ಕಾಸಲ್ಲ ಈ ಹುಂಡಿಗೆ ದೇವರನ್ನೇ ಹಾಕಬೇಕು! ಏಕೆ ಗೊತ್ತಾ? ಬೆಂಗಳೂರಿಗರ ಶವ ತುಂಗಾ ನದಿಯಲ್ಲಿ ಪತ್ತೆ! ಟಿಪ್ಪರ್ ಅಪಘಾತದಲ್ಲಿ ಶಿವಮೊಗ್ಗ ದಂಪತಿ ಸಾವು!

Shivamogga Chikmagalur District Short News of various eventsಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆ ವಿವಿಧ ಘಟನೆಗಳ ಶಾರ್ಟ್ ನ್ಯೂಸ್

ಕಾಸಲ್ಲ ಈ ಹುಂಡಿಗೆ ದೇವರನ್ನೇ ಹಾಕಬೇಕು! ಏಕೆ ಗೊತ್ತಾ? ಬೆಂಗಳೂರಿಗರ ಶವ ತುಂಗಾ ನದಿಯಲ್ಲಿ ಪತ್ತೆ!  ಟಿಪ್ಪರ್ ಅಪಘಾತದಲ್ಲಿ  ಶಿವಮೊಗ್ಗ ದಂಪತಿ ಸಾವು!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಇದು ಕಾಣಿಕೆ ಹುಂಡಿಯಲ್ಲ ದೇವರ ಹುಂಡಿ

ಸಾಮಾನ್ಯವಾಗಿ ದೇವಾಲಯಗಳಲ್ಲಿ ಕಾಣಿಕೆ ಹುಂಡಿ ಕಾಣಸಿಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ನಲ್ಲಿ, ದೇವರ ಹುಂಡಿಯನ್ನು ದೇವಾಲಯಗಳಲ್ಲಿ ಇಡಲಾಗುತ್ತಿದೆ.  ಸಾಗರದ ಆನಂದ ಸಾಗರ ಟ್ರಸ್ಟ್ ಮತ್ತು ನೆರವಿನ ಕೈಗಳು ಟ್ರಸ್ಟ್ ಜಂಟಿಯಾಗಿ ಇಂತಹದ್ದೊಂದು ಪ್ರಯೋಗವನ್ನು ಮಾಡಿದೆ. 

ಅಂದಹಾಗೆ ದೇವರ ಹುಂಡಿ ಎನ್ನುವುದಕ್ಕೂ ಕಾರಣವಿದೆ.  ಮನೆಯಲ್ಲಿರುವ ಹಳೆಯ ದೇವರ ಫೋಟೋಗಳನ್ನು ಎಲ್ಲಿಯೋ ಎಸೆದು  ಬಿಡುತ್ತಾರೆ. ಅಂತಹ ಫೋಟೋಗಳನ್ನು ಎಲ್ಲಂದರಲ್ಲಿ ಎಸೆಯದೇ ಈ ಹುಂಡಿಯೊಳಗೆ ಹಾಕಬಹುದು.ಇದರಿಂದ ಭಕ್ತರ ಮನಸ್ಸಿಗೂ ಸಮಾಧಾನ ಹಾಗೂ ಹಳೆಯ ವಿಸರ್ಜಿತ ದೇವರ ಫೋಟೋಗಳು ಸಹ ಸರಿಯಾಗಿ ವಿಲೇವಾರಿ ಯಾಗುತ್ತದೆ. ಸದ್ಯ ಇಲ್ಲಿನ ಕೆಲವು ದೇವಸ್ಥಾನಗಳಲ್ಲಿ ಈ ಹುಂಡಿಯನ್ನು ಇಡಲಾಗಿದೆ.  

ಚಿಕ್ಕಮಗಳೂರಿನಲ್ಲಿ ಶಿವಮೊಗ್ಗ ಮೂಲದ ದಂಪತಿ ಸಾವು!

ನೆರೆಯ ಜಿಲ್ಲೆ ಚಿಕ್ಕಮಗಳೂರು ನಲ್ಲಿ ಶಿವಮೊಗ್ಗ  ಮೂಲದ ದಂಪತಿ ಅಪಘಾತದಲ್ಲಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ತರಿಕೆರೆಯಲ್ಲಿ ನಡೆದ ಅಪಘಾತದಲ್ಲಿ ಭದ್ರಾವತಿಯವರು ಗಾಯಗೊಂಡಿದ್ದ ಘಟನೆ ಬೆನ್ನಲ್ಲೆ ಈ ಘಟನೆ ಸಂಭವಿಸಿದೆ. ಕಡೂರು ಮೂಡಿಗೆರೆ ಹೆದ್ದಾರಿಯಲ್ಲಿ ಟಿಪ್ಪರ್ ಹಾಗೂ ಕಾರು ಮತ್ತು ಬೈಕ್​ಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಶಿವಮೊಗ್ಗಕ್ಕೆ ಬೈಕ್​ನಲ್ಲಿ ಬರುತ್ತಿದ್ದ ದಂಪತಿ ಮೃತಪಟ್ಟಿದ್ಧಾರೆ. ಇನ್ನೂ ಘಟನೆಯಲ್ಲಿ ಪುಟ್ಟ ಮಗುವೊಂದರ ಸ್ಥಿತಿ ಗಂಭೀರವಾಗಿದೆ.  

ತುಂಗಾನದಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿಗರ ಶವ ಪತ್ತೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಭೀಮನಕಟ್ಟೆಯಲ್ಲಿ ಇಬ್ಬರು ಯುವಕರು ನೀರುಪಾಲಾಗಿದ್ದರು. ಆನಂತರ ಅವರಿಗಾಗಿ ಹುಡುಕಾಟ ಆರಂಭವಾಗಿತ್ತು. ಬೆಂಗಳೂರು ಮೂಲದ ಗೌತಮ್ ಹಾಗೂ ಸುಜಯ್ ಎಂಬವರು ಇನ್ನೊಬ್ಬ ಸ್ನೇಹಿತನ ಜೊತೆ ತೀರ್ಥಹಳ್ಳಿಗೆ ಪ್ರವಾಸಕ್ಕೆ ಬಂದಿದ್ದು. ಭೀಮನಕಟ್ಟೆಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರಿನಲ್ಲಿ ಕಣ್ಮರೆಯಾಗಿದ್ದರು. ಇವರಿಗಾಗಿ ಈಶ್ವರ್ ಮಲ್ಪೆ ಸೇರಿದಂತೆ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿತ್ತು. ತೀವ್ರ ಹುಡುಕಾಟದ ನಂತರ ಗೌತಮ್​ರ ಮೃತದೇಹ ಪತ್ತೆಯಾಗಿತ್ತು. ಇದಾದ ಒಂದು ದಿನದ ಬಳಿಕ ಸುಜಯ್ ಮೃತದೇಹವು ಸಹ ಪತ್ತೆಯಾಗಿದೆ.  


ಇನ್ನಷ್ಟು ಸುದ್ದಿಗಳು