ಊರು ಕೇರಿ ಬಾಗಿಲಲ್ಲಿ ಮಚ್ಚು ಹಿಡಿದು ಹೊಡೆದಾಡಿದ ಯುವಕರು! ವಿಡಿಯೋ ವೈರಲ್ ಆದಮೇಲೆ ಹೊರಬಿತ್ತು ಸುದ್ದಿ!

A video of a group of youths fighting at Harekoppa in Shikaripura has gone viral

ಊರು ಕೇರಿ ಬಾಗಿಲಲ್ಲಿ ಮಚ್ಚು ಹಿಡಿದು ಹೊಡೆದಾಡಿದ ಯುವಕರು! ವಿಡಿಯೋ ವೈರಲ್ ಆದಮೇಲೆ ಹೊರಬಿತ್ತು ಸುದ್ದಿ!
A video of a group of youths fighting at Harekoppa in Shikaripura has gone viral

SHIVAMOGGA  |  Jan 19, 2024  |  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಹಾರೆಕೊಪ್ಪ  (Harekoppa in Shikaripura) ಗ್ರಾಮದಲ್ಲಿ ನಡೆದ ಹೊಡೆದಾಟದ ವಿಡಿಯೋವೊಂದು ಇದೀಗ ಹೊರಬಿದ್ದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದದಲ್ಲಿ ಹರಿದಾಡುತ್ತಿದೆ.  

malenadutoday

ಮಚ್ಚು ಲಾಂಗು ಬೀಸಿದ ಯುವಕರು

ಹಾರೆಕೊಪ್ಪದ ಒಂದು ನಿಮಿಷ 50 ಸೆಕೆಂಡ್​​ನಷ್ಟಿರುವ ವಿಡಿಯೋದಲ್ಲಿ ಯುವಕರು ಉದ್ದ ಮಚ್ಚುಗಳನ್ನು ಬೀಸುವ ದೃಶ್ಯವಿದೆ. ಈ ವೇಳೆ ಹೆಂಗಸರು ಅಡ್ಡಬಂದು ತಮ್ಮವರನ್ನ ರಕ್ಷಿಸಿಕೊಳ್ತಿರುವ ದೃಶ್ಯ ಸೆರೆಯಾಗಿದೆ. 

malenadutoday

ಹಾರೆಕೊಪ್ಪದಲ್ಲಿ ಏನಿದು ಘಟನೆ

ವಿಡಿಯೋ ಮೂಲದ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಒಂದಿಷ್ಟು ಮಾಹಿತಿ ಲಭ್ಯವಾಗಿದೆ. ಅದರ ಪ್ರಕಾರ, ಹಾರೆಕೊಪ್ಪದಲ್ಲಿ ಬೈಕ್ ಓಡಿಸಿದ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ರಸ್ತೆಯಲ್ಲಿ ಸ್ಪೀಡಾಗಿ ಬೈಕ್ ಓಡಿಸಿದ ವಿಚಾರಕ್ಕೆ ಇಬ್ಬರು ಯುವಕರ ನಡುವೆ ವಾಗ್ವಾದ ನಡೆದು ಅದು ವಿಕೋಪಕ್ಕೆ ಹೋಗಿದೆ. 

malenadutoday

ವಿಡಿಯೋ ವೈರಲ್ 

 

ಅಲ್ಲದೆ ಪರಸ್ಪರ ಹೊಡೆದಾಡಿದ್ದಾರೆ. ಈ ವೇಳೆ ಎರಡು ಕಡೆಯವರು ಅಲ್ಲಿ ಜಮಾಯಿಸಿದ್ದಾರೆ. ಇಬ್ಬರ ಹೊಡೆದಾಟ ಗುಂಪಿನ ನಡುವೆ ಫೈಟ್ ಆಗಿ ಮಾರ್ಪಾಡಾಗಿದೆ. ಊರಿನವರು ಸೇರಿದ್ದಾರೆ. ಈ ವೇಳೆ ಅಲ್ಲಿದ್ದ ಯುವಕರು ಕೈಲಿ ಮಚ್ಚು ಹಿಡಿದು ಬೀಸಿದ್ದಾರೆ. ಈ ವೇಳೆ ಕೆಲವರು ಅವರನ್ನ ಹಿಡಿದು ಮಚ್ಚು ಕಸಿದುಕೊಳ್ಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.   

malenadutoday

ಶಿಕಾರಿಪುರ ಗ್ರಾಮಾಂತರ ಪೊಲೀಸ್‘ ಸ್ಟೇಷನ್​ನಲ್ಲಿ ಕೇಸ್​

ಮಲೆನಾಡು ಟುಡೆ ಗೆ ಸಿಕ್ಕಂತ ಮಾಹಿತಿ ಪ್ರಕಾರ, ಹಾರೆಕೊಪ್ಪದಲ್ಲಿ ನಡೆದ ಘಟನೆ ಸಂಬಂಧ ಎರಡು ಪ್ರತ್ಯೇಕ ಕೇಸ್ ದಾಖಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ ನಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ವಿಚಾರಣೆ ಸಹ ನಡೆಸಿದ್ದಾರೆ.