ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..?

Shivamogga SP Lakshmiprasad and the story of politics

ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..?
Shivamogga SP Lakshmiprasad and the story of politics

Shivamogga SP Lakshmiprasad  ಶಿವಮೊಗ್ಗದ ಈಗಿನ ವಾತಾವರಣದಲ್ಲಿ ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..?

ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ರಾಜಕೀಯ ಒತ್ತಡಗಳಿಗೆ ಮಣಿಯದೆ ಖಡಕ್ ಆಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿಗಳ ದೊಡ್ಡ ಪಟ್ಟಿಯೇ ಇದೆ.

ಎಸ್ಪಿ ಸಾಂಗ್ಲಿಯಾನ. ಕೆಂಪಯ್ಯ, ಕಮಲ್ ಪಂಥ್, ಅರುಣ್ ಚಕ್ರವರ್ತಿ ಮುರುಗನ್, ರಮಣ್ ಗುಪ್ತಾ, ಕೌಶಲೇಂದ್ರ ಕುಮಾರ್ ರಂತಹ ಅಧಿಕಾರಿಗಳು ಯಾವ ರಾಜಕಾರಣಿಗಳಿಗೂ ಮಣೆಹಾಕದೆ, ತಮ್ಮದೇ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು.

ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಐಪಿಎಸ್ ಅಧಿಕಾರಿಗಳು,,ರಾಜಕಾರಣಿಗಳ ಮೂಗಿನ ನೇರಕ್ಕೆ ಕೆಲಸ ಮಾಡುವ ಅನಿವಾರ್ಯತೆ ಎದುರಾಯಿತು.

ಇಂತಹ ಸಂದರ್ಭವನ್ನು ಚಾಣಾಕ್ಷ ರೀತಿಯಲ್ಲಿ ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸಿದ ಇಬ್ಬರು ಅಧಿಕಾರಿಗಳಿದ್ದರೆ ಅದು ರವಿ ಡಿ ಚಣ್ಣನ್ನನವರ್ ಹಾಗು ಅಭಿನವ್ ಖರೆ.

ಮತೀಯ ಗಲಭೆಗಳು ಹೆಚ್ಚಾದ ಸಂದರ್ಭದಲ್ಲಿ ಒಂದು ಕೋಮನ್ನು ಹಾಗು ಅದನ್ನು ಪ್ರತಿನಿಧಿಸುವ ಪಕ್ಷವನ್ನು ಓಲೈಸುವ ಸಲುವಾಗಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಕೂಡ ಎರಡು ಕೋಮಿಗೂ ಧಕ್ಕೆಯಾಗದಂತೆ ಈ ಅಧಿಕಾರಿಗಳು ಕೆಲಸ ಮಾಡಿ ಎರಡು ಕೋಮನಿಂದಲೂ ಸೈ ಎನಿಸಿಕೊಂಡಿದ್ದರು.

ಆದರೆ ಇತ್ತಿಚ್ಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆ ಮತೀಯವಾಗಿ ಮತ್ತಷ್ಟೂ ಸೂಕ್ಷ್ಮವಾದ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ಒನ್ ಸೈಡ್ ಆಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದು ಗುಟ್ಟಾಗಿ ಉಳಿದಿಲ್ಲ.

ಗೃಹ ಸಚಿವರ ತವರು ಜಿಲ್ಲೆಯಲ್ಲಿ ಎಂತಹ ಅಧಿಕಾರಿಯಾದ್ರೂ ಕೆಲಸ ಮಾಡಬೇಕೆಂದ್ರೆ, ತೂಗಿ ಬಾಗಿ ಅಳೆದು ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ಪುಣ್ಯಕ್ಕೆ ಇಲ್ಲಿ ಗೃಹ ಸಚಿವರಾಗಿರುವ ಆರಗಾ ಜ್ಞಾನೇಂದ್ರ ಜಿಲ್ಲೆಯ ಯಾವ ಅಧಿಕಾರಿಗಳ ಮೇಲೂ ಒತ್ತಡ ಹಾಕಿಲ್ಲ. ನಿಜ..ಆದ್ರೆ..ಅವರದ್ದೇ ಸರ್ಕಾರ ಮುನ್ನೆಡೆಸುವ ಇತರೆ ವ್ಯವಸ್ಥೆಗಳು ಪೊಲೀಸ್ ಪೋರ್ಸ್ ಗೆ ಸ್ಪೀಡ್ ಬ್ರೇಕರ್ ಗಳನ್ನೇ ಹಾಕಿತ್ತು. ಇದು ಎಸ್ಪಿ ಲಕ್ಷ್ಮಿ ಪ್ರಸಾದ್ ರವರಿಗೂ ಮುಜುಗರ ಉಂಟುಮಾಡಿತ್ತು.

ಶಿವಮೊಗ್ಗದಲ್ಲಿ ಹಿಜಾಬ್ ವಿವಾದ ಬುಗಿಲೆದ್ದಾಗ ಅದನ್ನು ನಿಯಂತ್ರಿಸುವಲ್ಲಿ ಎಸ್ಪಿ ಲಕ್ಷ್ಮಿ ಪ್ರಸಾದ್ ಪಾತ್ರ ದೊಡ್ಡದಿದೆ..ಹರ್ಷ ಕೊಲೆ ಪ್ರಕರಣದಲ್ಲಿ ಪಾರದರ್ಶಕವಾಗಿ ತನಿಖೆ ಮಾಡಿ ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದರು.

ಹರ್ಷ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಹೊರಟ ಗ್ಯಾಂಗ್ ನ್ನು ಕೊಲೆಗೂ ಮೊದಲೇ ಹಿಡಿದು ಜೈಲಿಗಟ್ಟಿದರು. ಇದು ಲಕ್ಷ್ಮಿ ಪ್ರಸಾದ್ ರವರನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಸಾವರ್ಕರ್ ವಿವಾದ ಬುಗಿಲೆದ್ದು, ಪ್ರೇಮ್ ಸಿಂಗ್ ಚೂರಿ ಇರಿತವಾದಾಗ, ಆರೋಪಿಗಳನ್ನು ಸಕಾಲದಲ್ಲಿ ಸೆರೆ ಹಿಡಿಯಲಾಯಿತು.

ಇವೆಲ್ಲಾ ಲಕ್ಷ್ಮಿ ಪ್ರಸಾದ್ ಅವಧಿಯಲ್ಲಾದ ಪ್ರಕರಣಗಳಾದ್ರೂ, ಕೆಲವೊಂದು ಘಟನೆ ಹಾಗು ವಿಚಾರದಲ್ಲಿ ಸರಿಯಾದ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ ಎಂಬ ಆತ್ಮ ಸಾಕ್ಷಿ ಅವರನ್ನು ಕಾಡುತ್ತಿದ್ದಂತೂ ಸುಳ್ಳಲ್ಲ.

ಶಿವಮೊಗ್ಗದಲ್ಲಿ ಪೊಲೀಸ್ ವ್ಯವಸ್ಥೆ ಒನ್ ಸೈಡ್ ಆಗಿದೆ ಎಂದು ಪೊಲೀಸ್ ವ್ಯವಸ್ಥೆ ಮಾತನಾಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ. ಹಾಲಿ ಈಗಿನ ಪರಿಸ್ಥಿತಿಯಲ್ಲಿ ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಎಂಬ ಪುಣ್ಯಕೋಟಿಯಂತ ಎಸ್ಪಿಗಳೇ ಆಳುವ ವ್ಯವಸ್ಥೆಗೆ ಬೇಕಾಗಿದೆ.

ಆತ್ಮವಂಚನೆ ಮಾಡಿಕೊಂಡು ಕೆಲಸ ಮಾಡುವ ದರ್ದು ಲಕ್ಷ್ಮಿ ಪ್ರಸಾದ್ ಗೆ ಇದ್ದಂತಿರಲಿಲ್ಲ. ಅವರು ಎಂದೋ ವರ್ಗಾವಣೆಯನ್ನು ಖುದ್ದು ಬಯಸಿದ್ದರು ಎನ್ನಲಾಗಿದೆ. ಈಗ ಅವರ ಸ್ಥಾನ ತುಂಬಲು ಎಸ್ಪಿ ಅಮಿತ್ ಕುಮಾರ್ ಬರುತ್ತಿದ್ದಾರೆ..ಅವರ ಬಗ್ಗೆಯೂ ಜಿಲ್ಲೆಯ ಜನತೆಯಲ್ಲಿ ಸಾಕಷ್ಟು ಕುತೂಹಲಗಳು ಗರಿಗೆದರಿವೆ.