ವಿದ್ಯಾರ್ಥಿಗಳಿಗೆ ನಾಲ್ಕು ಪ್ರಮುಖ ಸಲಹೆ ನೀಡಿದ ಎಸ್​ಪಿ ಮಿಥುನ್​ ಕುಮಾರ್!

SP Mithun Kumar gives four important suggestions to students ವಿದ್ಯಾರ್ಥಿಗಳಿಗೆ ನಾಲ್ಕು ಪ್ರಮುಖ ಸಲಹೆ ನೀಡಿದ ಎಸ್​ಪಿ ಮಿಥುನ್​ ಕುಮಾರ್!

ವಿದ್ಯಾರ್ಥಿಗಳಿಗೆ ನಾಲ್ಕು ಪ್ರಮುಖ ಸಲಹೆ ನೀಡಿದ ಎಸ್​ಪಿ ಮಿಥುನ್​ ಕುಮಾರ್!

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಶಿವಮೊಗ್ಗದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಸನ ಮುಕ್ತ ದಿನಾಚರಣೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ  ಜಿಲ್ಲಾಧಿಕಾರಿ  ಸೇಲ್ವಮಣಿ ಆರ್ ಎಸ್​ಪಿ ಮಿಥುನ್ ಕುಮಾರ್ ಜಿ ಕೆ ಪಾಲ್ಗೊಂಡು,  ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದೇ ವೇಳೆ  ಎಸ್​ಪಿ ಮಿಥುನ್ ಕುಮಾರ್, ವಿದ್ಯಾರ್ಥಿಗಳಿಗೆ ನಾಲ್ಕು ಸಲಹೆಗಳನ್ನ ನೀಡಿದ್ದಾರೆ. 

1) ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಮೋಜಿಗಾಗಿ ಅಥವಾ ಯಾರದ್ದೋ ಪ್ರಭಾವಕ್ಕೆ ಒಳಗಾಗಿ ದುಶ್ಚಟಗಳ ಹವ್ಯಾಸಗಳನ್ನು ಮತ್ತು ಸಿಗರೇಟು, ಗುಟ್ಕಾ, ತಂಬಾಕು, ಗಾಂಜಾ ವ್ಯಸನವನ್ನು ಬೆಳೆಸಿಕೊಳ್ಳುತ್ತಾರೆ ಆದರೆ ಮುಂದೆ ಇದರಿಂದ ಹೊರಬರಲು ಸಾಧ್ಯವಾಗದೆ, ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದ್ದರಿಂದ ದುಶ್ಚಟಗಳಿಗೆ ದಾಸರಾಗದೆ, ತಮ್ಮ ಜೀವನವನ್ನು ಉತ್ತಮ ಮಾರ್ಗದಲ್ಲಿ ರೂಡಿಸಿಕೊಳ್ಳಿ. 

 2) ಈಗಿನ ಸಮಯದಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮತ್ತು ಅದರ ಪ್ರಭಾವದಿಂದ ಜೀವನದ ಗುರಿಯನ್ನು ಮರೆತು, ತಪ್ಪು ದಾರಿಯಲ್ಲಿ ನಡೆಯುತ್ತಾರೆ. ಇದರಿಂದ ಒಂದುಬಾರಿ ದಾರಿತಪ್ಪಿದರೆ ಪುನ್ಹ ಸರಿದಾರಿಗೆ ಮರಳುವುದು ಕಷ್ಟ ಸಾದ್ಯವಿದ್ದು, ಆದ್ದರಿಂದ ಎಲ್ಲರೂ ಏಕಾಗ್ರತೆಯಿಂದ ತಮ್ಮ ಗಮನವನ್ನು ಬೇರೆಡೆಗೆ ಹರಿಸದೆ, ಜೀವನದ  ಗುರಿ ಸಾದಿಸಿ.

3) ಕಾಲೇಜಿಗೆ ಗೈರು ಹಾಜರಾಗಿ ಹೊರಗೆ ತಿರುಗಾಡುವುದು  ಮಾಡದೇ, ಈ ಅಮೂಲ್ಯವಾದ ಸಮಯವನ್ನು ಬಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವುದು ಮತ್ತು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಬಿಡುವಿನ ಸಮಯದಲ್ಲಿ ಲೈಬ್ರರಿಯಲ್ಲಿ ಪುಸ್ತಕಗಳನ್ನು  ಓದುವ ಮುಖಾಂತರ ವಿದ್ಯಾರ್ಜನೆ ಮಾಡಿ.

4) ಒಂದು ಬಾರಿ ತಪ್ಪು ದಾರಿ ತುಳಿದು ಅಪರಾಧ ಕೃತ್ಯಗಳನ್ನು ಮಾಡಿದರೆ, ಅಂತಹವರ ವಿರುದ್ಧ ಪ್ರಕರಣ ದಾಖಲಾಗುತ್ತದೆ ಇದರಿಂದಾಗಿ ಜೀವನ ಹಾಳಾದರೆ ನಿಮ್ಮೊಂದಿಗೆ  ನಿಮ್ಮ ಪೋಷಕರು ಸಹಾ ಪರಿಣಾಮವನ್ನು ಎದುರಿಸಬೇಕಿರುತ್ತದೆ.  ಆದ್ದರಿಂದ ಸರಿಯಾದ ಮಾರ್ಗದಲ್ಲಿ ನಡೆಯಿರಿ ಎಂದು ತಿಳುವಳಿಕೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಲೋಕಂಡೆ ಸ್ನೇಹಲ್ ಸುಧಾಕರ್, ಐಎಎಸ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಶಿವಮೊಗ್ಗ, ಶ್ರೀಮತಿ ನಗ್ಮಬಾನು, ಯೋಗಕ್ಷೇಮ ಅಧಿಕಾರಿಗಳು, ಪೊಲೀಸ್ ಇಲಾಖೆ ಶಿವಮೊಗ್ಗ ಮತ್ತು ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಇನ್ನಷ್ಟು ಸುದ್ದಿಗಳು 



 ​