ಶರಾವತಿ ಸಂತ್ರಸ್ತರ ಮೂಗಿಗೆ ಬಿಜೆಪಿ ಸರ್ಕಾರ ತುಪ್ಪ ಹಚ್ತಿದೆ : ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಮಲೆನಾಡಿನ ಜನಾಕ್ರೋಶ ಪ್ರತಿಭಟನಾ ಸಮಾವೇಶ ವಿಚಾರವಾಗಿ ಇವತ್ತು ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಸಿಗಬೇಕು.

ಶರಾವತಿ ಸಂತ್ರಸ್ತರ ಮೂಗಿಗೆ ಬಿಜೆಪಿ ಸರ್ಕಾರ ತುಪ್ಪ ಹಚ್ತಿದೆ : ಮಧು ಬಂಗಾರಪ್ಪ
ಶರಾವತಿ ಸಂತ್ರಸ್ತರ ಮೂಗಿಗೆ ಬಿಜೆಪಿ ಸರ್ಕಾರ ತುಪ್ಪ ಹಚ್ತಿದೆ : ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ  ಮಲೆನಾಡಿನ ಜನಾಕ್ರೋಶ ಪ್ರತಿಭಟನಾ ಸಮಾವೇಶ ವಿಚಾರವಾಗಿ ಇವತ್ತು ಸುದ್ದಿಗೋಷ್ಟಿ ನಡೆಸಿದ್ರು.  ಈ ವೇಳೆ ಮಾತನಾಡಿದ ಅವರು,  ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ನ. 28 ರಂದು ಹೋರಾಟ, ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೋರಾಟದ ರೂಪುರೇಷೆ ಈಗಾಗಲೇ ಸಿದ್ಧವಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಮತ್ತು ನಾಯಕರಾದ ಸಿದ್ಧರಾಮಯ್ಯ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ರು. 

ಆಯನೂರಿನಿಂದ ಪಾದಯಾತ್ರೆ ಅರಂಭಗೊಳ್ಳಲಿದ್ದು, ಶಿವಮೊಗ್ಗ ನಗರದ ಎನ್.ಇ.ಎಸ್. ಮೈದಾನದಲ್ಲಿ ಸಮಾರೋಪಗೊಳ್ಳಲಿದೆ ಎಂದ ಮಧು ಬಂಗಾರಪ್ಪ ಎನ್.ಇ.ಎಸ್. ಮೈದಾನದಲ್ಲಿ ಸಮಾವೇಶ ನಡೆಯಲಿದೆ. ನಾವು ಪೂರ್ವಭಾವಿ ಸಭೆ ನಡೆಸಿದ ಬಳಿಕ ಬಿಜೆಪಿ ನಾಯಕರು ಕೂಡ ಸಭೆ ನಡೆಸಿದ್ದಾರೆ. ಮಾಜಿ ಸಿ.ಎಂ. ಯಡಿಯೂರಪ್ಪ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಸಂಸದ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ಈ ವೇಳೇ 15 ದಿನಗಳಲ್ಲಿ ಈ ಬಗ್ಗೆ ಪರಿಹಾರ ಸೂಚಿಸುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದರು.  ಆದರೆ, ಸಭೆ ಮುಗಿಸಿ 15 ದಿನಗಳಾಗಿವೆ. ಇದುವರೆಗೂ ಪರಿಹಾರವನ್ನು ಸೂಚಿಸಿಲ್ಲ. 

ನಿನ್ನೆ ಶಿವಮೊಗ್ಗಕ್ಕೆ ಬಂದಿದ್ದ ಸಿ.ಎಂ. ಈ ಬಗ್ಗೆ ಪ್ರಸ್ತಾಪಿಸದೇ, ಡಿಸಿಯಿಂದ ವರದಿ ತರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಸಂತ್ರಸ್ತರು ಪ್ರಶ್ನಿಸುವಂತಾಗಿದೆ ಎಂದ ಮಧು ಬಂಗಾರಪ್ಪರವರು, ಸಂಸದರು ಸಂತ್ರಸ್ತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ರು.