್ತು ಪುಟ್ಟ ಮಗು ಹಾಗೂ ಅದರ ತಾಯಿಯ ರಕ್ಷಿಸಿದ ಸಂತೃಪ್ತಿ ಕಾಣುತ್ತಿತ್ತು. ಇದೆಲ್ಲವನ್ನು ರೆಕಾರ್ಡ್ ಮಾಡಿಕೊಂಡ ಸಿಸಿ ಕ್ಯಾಮರಾ ಇದೀಗ ತನ್ನ ದೃಶ್ಯವನ್ನು ಜಗತ್ತಿಗೆ ಬಿತ್ತರಿಸಿ ಮಾನವೀಯತೆ ಮನುಷ್ಯತ್ವ ಅಂದರೆ ಇದೆ ಎಂದು ಸಾರುತ್ತಿದೆ.
Kerala Viral Video: 37-Year-Old Woman Gives Birth To Baby Girl In KSRTC Bus While Travelling From Thrissur To Kozhikode