SHIVAMOGGA KSRTC BUS ​ ನಿಲ್ದಾಣದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ವ್ಯಕ್ತಿಗೆ ಶಾಕ್! ಚಡ್ಡಿ ಜೇಬಿನಲ್ಲಿಟ್ಟಿದ್ದ ಆರವತ್ತು ಸಾವಿರ ರೂಪಾಯಿ ಕಳವು

Sixty thousand rupees belonging to a person hailing from Honnali in Davangere district was stolen from Shimoga KSRTC BUS station ಶಿವಮೊಗ್ಗ KSRTC BUS ​ ನಿಲ್ದಾಣದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ವ್ಯಕ್ತಿಗೆ ಸೇರಿದ ಆರವತ್ತು ಸಾವಿರ ರೂಪಾಯಿ ಕಳ್ಳತನವಾಗಿದೆ

SHIVAMOGGA KSRTC BUS ​ ನಿಲ್ದಾಣದಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ  ಮೂಲದ ವ್ಯಕ್ತಿಗೆ  ಶಾಕ್! ಚಡ್ಡಿ ಜೇಬಿನಲ್ಲಿಟ್ಟಿದ್ದ ಆರವತ್ತು ಸಾವಿರ ರೂಪಾಯಿ ಕಳವು

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS

ಶಿವಮೊಗ್ಗ ನಗರದ ಕೆಎಸ್​​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ನಡೆದಿದ್ದು ವ್ಯಕ್ತಿಯೊಬ್ಬರು ಚಡ್ಡಿ ಜೇಬಿನಲ್ಲಿ ಇಟ್ಟು ಕೊಂಡು ಬಂದಿದ್ದ ಆರವತ್ತು ಸಾವಿರ ರೂಪಾಯಿ ಕಳ್ಳತನ ಮಾಡಲಾಗಿದೆ. 

ನಡೆದಿದ್ದೇಗೆ ಘಟನೆ 

ಶಿವಮೊಗ್ಗದ ಶಾಲೆಯೊಂದರಲ್ಲಿ ಓದುತ್ತಿರುವ ತಮ್ಮ ಮರಿಮೊಮ್ಮಗನ ಫೀಜ್​​ ಕಟ್ಟಲು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಬಳಿಕ ತಮ್ಮ ಮೊಮ್ಮಗಳ ಜೊತೆ ಶಾಲೆಗೆ ಹೋಗಿದ್ದಾರೆ. ಅಲ್ಲಿ ಹಬ್ಬ ಇದ್ದು, ಹಬ್ಬ ಮುಗಿದ ಬಳಿಕ ಬಂದು ಫಿಸ್​ ಕಟ್ಟಲು ತಿಳಿಸಿದ್ದಾರೆ. 

ಅದರಂತೆ ಫೀಜ್​ ಕಟ್ಟಲು ತಂದಿದ್ದ ಆರವತ್ತು ಸಾವಿರ ರೂಪಾಯಿಯನ್ನು ದೂರುದಾರರು ವಾಪಸ್​ ತಮ್ಮ ಚಡ್ಡಿ ಜೇಬಿನಲ್ಲಿ ಹಾಕಿಕೊಂಡಿದ್ದಾರೆ. ಬಳಿಕ ಶಿವಮೊಗ್ಗದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ತೆರಳಿ ತಮ್ಮೂರಿನ ಬಸ್​ಗಾಗಿ ಕಾದಿದ್ದಾರೆ. 

ಈ ಮಧ್ಯೆ ಸಾಸ್ವೆಹಳ್ಳಿ ಕಡೆಗೆ ಹೋಗುವ ಬಸ್​ ಬಂದಿದೆ. ಬಸ್​ ನ್ನ ಹತ್ತಲು ಹೋದಾಗ ದೂರುದಾರರ ಜೇಬಿನಿಂದ ಕೀ ಬಂದಿದೆ. ಬಿದ್ದಿದ್ದ ಕೀಯನ್ನು ತೆಗೆದು ಅನುಮಾನ ಬಂದು ಚಡ್ಡಿ ಜೇಬಿನಲ್ಲಿ ಇರುವ ದುಡ್ಡನ್ನ ಹುಡುಕಾಡಿದ್ದಾರೆ. ಆದರೆ ಜೇಬಿನಲ್ಲಿದ್ದ ದುಡ್ಡನ್ನು ಯಾರೋ ಕಳ್ಳತನ ಮಾಡಿದ್ದರು.  ವಿಷಯ ಗೊತ್ತಾಗುತ್ತಲೇ ಸಮೀಪದ ದೊಡ್ಡಪೇಟೆ ಪೊಲೀಸ್ ಸ್ಠೇಷನ್​ಗೆ ಬಂದು ಸಂತ್ರಸ್ತರು ದೂರು ದಾಖಲಿಸಿದ್ದು , ಪ್ರಕರಣ ದಾಖಲಾಗಿದೆ.  


ಇನ್ನಷ್ಟು ಸುದ್ದಿಗಳು