ಗೀತಾ 01, ರಾಘವೇಂದ್ರ ನಂಬರ್‌ 02 | KS ಈಶ್ವರಪ್ಪ , DS ಈಶ್ವರಪ್ಪ ಸಂಖ್ಯೆ ಮೇಲೆ ಕೆಳಗೆ | ಬ್ಯಾಲೆಟ್‌ ಪೇಪರ್‌ ಕುತೂಹಲ!

Geetha 01, Raghavendra Number 02 | KS Eshwarappa , DS Eshwarappa Top Down | Ballot paper curiosity!

ಗೀತಾ 01, ರಾಘವೇಂದ್ರ ನಂಬರ್‌ 02 | KS ಈಶ್ವರಪ್ಪ , DS ಈಶ್ವರಪ್ಪ ಸಂಖ್ಯೆ ಮೇಲೆ ಕೆಳಗೆ | ಬ್ಯಾಲೆಟ್‌ ಪೇಪರ್‌ ಕುತೂಹಲ!
Geetha, Raghavendra , KS Eshwarappa , DS Eshwarappa,Ballot paper

SHIVAMOGGA | MALENADUTODAY NEWS | Apr 23, 2024   

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತವರ ಪಟ್ಟಿ ಅಂತಿಮಗೊಂಡಿದ್ದು ಬ್ಯಾಲೆಟ್‌ ಪೇಪರ್‌ ಸಿದ್ದಗೊಂಡಿದೆ. ಪೋಸ್ಟಲ್‌ ಮತದಾನ ಕೂಡ ಇನ್ನೇನು ಸದ್ಯದಲ್ಲಿಯೇ ಆರಂಭವಾಗಲಿದೆ. ಈ ನಡುವೆ ಯಾರ್ಯಾರಿಗೆ ಯಾವ ನಂಬರ್‌ ಸಿಕ್ಕಿದೆ, ಬ್ಯಾಲೇಟ್‌ ಪೇಪರ್‌ನಲ್ಲಿ ಯಾವ ಪಕ್ಷದವರು ಸರಣಿ ಸಂಖ್ಯೆ ಏನಿದೆ ಎಂಬುದನ್ನ ನೋಡುವುದಾದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ, ಗೀತಾ ಶಿವರಾಜ್‌ ಕುಮಾರ್‌ ರವರ ಹೆಸರು ಬ್ಯಾಲೆಟ್‌ ಪೇಪರ್‌ನಲ್ಲಿ ಮೊದಲಿಗೆ ಇರಲಿದೆ. ಅವರ ನಂತರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ರವರ ಹೆಸರು ಬಂದಿದೆ. ಮೂರನೇ ನಂಬರ್‌ನಲ್ಲಿ ಬಹುಜನ ಸಮಾಜವವಾದಿ ಪಕ್ಷದ ಎಡಿ ಶಿವಪ್ಪರವರ ಹೆಸರು ಇದೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಈ ಮೂವರ ಹೆಸರು ಕ್ರಮವಾಗಿ 1,2,3 ರಂತೆ ಬಂದಿದೆ. 

ಇನ್ನೂ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅರುಣ ಕಾನಹಳ್ಳಿಯವರ ಹೆಸರಿದ್ದು, ಐದು ಮತ್ತು ಆರನೇ ಕ್ರಮಾಂಕದಲ್ಲಿ ಕರ್ನಾಟಕ ರಾಷ್ಟ್ರೀಯ ಸಮಿತಿಯ ಎಸ್‌ ಕೆ ಪ್ರಭು, ಯಂಗ್‌ ಸ್ಟಾರ್‌ ಎಂಪಾವರ್‌ ಮೆಂಟ್‌ ಪಾರ್ಟಿಯ ಮೊಹಮ್ಮದ್‌ ಯೂಸೂಬ್‌ ರವರ ಹೆಸರಿದೆ. ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇವರಾಗಿದ್ದಾರೆ. 

ಇತರೆ ಅಭ್ಯರ್ಥಿಗಳಾಗಿ ಎಳನೇ ಕ್ರಮಾಂಕದಲ್ಲಿ ಇಂತಿಯಾಜ್‌ ಎ ಅತ್ತಾರ್‌ ರವರ ಹೆಸರಿದ್ದು ಪಕ್ಷೇತರರಾಗಿ ನಿಂತಿರುವ ಕೆಎಸ್‌ ಈಶ್ವರಪ್ಪ ನವರಿಗೆ 8 ನೇ ಕ್ರಮಾಂಕ ಸಿಕ್ಕಿದೆ. ವಿಶೇಷ ಅಂದರೆ, ಇವರ ಹೆಸರಿನವರೇ ಆದ ಡಿಎಸ್‌ ಈಶ್ವರಪ್ಪ ನವರ ಕ್ರಮಾಂಕ ಸಂಖ್ಯೆ ಒಂಬತ್ತು.  

10 ನೇ ಕ್ರಮಾಂಕದಲ್ಲಿ  ಕಣಜೆ ಮಂಜುನಾಥ್‌ ಗೌಡ, 11 ನೇ ಕ್ರಮಾಂಕದಲ್ಲಿ  ಗಣೇಶ್‌ ಬಿ (ಬೆಳ್ಳಿ), 12 ನೇ ಕ್ರಮಾಂಕದಲ್ಲಿ ಚಂದ್ರಶೇಖರ್‌ ಹೆಚ್‌ಸಿ, 13 ನೇ ಕ್ರಮಾಂಕದಲ್ಲಿ  ಜಯದೇವ, 14 ನೇ ಕ್ರಮಾಂಕದಲ್ಲಿ ಜಾನ್‌ ಬೆನ್ನಿ, 15 ನೇ ಕ್ರಮಾಂಕದಲ್ಲಿ ಎನ್‌ವಿ ನವೀನ್‌ ಕುಮಾರ್‌ , 16 ನೇ ಕ್ರಮಾಂಕದಲ್ಲಿ ಪೂಜಾ ಅಣ್ಣಯ್ಯಾ, 17 ನೇ ಕ್ರಮಾಂಕದಲ್ಲಿ ಬಂಡಿ, 18 ನೇ ಕ್ರಮಾಂಕದಲ್ಲಿ  ರವಿಕುಮಾರ್‌ ಎನ್‌ , 19ನೇ ಕ್ರಮಾಂಕದಲ್ಲಿ ಶಿವರುದ್ರಯ್ಯಸ್ವಾಮಿ, 20 ನೇ ಕ್ರಮಾಂಕದಲ್ಲಿ ಶ್ರೀಪತಿ ಭಟ್‌,  21 ನೇ ಕ್ರಮಾಂಕದಲ್ಲಿ ಹೆಚ್‌ ಸುರೇಶ್‌ ಪೂಜಾರಿ, 22 ನೇ ಕ್ರಮಾಂಕದಲ್ಲಿ ಸಂದೇಶ್‌ ಶೆಟ್ಟಿ ಯವರಿದ್ದಾರೆ ಅಂತಿಮ ಹಾಗೂ 23 ನೇ ಕ್ರಮಾಂಕದಲ್ಲಿ ಇ ಹೆಚ್‌ ನಾಯಕ್‌ ರವರಿದ್ದಾರೆ.