ಟ್ರೈನ್ ಬರುವಾಗಲೇ ಹಳಿ ದಾಟಲು ಮುಂದಾದ ಶಿಕ್ಷಕ! ಗೂಡ್ಸ್ ರೈಲಿನಡಿ ನಡೀತು ಅದೃಷ್ಟ ಪರೀಕ್ಷೆ! ವಿಡಿಯೋ ನೋಡಿ
teacher escaped death by lying down on the railway tracks /ಟ್ರೈನ್ ಬರುವಾಗಲೇ ಹಳಿ ದಾಟಲು ಮುಂದಾದ ಶಿಕ್ಷಕ! ಗೂಡ್ಸ್ ರೈಲಿನಡಿ ನಡೀತು ಅದೃಷ್ಟ ಪರೀಕ್ಷೆ!

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS
ಹಳಿ ದಾಟುತ್ತಿದ್ದ ವೇಳೆ ಟ್ರೈನ್ ಬಂದಿದ್ದರಿಂದ ಅಲ್ಲಿಯೇ ಮಲಗಿ ಅಪಾಯದಿಂದ ಶಿಕ್ಷಕರೊಬ್ಬರು ಪಾರಾಗಿದ್ದಾರೆ. ದಾವಣಗೆರೆಯಲ್ಲಿ ಈ ಘಟನೆ ಇವತ್ತು ಸಂಭವಿಸಿದೆ. ಗೂಡ್ಸ್ ಟ್ರೈನ್ವೊಂದು ಬರುವಾಗಲೇ ಶಿಕ್ಷಕರೊಬ್ಬರು ಹಳಿ ದಾಟಲು ಹೋಗಿದ್ದಾರೆ. ಹಳಿದಾಟುವಷ್ಟರಲ್ಲಿ ಟ್ರೈನ್ ಬಂದು ಬಿಟ್ಟಿದೆ. ತಕ್ಷಣವೇ ಶಿಕ್ಷಕರು ಹಳಿ ಮೇಲೆ ಮಲಗಿಬಿಟ್ಟಿದ್ದಾರೆ. ಟ್ರೈನ್ ಅವರಿಂದ ಮುಂದಕ್ಕೆ ಸಾಗಿ ನಿಂತಿದೆ. ಕೆಲಹೊತ್ತು ಅಲ್ಲಿಯೇ ಮಲಗಿದ್ದ ಶಿಕ್ಷಕ ಬಳಿಕ ಟ್ರೈನ್ ನಿಂತಿರುವುದನ್ನ ಖಾತರಿಪಡಿಸಿಕೊಂಡು ರೈಲಿನ ಅಡಿಯಿಂದ ಹೊರಕ್ಕೆ ಬಂದಿದ್ದಾರೆ.
ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿರುವ ಶಿವಕುಮಾರ್ ಎಂಬವರು ಅಪಾಯದಿಂದ ಪಾರಾಗಿ ಬಂದಿರುವ ವ್ಯಕ್ತಿ. ಇನ್ನೂ ಶಿವಕುಮಾರ್ ಹಳಿ ಮೇಲೆ ಮಲಗಿರುವುದನ್ನ ಗಮಿಸಿದ ರೈಲ್ವೆ ಸಿಬ್ಬಂದಿ ಗೂಡ್ಸ್ ರೈಲನ್ನು ನಿಲ್ಲಿಸುವಂತೆ ಸಿಗ್ನಲ್ ನೀಡಿ ನಿಲ್ಲಿಸಿದ್ರು. ಬಳಿಕ ರೈಲ್ವೇ ರಕ್ಷಣಾ ಪಡೆ ಶಿವಕುಮಾರ್ರನ್ನ ರಕ್ಷಿಸಿ ಅವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
ದಾವಣಗೆರೆಯಲ್ಲಿ ಗೂಡ್ಸ್ ಟ್ರೈನ್ ನಡಿ ಮಲಗಿ ಅಪಾಯದಿಂದ ಪಾರಾದ ಶಿಕ್ಷಕ #davanagere pic.twitter.com/DxeuMJRLel — malenadutoday.com (@CMalenadutoday) September 14, 2023
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ