ಶಿವಮೊಗ್ಗ | ಮಳೆಯ ಜಿಲ್ಲಾ ಪ್ರವಾಸ | ಸಿಡಿಲಿಗೆ ಓರ್ವ ಸಾವು, ಇನ್ನೊಬ್ಬರ ಸ್ಥಿತಿ ಗಂಭೀರ

Shimoga | Rain District Tour | One killed, another critical due to lightning shivamogga rain news today

ಶಿವಮೊಗ್ಗ | ಮಳೆಯ ಜಿಲ್ಲಾ ಪ್ರವಾಸ | ಸಿಡಿಲಿಗೆ ಓರ್ವ  ಸಾವು, ಇನ್ನೊಬ್ಬರ ಸ್ಥಿತಿ ಗಂಭೀರ
shivamogga rain news today

SHIVAMOGGA | MALENADUTODAY NEWS |  Apr 20, 2024   

ಸೆಖೆಯಲ್ಲಿ ಕುದ್ದು ಹೋಗಿದ್ದ ಶಿವಮೊಗ್ಗಕ್ಕೆ ನಿನ್ನೆ ಸಂಜೆಯಿಂದ ವರುಣಾಗಮನವಾಗಿದೆ. ಮಳೆ ಸಂಜೆಯಿಂದಲೂ ಇದುವರೆಗೂ ಸುರಿಯುತ್ತಿದೆ. ಬೆಳಗ್ಗೆ ಬೆಳಗ್ಗೆ ಗುಡುಗು ಸಿಡಿಲಿನ ಅಬ್ಬರ ಕೇಳಿಬರುತ್ತಿದೆ. ಇದರ ನಡುವೆ ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದಾರೆ. 

ಸಿಡಿಲಿಗೆ ಓರ್ವ ಬಲಿ

ಇನ್ನೂ ನಿನ್ನೆ ಸಂಜೆ ಸುರಿದ ಮಳೆಯ ನಡುವೆ ಬಡಿದ ಸಿಡಿಲಿಗೆ ಓರ್ವರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗದ ಹರಮಘಟ್ಟದಲ್ಲಿ ಘಟನೆ ನಡೆದಿದೆ. ಹೊಲಕ್ಕೆ ಹೋಗಿ ವಾಪಸ್‌ ಬರುತ್ತಿದ್ದ ವೇಳೆ ಸಿಡಿಲು ಬಡಿದು ರಾಕೇಶ್‌ ಎಂಬ 28 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಇನ್ನೊಬ್ಬರಿಗೆ ಗಂಭೀರ ಗಾಯವಾಗಿದೆ.