ಕಾಗೋಡು ತಿಮ್ಮಪ್ಪನವರಿಗೆ ಅಭಿನಂದನಾ ಕಾರ್ಯಕ್ರಮ! ಜಿಲ್ಲೆಯ ಪಕ್ಷಾತೀತ ರಾಜಕಾರಣಕ್ಕೆ ಸಾಕ್ಷಿಯಾಗುತ್ತಾ ಸಮಾರಂಭ

KARNATAKA NEWS/ ONLINE / Malenadu today/ Sep 13, 2023 SHIVAMOGGA NEWS 

ಮಾಜಿ ಸಚಿವ , ಹಿರಿಯ ಮುಖಂಡ ದೇವರಾಜು ಅರಸು ಪ್ರಶಸ್ತಿ ವಿಜೇತ ಕಾಗೋಡು ತಿಮ್ಮಪ್ಪನವರಿಗೆ ಅಭಿನಂದನಾ ಸಮಾರಂಭವನ್ನು ಇದೇ ಸೆಪ್ಟೆಂಬರ್ 16 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ , ಜಾತ್ಯಾತೀತವಾಗಿ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿ ತಿಳಿಸಿದೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್​ನಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಮಿತಿ ಸದಸ್ಯರು ಕಾಗೋಡು ತಿಮ್ಮಪ್ಪರವರು ಅಪರೂಪದ ವ್ಯಕ್ತಿಯಾಗಿದ್ದು,  ಶೋಷಿತರ ಪರವಾಗಿ ಹೋರಾಡಿದವರು ಎಂದು ಬಣ್ಣಿಸಿದ್ದಾರೆ.  ದೇವರಾಜ ಅರಸುರವರ ಪ್ರತಿರೂಪವೇ ಆಗಿರುವ ಅವರಿಗೆ ಪ್ರಶಸ್ತಿ ಬಂದಿದ್ದು ಪ್ರಶಸ್ತಿಗೂ ಗೌರವ ಬಂದಂತಾಗಿದೆ ಎಂದು ಅಭಿಪ್ರಾಯ ಪಟ್ಟರು. ಮೇಲಾಗಿ ಹಿರಿಯ ಮುಖಂಡರು ಎಲ್ಲಾ ಪಕ್ಷದ ಮುಖಂಡರನ್ನ , ಎಲ್ಲಾ ಸಮುದಾಯದ ನಾಯಕರನ್ನ ಪ್ರೀತಿಯಿಂದಲೇ ನೋಡಿದ್ದಾರೆ. ವಿಧಾನಸಭಾ ಅಧ್ಯಕ್ಷರಾಗಿ ನಾಡು ಮೆಚ್ಚುವಂತಹ ಕೆಲಸವನ್ನು ಕಾಗೋಡು ತಿಮ್ಮಪ್ಪನವರು ಮಾಡಿದ್ದಾರೆ , ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲು ತೀರ್ಮಾನಿಸಿದ್ದಾಗಿ ತಿಳಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

 


 

Leave a Comment