ಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಬ್ಬೆಟ್ಟು ಮಂಜನ ರಿಂಗ...ರಿಂಗಾ! ಏನಿದು ರಿಂಗಪ್​ ಕಹಾನಿ?

Hebbettu Manja and his team are controlling sand and stone quarries in Shivamogga and Chikkamagaluru districtsಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆಗಳಲ ಮರಳು ಮತ್ತು ಕಲ್ಲು ಕ್ವಾರಿಗಳ ಮೇಲೆ ನಿಯಂತ್ರಣ ಸಾದಿಸುತ್ತಿದೆ ಹೆಬ್ಬೆಟ್ಟು ಮಂಜ ಮತ್ತವನ ಟೀಂ

ಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಬ್ಬೆಟ್ಟು ಮಂಜನ ರಿಂಗ...ರಿಂಗಾ!  ಏನಿದು ರಿಂಗಪ್​ ಕಹಾನಿ?

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS  

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮರಳು ಹಾಗೂ ಕಲ್ಲುಕ್ವಾರಿಗಳಲ್ಲಿ ಡಾನ್ ರೌಡಿಗಳು ಕೈ ಹಾಕಿರುವುದು ಹಳೆಯ ವಿಷಯವೇ! ಆದರೆ ಪಾತಕಲೋಕದ ಹಸ್ತಕ್ಷೇಪವನ್ನು ತಡೆಯದೇ ಹೋದಲ್ಲಿ ಭವಿಷ್ಯದಲ್ಲಿ ,ಉಭಯ ಜಿಲ್ಲೆಗಳಲ್ಲಿನ ಕಾನೂನು ಸುವ್ಯವಸ್ತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಹೆಚ್​ಎಂ ಅಥವಾ ಹೆಬ್ಬೆಟ್ಟು ಮಂಜ ಎರಡು ಜಿಲ್ಲೆಗಳ ಮರಳು ಹಾಗೂ ಕಲ್ಲುಕ್ವಾರಿಗಳಲ್ಲಿ ಆಪರೇಟ್ ಮಾಡುತ್ತಿದ್ಧಾನೆ. ಅಷ್ಟೆಅಲ್ಲದೆ, ಆತ ಮರಳು ಮಾಫಿಯಾದಲ್ಲಿ ಆಡುತ್ತಿರುವ ರಿಂಗಾ…ರಿಂಗಾ ಆಟ ಪೊಲೀಸ್ ಇಲಾಖೆಗೆ ಅಲರ್ಟ್ ಮೆಸೇಜ್! 

ಏನಿದು ಸ್ಟೋರಿ?

ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಮರಳು ಮತ್ತು ಕ್ವಾರಿಗಳ ಟೆಂಡರ್ ಇತ್ತಿಚ್ಚಿನ ವರ್ಷಗಳಲ್ಲಿ ಹೇಗೆಲ್ಲಾ ನಡೆಯುತ್ತಿದೆ ಎಂಬುದನ್ನು ಮಲೆನಾಡು ಟುಡೆ ಈ ಹಿಂದೆಯು ವರದಿ ಮಾಡಿದೆ. ಟೆಂಡರ್ ನಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಆನ್ ಲೈನ್ ಟೆಂಡರ್ ಕಾಲ್ ಮಾಡುತ್ತಿದೆ. ಆದರೆ ಆನ್​ಲೈನ್​ ಟೆಂಡರ್​ನಲ್ಲಿಯೇ ಸಾಕಷ್ಟು ಗೋಲ್ ಮಾಲ್ ನಡೆಯುತ್ತಿದೆ. ಮೂಲಗಳ ಪ್ರಕಾರ,  ಹೆಬ್ಬೆಟು ಮಂಜನ ಟೀಂ ಗುತ್ತಿಗೆದಾರರನ್ನ ರಿಂಗ್​ ಅಪ್ ಮಾಡಿಕೊಂಡು, ಅವರಿಗೆ ಹಣ ನೀಡಿಯೋ ಇಲ್ಲವೋ ಗನ್ ಪಾಯಿಂಟ್ ನಲ್ಲಿ ಬೆದರಿಸಿಯೋ ವ್ಯವಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಅಷ್ಟೆಅಲ್ಲದೆ ಟೆಂಡರ್​ ಕೀಗಳನ್ನು ಪಡೆದು ಪಾಸ್​​ವರ್ಡ್ ಚೇಂಜ್ ಮಾಡಿಕೊಂಡು, ತಮಗೆ ಬೇಕಾದ ಕಡಿಮೆ ದರದಲ್ಲಿ ಬಿಡ್ ಮಾಡುತ್ತಿದೆ. ಇದು ಅತ್ತ ಸರ್ಕಾರಕ್ಕೆ ನಷ್ಟ, ಇತ್ತ ಮಾಫಿಯಾ ಏಕಸ್ವಾಮ್ಯಕ್ಕೆ ದಂಧೆ ವಶವಾಗುತ್ತಿದೆ. 

ಗುತ್ತಿಗೆದಾರರ ಅಳಲು

ಹೆಸರು ಹೇಳಲು ಇಚ್ಚಿಸದ ಗುತ್ತಿಗೆದಾರರೊಬ್ಬರ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಎಲ್ಲಾ ಕ್ವಾರಿಗಳನ್ನು ಕಡಿಮೆ ರೇಟ್ ಗೆ ಬಿಡ್ ಮಾಡಿ, ಹೆಬ್ಬೆಟ್ಟು ಮಂಜ ಷೇರು ಹೊಂದಿದ್ದಾನಂತೆ. ಮೇಲಾಗಿ ಈ ವಿಚಾರ ಪೊಲೀಸ್ ವಲಯಕ್ಕೂ ಗೊತ್ತಿದೆ ಎನ್ನಲಾಗಿದೆ.  ನಂಬಿಕಸ್ತ  ಸಹಚರರಿಗೆ ವಾಟ್ಸಾಪ್ ಇಲ್ಲವೇ ಇಂಟರ್ ನೆಟ್ ಕಾಲ್ ಮಾಡಿ, ಸಂಬಂಧಿಸಿದ ಗುತ್ತಿಗೆದಾರರೊಂದಿಗೆ ವ್ಯವಹರಿಸುತ್ತಿದ್ದಾನಂತೆ  ಹೆಬ್ಬೆಟ್ಟು ಮಂಜ. ಈ ದಿನಗಳಲ್ಲಿ ಆತ ಫುಲ್​ ಆಕ್ಟಿವ್ ಆಗಿದ್ದಾನೆ ಎನ್ನುತ್ತದ ಸೋರ್ಸ್​!  .

ಕುರುವಳ್ಳಿ ಬಂಡೆ ಟೆಂಡರ್ ಮತ್ತು ರಿಂಗ್​ ಅಪ್

ಇತ್ತೀಚೆಗೆ ನಡೆದ ತೀರ್ಥಹಳ್ಳಿಯ ಕುರುವಳ್ಳಿ ಬಂಡೆಯ ಆರು ಎಕರೆ ಕಲ್ಲುಕ್ವಾರಿಯ ರೀ ಟೆಂಡರ್ ಪ್ರಕ್ರಿಯೆಯಲ್ಲಿ ಹೆಬ್ಬೆಟ್ಟಿನ ಪಾತ್ರ ಇದೆ ಎನ್ನುತ್ತಿದೆ ಆ ಟೆಂಡರ್ ನಿಂದ ವಂಚಿತವಾದ ವ್ಯವಸ್ಥೆ.ಈ ಟೆಂಡರ್ ನಲ್ಲಿ ಪಾಲ್ಗೊಂಡ ಗುತ್ತಿಗೆದಾರರಿಗೆ ಬೆದರಿಸಿ ಹಣಕೊಟ್ಟು ಕಳಿಸಲಾಗಿದೆ ಎನ್ನಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇದ್ದರೂ  ಯಾಕೆ ಕೈಕಟ್ಟಿ ಕೂತಿದ್ದಾರೋ ಗೊತ್ತಿಲ್ಲ ಆದರೆ ಅಧಿಕಾರಿಗಳ ಮೌನ, ಸರ್ಕಾರದ ಬೊಕ್ಕಸಕ್ಕೆ ಕೊಡಲಿ ಪೆಟ್ಟು ನೀಡಿದೆ.

ಎಲ್ಲಿದ್ದಾನೆ ಆತ?

ಶಿವಮೊಗ್ಗದ ಮೇಲೆ ತನ್ನ ಹೋಲ್ಡಿಂಗ್ ಜಾಸ್ತಿ ಮಾಡಿಕೊಳ್ತಿರುವ ಹೆಬ್ಬೆಟ್ಟು ಮಂಜ ಎಲ್ಲಿದ್ಧಾನೆ ಎಂಬುದು ಅಧಿಕೃತವಾಗಿ ಯಾರಿಗೂ ಗೊತ್ತಿಲ್ಲ. ಕೆಲವರು ಮಲೇಷಿಯಾ ಅಂದರೆ ಮತ್ತೆ ಕೆಲವರು ದೆಹಲಿ, ಯುಪಿ ಅಂತಿದ್ದಾರೆ. ಇನ್ನೂ ಕೆಲವರು ಚಿಕ್ಕಮಗಳೂರು ಕಾಫಿತೋಟವೊಂದರಲ್ಲಿ ಆತ ಶೆಲ್ಟರ್ ಪಡೆದಿದ್ದಾನೆ ಎನ್ನುತ್ತಾರೆ. ಆತ ಎಲ್ಲಿದ್ದಾನೋ ಅಲ್ಲಿಂದಾನೇ ಟೆಕ್ನಾಲಿಜಿ ಸಹಾಯದಿಂದ ಶಿವಮೊಗ್ಗದಲ್ಲಿನ ಕ್ವಾರಿ ಮಾಫಿಯಾವನ್ನು ನಿಯಂತ್ರಿಸುತ್ತಿದ್ಧಾನೆ ಎನ್ನುತ್ತಿದೆ ಮರಳು, ಕಲ್ಲು ಕ್ವಾರಿಯ ಜಗತ್ತು. 

ಹೆಬ್ಬೆಟ್ಟು ಮಂಜನ ಬೆನ್ನುಬಿದ್ದಿರುವ ಪೊಲೀಸರು!

ಸದ್ಯ ಅಂದರ್​ ಕೀ ಬಾತ್​ನಲ್ಲಿ ನಡೆಯುತ್ತಿರುವ ಮತ್ತು ನಡೆದಿರುವ  ರಿಂಗ್​ ಅಪ್ ಆ್ಯಂಡ್ ಕ್ವಾರಿ ಮಾಫಿಯಾದ ಬಗ್ಗೆ ಶಿವಮೊಗ್ಗ ಪೊಲೀಸರಿಗೂ ಮಾಹಿತಿಯಿದೆ. ಆದರೆ ರೌಡಿಗಳ ನಿಗ್ರಹ ವಿಚಾರದಲ್ಲಿ ಪೊಲೀಸ್ ಇಲಾಖೆ ಯಾವ ನಡೆ ಇಡುತ್ತಿದೆ ಎಂಬುದು ಗೌಪ್ಯವಾಗಿದೆ.  ಮೇಲಾಗಿ ಸದ್ಯ ಡಿವೈಎಸ್​ಪಿ ಬಾಲರಾಜ್​ ರೌಡಿ ನಿಗ್ರಹ ದಳದ ಜವಾಬ್ದಾರಿ ಹೊತ್ತಿದ್ದಾರೆ. ಅವರಿಗೆ ಬಿಗ್ ಟಾಸ್ಕ್ ಆಗಿರೋದು ಹೆಬ್ಬೆಟ್ಟು ಮಂಜ.  ಎಸ್ಪಿ ಮಿಥುನ್ ಕುಮಾರ್ ಈ ವಿಚಾರವನ್ನು ಗಂಭೀರವಾಗಿಯೇ ಪರಿಗಣಿಸಿದ್ದು, ಹೆಬ್ಬೆಟ್ಟಿನ ಜಾಡು ಬೇಧಿಸಲು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. 

ಡಿವೈಎಸ್​ಪಿ ಬಾಲರಾಜ್ ಹಾಗೂ ಹೆಚ್​ಎಂ

ಹಿಂದೊಮ್ಮೆ ಶಿವಮೊಗ್ಗ ಪಾತಕಲೋಕದ ಮುಖ್ಯ ಹೆಸರಾಗಿದ್ದ ಹೆಬ್ಬೆಟ್ಟು ಮಂಜ ಊರು ಬಿಡಲು ಕಾರಣವಾಗಿದ್ದರು ಡಿವೈಎಸ್​ಪಿ ಬಾಲರಾಜ್. ಆಗ ತೀರ್ಥಹಳ್ಳಿಯಲ್ಲಿ ಇನ್​ಸ್ಪೆಕ್ಟರ್ ಆಗಿದ್ದ ಬಾಲರಾಜ್​, ಬಾಲ್ ರಾಜ್ ಹೊಸಹಳ್ಳಿ ವೆಂಕಟೇಶ್ ಮರ್ಡರ್ ಕೇಸ್ ನಲ್ಲಿ ಹೆಬ್ಬೆಟ್ಟು ಮಂಜ ಮತ್ತವನ ಗ್ಯಾಂಗ್​ನ್ನ ಅರೆಸ್ಟ್ ಮಾಡಿದ್ರು. ಆದರೆ ಸಾಕ್ಷ್ಯ ಸಿಗದೇ,  ಕೇಸ್ ಮಗುಚಿಬಿದ್ದಿತ್ತು. 

ಶಿವಮೊಗ್ಗ ಕೋರ್ಟ್​ನ ಸಮೀಪ ವಾರ್ನಿಂಗ್

ಅಂದು ಶಿವಮೊಗ್ಗದ ಕೋರ್ಟ್ ಆವರಣದ ಹೊರಗೆ ಹೆಬ್ಬೆಟ್ಟು ಮಂಜ ಬರುವಾಗಲೇ, ಬಾಲ್​ರಾಜ್​ ಹೆಬ್ಬೆಟ್ಟಿಗೊಂದು ಫೈನಲ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲಿಂದ  ಶಿವಮೊಗ್ಗ ಬಿಟ್ಟ ಹೆಬ್ಬೆಟ್ಟು ಬೆಂಗಳೂರು ರೌಡಿ ಮುಲಾಮನ ಗ್ಯಾಂಗ್ ಸೇರಿಕೊಂಡಿದ್ದ. ಆದರೆ ಬಾಲ್​ರಾಜ್​ ಬೆಂಗಳೂರಿಗೆ ವರ್ಗಾವಣೆಯಾದ ಬೆನ್ನಲ್ಲೆ ಮತ್ತೆ ಹೆಬ್ಬೆಟ್ಟು ಮಂಜನ ಆಟಾಟೋಪಕ್ಕೆ ಬ್ರೇಕ್ ಹಾಕಿದ್ದರು. ಯಾವ ಮಟ್ಟಿಗೆ ಅಂದರೆ, ಹೆಬ್ಬೆಟ್ಟು ಎನ್​ಕೌಂಟರ್ ಬೀತಿಯಲ್ಲಿ ದೇಶಬಿಟ್ಟಿದ್ದ. ಅಲ್ಲಿಂದ ಇಲ್ಲಿವರೆಗೂ ಹೆಬ್ಬೆಟ್ಟು ಮಂಜ ಬಹಿರಂಗವಾಗಿ ಕಾಣಿಸಿಕೊಂಡಿದ್ದಿಲ್ಲ. ಆದರೆ ಪಾತಕಲೋಕದ ಅನುಭವದೊಂದಿಗೆ ಇದೀಗ ಮತ್ತೆ  ಶಿವಮೊಗ್ಗ ಕ್ರೈಂ ಲೋಕದಲ್ಲಿ ತನ್ನ ಬ್ಯಾಟಿಂಗ್ ಬಾಯ್ಸ್​ ಜೊತೆ ಸದ್ದು ಮಾಡುತ್ತಿದ್ದಾನೆ ಹೆಬ್ಬೆಟ್ಟು. ಇದಕ್ಕೆ ಸಾಕ್ಷಿಯಾಗಿ ಕಲ್ಲು, ಮರಳು ಕ್ವಾರಿಗಳನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ಅಟ್​ ದೀ ಸೇಮ್ ಟೈಂ ಶಿವಮೊಗ್ಗದಲ್ಲಿ ಡಿವೈಎಸ್​ಪಿಯಾಗಿ ಬಾಲ್​ರಾಜ್​ ಇದ್ದಾರೆ. 

ನಿಮಗೆ ಗೊತ್ತಾ?

ಬೆಂಗಳೂರಿನ ಸೋ ಕಾಲ್ಡ್​ ಅಂಡರ್​ವರ್ಲ್ಡ್​ ನ್ನ ಕಂಟ್ರೋಲ್  ಮಾಡಿದವರ ಪೈಕಿ ಬಾಲ್​ರಾಜ್​ , ಇನ್​ಸ್ಟೆಪಕ್ಟರ್ ಅಂಜನ್​ ಕುಮಾರ್, ಇನ್​ಸ್ಪೆಕ್ಟರ್ ಮಂಜುನಾಥ್​ರವರ ಟೀಮ್​ನ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಈ ಟೀಂನ್ನ ಶಿವಮೊಗ್ಗ ಕರೆತಂದವರು ಅಂದಿನ ಗೃಹಸಚಿವ ಆರಗ ಜ್ಞಾನೇಂದ್ರ ರವರು. ಕಾರಣ ಶಿವಮೊಗ್ಗ ಶಾಂತಿಯುತವಾಗಿರಬೇಕು ಎನ್ನುವುದಾಗಿತ್ತು.

ಅದರಂತೆ ಶಿವಮೊಗ್ಗಕ್ಕೆ ಬಂದ ಬಾಲರಾಜ್ ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊಂದೆಡೆ   ಸಕ್ರಿಯವಾಗಿರುವ ಹೆಬ್ಬೆಟ್ಟು ಮಂಜ ರೌಡಿ ನಿಗ್ರಹದಳಕ್ಕೆ ಸವಾಲಾಗಿದ್ದಾನೆ. ಮೇಲಾಗಿ  ಆತ ಕಟ್ಟುತ್ತಿರುವ ಕ್ವಾರಿ ಮಾಫಿಯಾ ಅಪಾಯಕಾರಿ..ರೌಡಿ ಜಗತ್ತು ಆರ್ಥಿಕವಾಗಿ ಗಟ್ಟಿಯಾದರೆ, ಅದರ ದೊಡ್ಡು ಪೆಟ್ಟು ಬೀಳುವುದು ಸಮಾಜದ ಮೇಲೆ ಅನ್ನೋದು ಎಲ್ಲಿರಗೂ ಗೊತ್ತಿರುವ ವಿಚಾರ!.  ಕೇಸ್ ಗಳಾದ್ರೆ, ಪೊಲೀಸ್ಸು ಕೋರ್ಟು ಲಾಯರ್ರು ,ಮೀಡಿಯಾ, ಜೈಲು ಬೇಲು ಎಲ್ಲವನ್ನು ಕೈಯಲ್ಲಿರುವ ಹಣ ಸಂಭಾಳಿಸುತ್ತೆ. ಆ ಮೂಲಕ ರೌಡಿ ಜಗತ್ತು ವಿಜ್ರಂಭಿಸಲು ಆರಂಭಿಸಿದರೆ, ನೊಂದವರಿಗೆ ನ್ಯಾಯ ಸಿಗುವುದಿಲ್ಲ.  

ಇನ್ನಷ್ಟು ಸುದ್ದಿಗಳು



 ​