ಶಿವಮೊಗ್ಗ ಕಾಂಗ್ರೆಸ್​ ಅಭ್ಯರ್ಥಿಗೆ ಈಶ್ವರಪ್ಪನವರೇ ಪ್ರಭಾವ ಬಳಸಿ ಟಿಕೆಟ್​ ಕೊಡಿಸಿದ್ರಾ!? ಹೆಚ್​ಸಿ ಯೋಗೇಶ್​ ಗೆಲ್ಲಲು ಕಾರಣ ಯಾರು!?

Did Eshwarappa use his influence to give ticket to Shivamogga Congress candidate? Who is responsible for HC Yogesh's victory!?

ಶಿವಮೊಗ್ಗ ಕಾಂಗ್ರೆಸ್​ ಅಭ್ಯರ್ಥಿಗೆ ಈಶ್ವರಪ್ಪನವರೇ ಪ್ರಭಾವ ಬಳಸಿ ಟಿಕೆಟ್​ ಕೊಡಿಸಿದ್ರಾ!? ಹೆಚ್​ಸಿ ಯೋಗೇಶ್​ ಗೆಲ್ಲಲು ಕಾರಣ ಯಾರು!?
ಶಿವಮೊಗ್ಗ ಕಾಂಗ್ರೆಸ್​ ಅಭ್ಯರ್ಥಿಗೆ ಈಶ್ವರಪ್ಪನವರೇ ಪ್ರಭಾವ ಬಳಸಿ ಟಿಕೆಟ್​ ಕೊಡಿಸಿದ್ರಾ!? ಹೆಚ್​ಸಿ ಯೋಗೇಶ್​ ಗೆಲ್ಲಲು ಕಾರಣ ಯಾರು!?

KARNATAKA NEWS/ ONLINE / Malenadu today/ May 2, 2023 GOOGLE NEWS


ಶಿವಮೊಗ್ಗ ಜೆಡಿಎಸ್ ಬಿಜೆಪಿಯ ಬಿ ಟೀಂ ಅಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಹೆಚ್.ಸಿ ಏ.ಯೋಗೀಶ್ ಅವರೇ ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್‌ ಆರೋಪಿಸಿದ್ದಾರೆ. ಇವತ್ತು ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ ಹೆಚ್.ಸಿ ಯೋಗೇಶ್‌ ಕೂಡ ಈಶ್ವರಪ್ಪ ಅವರ ನೆರಳು ಎಂದಿದ್ದಾರೆ. 

ಇದನ್ನು ಸಹ ಓದಿ :  ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ  ಶಿವಣ್ಣ

ಕೆ.ಎಸ್​.ಈಶ್ವರಪ್ಪನವರ ಮನೆಯಿರುವ ವಾರ್ಡ್​ನಲ್ಲಿ  ಹೆಚ್‌.ಸಿ. ಯೋಗೇಶ್ ರವರು ಗೆದ್ದು ಬಂದಿದ್ಧಾರೆ. ಪಾಲಿಕೆಯ ಎಲ್ಲಾ ಕಡೆ ಗೆಲ್ಲುವ ಸಾಮರ್ಥ್ಯ ಇರುವವರ  ಮನೆ ಇರುವ ವಾರ್ಡ್​ನಲ್ಲಿ ಹೆಚ್​ಸಿ ಯೋಗೇಶ್​ರವರು ಮೂರು ಸಲ ಗೆದ್ದು ಬರುತ್ತಾರೆ. ತಮ್ಮ ಪ್ರಭಾವವನ್ನು ಬಳಸಿ ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪ ಅವರೇ ಕಾಂಗ್ರೆಸ್ ಟಿಕೆಟ್ ಕೊಡಿಸಿರುವ ಸಾಧ್ಯತೆಯೂ ಇದೆ ಎಂದು ದೂರಿದ್ಧಾರೆ. 

READ/ ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ! 

ನಾಳೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮನ

ನಾಳೆ ನಗರಕ್ಕೆ ಮಾಜಿ ಮುಖ್ಯ ಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಆಗಮಿಸಲಿದ್ದಾರೆ. 6 ಗಂಟೆಗೆ ಎನ್‌ಇಎಸ್‌ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್​ ಅಭ್ಯರ್ಥಿ ಆಯನೂರು ಮಂಜುನಾಥ್​ ಮಾಹಿತಿ ನೀಢಿದ್ರು. ನಮ್ಮದು  ಜಾತ್ಯತೀತ ಪಕ್ಷ. ಶಾಂತಿಯನ್ನು ಬಯಸುವುದೇ ನಮ್ಮ ಗುರಿ, ಶಾತಿ ನೆಮ್ಮದಿಯನ್ನು ಬಯಸುವ ಎಲ್ಲರೂ ನಮ್ಮನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.

ಇದನ್ನು ಸಹ ಓದಿ : ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?


ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಯಾರು ಸ್ಪರ್ಧಿ? ಹಣಾಹಣಿ ಹೇಗಿದೆ? ನಿರ್ಣಾಯಕ ಯಾರು? ಪ್ಲಸ್ ಮೈನಸ್ ಏನು?  ವಿವರ ಇಲ್ಲಿದೆ 



ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ -2023 ರ ಅಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕುತೂಹಲವಿಲ್ಲದ ಆದರೆ ಅಚ್ಚರಿ ಮೂಡಿಸಬಲ್ಲ ಕ್ಷೇತ್ರವಾಗಿದೆ. ಇಲ್ಲಿಯ ಸ್ಪರ್ಧಿಗಳು ಸ್ಥಳೀಯವಾಗಿ ಗೊತ್ತಿರುವವರೆ, ಈ ಪೈಕಿ ಗೆಲ್ಲೋರ್ಯಾರು ಎಂಬ ಪ್ರಶ್ನೆಗೆ ಉತ್ತರವೂ ಈ ಕ್ಷೇತ್ರದ ಮನೆಗಳಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿದೆ. ಹಾಗಿದ್ದರೂ ಇಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳುವ ಸಾಧ್ಯತೆಯನ್ನ ಅಲ್ಲಗೆಳೆಯುವಂತಿಲ್ಲ. ಏಕೆ ಅನ್ನೋದನ್ನ ತಿಳಿದುಕೊಳ್ಳಲು ಕ್ಷೇತ್ರದ ಅಂಕಿಅಂಶಗಳನ್ನು ತಿಳಿದುಕೊಳ್ಳಬೇಕು.. 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

  • ಪುರುಷ ಮತದಾರರು- 104640

  • ಮಹಿಳಾ ಮತದಾರರು-105768

  • ಒಟ್ಟು ಮತದಾರರು-210412

ಇತಿಹಾಸ 

ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ ನಂತರ ಕ್ಷೇತ್ರ ರಾಜಕೀಯ ಪಲ್ಲಟಗಳಿಗೆ ಒಳಗಾಗಿದೆ.  ಇಲ್ಲಿ  ಲಿಂಗಾಯಿತ ಮತ್ತು ಬೋವಿ ಸಮಾಜದ ಮತಗಳು ಹೆಚ್ಚಿದೆ. 

1972ರವರೆಗೆ ಶಿಕಾರಿಪುರ ಮೀಸಲು ಕ್ಷೇತ್ರವಾಗಿತ್ತು. ಆನಂತರ 1977 ರಲ್ಲಿ  ಹೊಳೆಹೊನ್ನೂರು ಮೀಸಲು ಕ್ಷೇತ್ರವಾಯ್ತು. 2004 ರಲ್ಲಿ ಹೊಳೆಹೊನ್ನೂರು ಕ್ಷೇತ್ರವನ್ನ ತಗೆದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಾಡಲಾಯಿತು. 1977 ರಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕಾಂಗ್ರೇಸ್ ಹಿಡಿತದಲ್ಲಿತ್ತು. ಬದಲಾದ ಕಾಲಮಾನದಲ್ಲಿ ಇಲ್ಲಿ ಜೆಡಿಎಸ್ ತದನಂತರ ಬಿಜೆಪಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜಾತಿವಾರು ಅಂದಾಜು ಲೆಕ್ಕಾಚಾರ

ಲಿಂಗಾಯತರು 55 ಸಾವಿರ, ಬೋವಿ 35-37 ಸಾವಿರ,  ಎಕೆ 28 ಸಾವಿರ, ಕೊರಚ -ಕೊರಮ  ಸಮುದಾಯ 800, ಉಪ್ಪಾರ 10-12 ಸಾವಿರ,  ಕುರುಬ 7-8 ಸಾವಿರ,  ಲಂಬಾಣಿ 18-20 ಸಾವಿರ, ಮುಸ್ಲಿಂ 16-18 ಸಾವಿರ, ಕುಂಚಿಟಿಗರು 6 ಸಾವಿರ, ಕ್ರಿಶ್ಚಿಯನ್ 1500, ಒಕ್ಕಲಿಗರು 5 ಸಾವಿರ, ವಾಲ್ಮಿಕಿ 15- 16 ಸಾವಿರ, ಈಡಿಗರು-12,000, ಒಟ್ಟು 2.10.412 ಮತದಾರರು ಇದ್ದಾರೆ. 

ನಿರ್ಣಾಯಕ ಯಾರು?

ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟ ನಾಯಕರೇ ಕಣದಲ್ಲಿ ಪೈಪೋಟಿ ನಡೆಸುತ್ತಾರೆ. ದೊಡ್ಡ ಸಂಖ್ಯೆಯನ್ನು ಹೊಂದಿರುವ ಲಿಂಗಾಯತರು ಹಾಗೂ ಬೋವಿ ಮತಗಳು ಇಲ್ಲಿ ನಿರ್ಣಾಯಕವಾಗುತ್ತವೆ. ಅಂತಿಮವಾಗಿ ಅತಿಹೆಚ್ಚು ಮತಗಳು ಯಾರ ಕಡೆ ಟರ್ನ್ ಆಗುತ್ತವೆ ಎಂಬುದೇ ಇಲ್ಲಿ ಅಚ್ಚರಿಯ ಆಯ್ಕೆಗೆ ಕಾರಣವಾಗುತ್ತದೆ. 

ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು

ಶಿವಮೊಗ್ಗ ಗ್ರಾಮಾಂತರ-111 ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಶ್ರೀನಿವಾಸ್ ಎಸ್ ಕೆ, ಆಮ್‍ಆದ್ಮಿ ಪಾರ್ಟಿಯ ಮಂಜುನಾಥ ಎಸ್ ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಅಶೋಕನಾಯ್ಕ, ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ.ವಿಜಯ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.ಟಿ, ಪ್ರವೀಣ್ ನಾಯ್ಕ್  ಕಣದಲ್ಲಿ ಉಳಿದಿದ್ದಾರೆ.

ಯಾರಿಗೆ ಪ್ಲಸ್ ಯಾರಿಗೆ ಮೈನಸ್

ಕ್ಷೇತ್ರದಲ್ಲಿ ಕಾಂಗ್ರೇಸ್ ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಾಣುತ್ತಿದೆ  ಕಾಂಗ್ರೇಸ್ ನಿಂದ ಮಾಜಿ ಶಾಸಕ ದಿವಂಗತ ಕರಿಯಣ್ಣನವರ ಪುತ್ರ ಶ್ರೀನಿವಾಸ್ ಕರಿಯಣ್ಣ ಸ್ಪರ್ದಾ ಕಣದಲ್ಲಿದ್ದಾರೆ. 

ಜೆಡಿಎಸ್ ನಿಂದ ಶಾರದಾ ಪೂರ್ಯನಾಯಕ್ ಹಾಗು ಬಿಜೆಪಿಯಿಂದ ಅಶೋಕ್ ನಾಯ್ಕ್ ಸ್ಪರ್ಧಿಸಿದ್ದಾರೆ. 

ಜೆಡಿಎಸ್ ಅಭ್ಯರ್ಥಿ ಶಾರದ ಪೂರ್ಯಾ ನಾಯಕ್ ಗೆ ಈ ಹಿಂದಿನ ಸೋಲಿನ ಅನುಕಂಪ ಹಾಗೂ ಹಾಲಿ ಶಾಸಕರ ಮೇಲಿನ ಅಸಮಾಧಾನಗಳು ಪ್ಲಸ್​ ಆಗಬಹುದು. .ಕಳೆದ ಬಾರಿ 65549 ಮತಗಳನ್ನು ಪಡೆದು 3777 ಮತಗಳಿಂದ ಸೋಲನ್ನು ಅನುಭವಿಸಿದ್ದ ಶಾರದಾ ಪೂರ್ಯನಾಯಕ್ ಸೋಲಿನ ನಂತರವೂ ಐದು ವರ್ಷ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸಿದ್ರು. ಇದು ಮತದಾರರಲ್ಲ ಅನುಕಂಪ ಮೂಡಿಸಿದೆ. 

ಇನ್ನು ಲಿಂಗಾಯಿತ ಮತಗಳು ಜೆಡಿಎಸ್ ಪರವಾದ ಒಲುವು ಹೊಂದಿದೆ.  ಮೋದಿ ಹಾಗೂ ಬಿಜೆಪಿ ಅಲೆ ಮತ್ತು ಕಾಂಗ್ರೆಸ್​ನ ಪ್ರಬಲ ಪೈಪೋಟಿ   ಜೆಡಿಎಸ್​ಗೆ ಇಲ್ಲಿ ಮೈನಸ್​ ಪಾಯಿಂಟ್​

ಅಚ್ಚರಿ ಮೂಡಿಸ್ತಾರಾ ಮೋದಿ

ಬಿಜೆಪಿಯ ಅಶೋಕ್ ನಾಯಕ್ ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರೇ ಶ್ರೀರಕ್ಷೆ. ಸ್ವಪಕ್ಷೀಯರು, ಸ್ಥಳಿಯರ ವಿರೋಧದ ನಡುವೆಯು ಟಿಕೆಟ್​ ಪಡೆದು ಅಖಾಡದಲ್ಲಿ ಗೆಲುವಿನ ವಿಶ್ವಾಸ ಮೂಡಿಸುತ್ತಿದ್ದಾರೆ. ಬಿಎಸ್​ವೈರ ಪ್ರತಿಷ್ಟೆಯ ಕಣಗಳಲ್ಲಿ ಗ್ರಾಮಾಂತರ ಕ್ಷೇತ್ರವೂ ಒಂದಾಗಿದ್ದು, ಅಶೋಕ್​ ನಾಯ್ಕ್​ರ  ಪರ ದೊಡ್ಡ ಕಾರ್ಯಪಡೆಯೇ ಕೆಲಸ ಮಾಡುತ್ತಿದೆ. ಹಾಗಿದ್ದರೂ, ಪಕ್ಷದೊಳಗಿನ ವಿರೋಧ ಮತ್ತು ಅಸಹಕಾರ ಇವರಿಗೆ ಮೈನಸ್ ಪಾಯಿಂಟ್ . ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಕಡೆಗಳಿಗೆಯಲ್ಲಿ ಆಯನೂರಿಗೆ ಬರುತ್ತಿರುವುದು ಅಶೋಕ್​ ನಾಯ್ಕ್​ರಿಗೆ ದೊಡ್ಡ ಪ್ಲಸ್​ ಆಗುವ ಸಾಧ್ಯತೆ ಇದೆ.



ಇನ್ನು ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಶ್ರೀನಿವಾಸ್ ಕರಿಯಣ್ಣರಿಗೆ ಬಂಡಾಯ ಕಾಂಗ್ರೇಸ್ ಅಭ್ಯರ್ಥಿಗಳೇ  ಸ್ಪರ್ದೆಯೊಡ್ಡುವ ಅಪಾಯವಿತ್ತು. ಅಂತಿಮ ಹಂತದಲ್ಲಿ  ಬಂಡಾಯ ಅಭ್ಯರ್ಥಿಗಳಾದ ರವಿ ಕುಮಾರ್, ನಾರಾಯಣಸ್ವಾಮಿ ನಾಮಪತ್ರ ಹಿಂಪಡೆದಿದ್ದಾರೆ. ಇದು ಪ್ಲಸ್​ ಆಗುತ್ತಿದೆ. ಇನ್ನೂ ಬಂಡಾಯ ನಾಯಕರನ್ನ ಕ್ಷೇತ್ರದಲ್ಲಿ ಉತ್ತಮವಾಗಿ ಬಳಸಿಕೊಂಡು ಪ್ರಚಾರ ಮಾಡಿದರೆ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ದೆ ಎರ್ಪಡುವುದರಲ್ಲಿ ಅಚ್ಚರಿಯಿಲ್ಲ. ಇಲ್ಲವಾದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಮೇಲಾಗಿ ಸಮನ್ವಯತೆಯ ಕೊರತೆ ಕಾಂಗ್ರೆಸ್​ಗೆ ಇಲ್ಲಿ ಮೈನಸ್ ಪಾಯಿಂಟ್​.. 




  

Malenadutoday.com Social media