ರೌಡಿಗಳನ್ನು ಊರು ಬಿಡಿಸುವ ಕೆಲಸ ಆಗಿದೆ / ಗಣೇಶೋತ್ಸವ ಮತ್ತು ಈದ್ ಮಿಲಾದ್ ಬಗ್ಗೆ ಶಾಸಕ ಎಸ್ ಎನ್​ ಚನ್ನಬಸಪ್ಪ ನಾಲ್ಕು ಮಾತು

MLA SN Channabasappa spoke about Ganeshotsav and Eid Milad in Shimoga.ಶಿವಮೊಗ್ಗದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಬಗ್ಗೆ ಶಾಸಕ ಎಸ್.ಎನ್ ಚನ್ನಬಸಪ್ಪರವರು ಮಾತನಾಡಿದ್ದಾರೆ

ರೌಡಿಗಳನ್ನು ಊರು ಬಿಡಿಸುವ ಕೆಲಸ ಆಗಿದೆ / ಗಣೇಶೋತ್ಸವ ಮತ್ತು ಈದ್ ಮಿಲಾದ್ ಬಗ್ಗೆ ಶಾಸಕ ಎಸ್ ಎನ್​ ಚನ್ನಬಸಪ್ಪ ನಾಲ್ಕು ಮಾತು

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  



ಶಿವಮೊಗ್ಗದಲ್ಲಿ ಈ ಸಲ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡೋಣ, ಸಡಗರದಿಂದ ಹಬ್ಬ  ಆಚರಿಸೋಣ,  ಗಣೇಶೋತ್ಸವಕ್ಕೆ ಯಾವುದೇ ನಿಬಂಧನೆಗಳು, ನಿರ್ಬಂಧನೆಗಳು ಇಲ್ಲ, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್​ಎನ್ ಚನ್ನಬಸಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ, ಸಂಭ್ರಮದಿಂದ ಹಬ್ಬ ಆಚರಣೆ ಮಾಡಬೇಕು, ಶಿವಮೊಗ್ಗದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಕಳೆದ ಎರಡು ಮೂರು ವರ್ಷದಲ್ಲಿ ನಡೆದಿಲ್ಲ, ಬದಲಾಗಿ ವೈಭವಯುತವಾಗಿ ಹಬ್ಬ ಆಚರಣೆ ನಡೆದಿದೆ, ಅದೇ ರೀತಿಯಲ್ಲಿ ಈ ಬಾರಿಯೂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸೋಣೆ ಎಂದು ಕರೆ ನೀಡಿದರು. 

ಗಣಪತಿ ವಿಸರ್ಜನೆಗೆ ಮಹಾನಗರ ಪಾಲಿಕೆ ವತಿಯಿಂದ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ, ಹಬ್ಬದಾಚರಣೆಗೂ ಸಹ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಆಶಿಸಿದರು.  

ರೌಡಿಶೀಟರ್ ಗಳ ವಿರುದ್ಧ ಈಗಾಗಲೇ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ, ಕೆಲವು ರೌಡಿಶೀಟರ್ ಗಳ ಊರು ಬಿಡಿಸುವ ಕೆಲಸ ಆಗಿದೆ  ಎಂದು ಇದೇ ವೇಳೆ ಮಾಹಿತಿ ನೀಡಿದ್ರು. 

ಇನ್ನೂ ಇದೇ ವೇಳೆ  ಚೈತ್ರ ಕುಂದಾಪುರ ಬಂಧನ ವಿಚಾರದ ಬಗ್ಗೆ ಮಾತನಾಡಿದ ಚನ್ನಬಸಪ್ಪ, ನಡೆದಿದ್ದು ಸತ್ಯವೇ ಆದರೆ ಇಂತಹ ಘಟನೆ ನಡೆಯಬಾರದು, ಈ ಬಗ್ಗೆ ಸಮಗ್ರ ತನಿಖೆಯಾಗಲಿ ಸತ್ಯಾಂಶ ಹೊರ ಬರಲಿ ಎಂದರು. ಹಿಂದುತ್ವಕ್ಕೆ ಶಕ್ತಿ ಕೊಡ್ತಿದ್ದ ಹೆಣ್ಣುಮಗಳು, ತಪ್ಪು‌ ಮಾಡಿದ್ರೆ ಆಕೆಗೆ ಶಿಕ್ಷೆಯಾಗಲಿ ಎಂದರು. 

ಅಲ್ಲದೆ  5 ಕೋಟಿ‌ ಕೊಟ್ಟು ಟಿಕೆಟ್ ಪಡೆಯಲು ಮುಂದಾದ ವ್ಯಕ್ತಿ ಬಗ್ಗೆ ವಿಚಾರಣೆ ಆಗಬೇಕು. ನಮ್ಮ ಪಕ್ಷದಲ್ಲಿ ಅಂತಹ‌ ವ್ಯವಸ್ಥೆ ಇಲ್ಲ. ಪ್ರಖರ ಹಿಂದುತ್ವವಾದಿಗೆ ಈ ರೀತಿ ಆಗಿರೋದು ನಂಬಲು ಸಾಧ್ಯವಿಲ್ಲ. ಮತ್ತಷ್ಟು ವಿಚಾರಣೆ ನಡೆಯಲಿ ಸತ್ಯ ಸಂಗತಿ‌ ಹೊರಗೆ ಬರಲಿ. ಈಗ ಹೊರಗೆ ಬರುತ್ತಿರುವ ವರದಿಗಳು ಊಹಾಪೋಹಾ. ಈ ಹಿಂದಿನಿಂದಲೂ ಕಾಂಗ್ರೆಸ್ ಹಿಂದುತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. 





ಇನ್ನಷ್ಟು ಸುದ್ದಿಗಳು