ಡಿಸಿಸಿ ಬ್ಯಾಂಕ್​ ನಲ್ಲಿ ಬಿಜೆಪಿಯ ಮತ ಕಾಂಗ್ರೆಸ್​ಗೆ ಶಿಫ್ಟ್ ! ಅವಿಶ್ವಾಸ ನಿರ್ಣಯದಲ್ಲಿ ಗೆಲುವಿನ ಹಸ್ತ! ನಡೆದಿದ್ದೇನು?

The Congress-backed directors have won the no-confidence motion against Channaveerappa, chairman of DCC Bank in Shivamogga ಶಿವಮೊಗ್ಗದ ಡಿಸಿಸಿ ಬ್ಯಾಂಕ್​ ನ ಅಧ್ಯಕ್ಷ ಚನ್ನವೀರಪ್ಪರವರ ವಿರುದ್ದದ ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ

ಡಿಸಿಸಿ ಬ್ಯಾಂಕ್​ ನಲ್ಲಿ  ಬಿಜೆಪಿಯ ಮತ ಕಾಂಗ್ರೆಸ್​ಗೆ ಶಿಫ್ಟ್ ! ಅವಿಶ್ವಾಸ ನಿರ್ಣಯದಲ್ಲಿ ಗೆಲುವಿನ ಹಸ್ತ! ನಡೆದಿದ್ದೇನು?

KARNATAKA NEWS/ ONLINE / Malenadu today/ Jul 28, 2023 SHIVAMOGGA NEWS

ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ (DCC BANK) ನ ಅಧ್ಯಕ್ಷ ಚೆನ್ನವೀರಪ್ಪರವರ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಇವತ್ತು ಕಾಂಗ್ರೆಸ್​ ಮೇಲುಗೈ ಸಾಧಿಸಿದೆ. ಬಾಕಿ ಉಳಿದಿರುವ ಅಧಿಕಾರ ಅವಧಿ 9 ತಿಂಗಳಿಗೆ ನೂತನ ಅಧ್ಯಕ್ಷರು ಯಾರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

ಕಾಂಗ್ರೆಸ್‌ ಪಕ್ಷ ಬೆಂಬಲಿತ ನಿರ್ದೇಶಕರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ  ಚನ್ನವೀರಪ್ಪರವರ ಅವಿಶ್ವಾಸ ಮಂಡಿಸಿದ್ದರು. ಈ ಸಂಬಂದ ಇವತ್ತು ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 12.30 ರ ನಂತರ ನಡೆದ ಪ್ರಕ್ರಿಯೆಯಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 9 ಮತಗಳು ಲಭ್ಯವಾಗಿದೆ. ಅಧ್ಯಕ್ಷ ಚೆನ್ನವೀರಪ್ಪರವರ ಪರವಾಗಿ ಕೇವಲ ಮೂರು ಮತಗಳು ದಾಖಲಾಗಿದೆ. 

ಅವಿಶ್ವಾಸ ನಿರ್ಣಯ ಪಾಸಾಗಲು 9 ನಿರ್ದೇಶಕರ ಬೆಂಬಲ ಅಗತ್ಯವಿತ್ತು. ಈ ಮಧ್ಯೆ ಡಿಸಿಸಿ ಬ್ಯಾಂಕ್‌ನಲ್ಲಿ ಜೆಡಿಎಸ್‌ ಬೆಂಬಲಿತ ನಿರ್ದೇಶಕ ಜೆ.ಪಿ.ಯೋಗೇಶ್‌ ಕಾಂಗ್ರೆಸ್​ ಬೆಂಬಲಿತ ನಿರ್ದೇಶಕರ ಪರವಾಗಿದ್ದರು. ಇನ್ನೂ ಇವತ್ತು ನಡೆದ ಗೊತ್ತುವಳಿ ನಿರ್ಣಯ ಮಂಡನೆಯ ವೇಳೆ ಬಿಜೆಪಿ ಪಾಳಯದ ಒಂದು ಮತ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ  ಪರವಾಗಿ ಬಂದಿದೆ. ಹೀಗಾಗಿ ಚೆನ್ನವೀರಪ್ಪರವರಿಗೆ ಸೋಲಾಗಿದೆ.ಸದ್ಯ ಅವರ ಸ್ಥಾನದಲ್ಲಿ ಉಪಾಧ್ಯಕ್ಷರಾಗಿರುವ ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ]\

BIG EXCLUSIVE / ಶರತ್​ಗಾಗಿ ಜ್ಯೋತಿರಾಜ್​ ಹುಡುಕಾಟ! ಡ್ರೋಣ್​ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!

 

ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ಪ್ಲೈಟ್! ವಿಮಾನ ಹಾರಿಸಲು ಶೀಘ್ರದಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಮಿಟ್​!? ಬುಕ್ಕಿಂಗ್​ಗೆ ಬಲೇ ಡಿಮ್ಯಾಂಡ್!