KSRTC ಬಸ್​, ಟ್ರ್ಯಾಕ್ಸ್​ , ಲಾರಿ ನಡುವೆ ಡಿಕ್ಕಿ! ನಿದಿಗೆ ಬಳಿ ಸಂಭವಿಸಿದ ಅಪಘಾತ

KSRTC bus collides with tracks, lorry! Accident near NidigeKSRTC ಬಸ್​, ಟ್ರ್ಯಾಕ್ಸ್​ , ಲಾರಿ ನಡುವೆ ಡಿಕ್ಕಿ! ನಿದಿಗೆ ಬಳಿ ಸಂಭವಿಸಿದ ಅಪಘಾತ

KSRTC  ಬಸ್​, ಟ್ರ್ಯಾಕ್ಸ್​ , ಲಾರಿ ನಡುವೆ ಡಿಕ್ಕಿ! ನಿದಿಗೆ ಬಳಿ ಸಂಭವಿಸಿದ ಅಪಘಾತ

KARNATAKA NEWS/ ONLINE / Malenadu today/ Aug 4, 2023 SHIVAMOGGA NEWS 

ಶಿವಮೊಗ್ಗದ ನಿದಿಗೆ ರಸ್ತೆಯಲ್ಲಿರುವ ಜೈನ್​ ಸ್ಕೂಲ್​ ಬಳಿಯಲ್ಲಿ ನಿನ್ನೆ ಟ್ರ್ಯಾಕ್ಸ್ ಲಾರಿ ಹಾಗೂ ಕೆಎಸ್​ಆರ್​ಟಿಸಿ ಬಸ್​ ಪರಸ್ಪರ ಡಿಕ್ಕಿಯಾಗಿವೆ. ಮೈಸೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್​ ಹಾಗೂ ಭದ್ರಾವತಿ-ಶಿವಮೊಗ್ಗ ರೂಟ್​ನ ಟ್ರ್ಯಾಕ್ಸ್​ ಮತ್ತು ಸರಕು ಸಾಗಿಸುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ, ಇನ್ನೂ ಟ್ರ್ಯಾಕ್ಸ್​ ಬಹುತೇಕ ಜಖಂಗೊಂಡಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಬಸ್​ನಲ್ಲಿ ಪ್ರಯಾಣಿಕರು ಸುರಕ್ಷಿತವಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಟ್ರಾಫಿಕ್​ ಕ್ಲಿಯರ್ ಮಾಡಿದ್ದರು. ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ.  

ರೈಲ್ವೆ ಮಿನಿಸ್ಟರ್​ ರನ್ನ ಭೇಟಿಯಾದ ಸಂಸದ B.Y. ರಾಘವೇಂದ್ರ! ಕುತೂಹಲ ಮೂಡಿಸಿದ ತಾಳಗುಪ್ಪ-ತಡಸಾ-ಹುಬ್ಬಳ್ಳಿ ರೈಲ್ವೆ ಮಾರ್ಗದ ಮಾತುಕತೆ!

ಶಿವಮೊಗ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ರೈಲ್ವೆ ಮತ್ತು ಸಂಪರ್ಕ ಸಚಿವ ಅಶ್ವಿನಿ ವೈಷ್ಣ‌ವ್​ಗೆ ಮನವಿ ಮಾಡಿದ್ದಾರೆ. ಹೊಸದಿಲ್ಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ರಾಘವೇಂದ್ರ ತಮ್ಮ ಕ್ಷೇತ್ರದ ರೈಲ್ವೆ ಮತ್ತು ಬಿಎಸ್‌ಎನ್‌ಎಲ್‌ ಮೊಬೈಲ್ ಟವರ್‌ಗಳ ಕುರಿತು ಚರ್ಚಿಸಿದರು.

ಬಿಎಸ್‌ಎನ್‌ಎಲ್‌ನಿಂದ ಮೊಬೈಲ್ ಟವರ್‌ಗಳು ಮಂಜೂರಾಗಿವೆ. ಆದರೆ, ಶರಾವತಿ ಮುಳುಗಡೆ ಪ್ರದೇಶ ಮತ್ತು ಪಶ್ಚಿಮಘಟ್ಟದ ಅರಣ್ಯದೊಳಗೆ ಕೆಲ ಪ್ರದೇಶಗಳಲ್ಲಿ ಇತರೆ ಮೊಬೈಲ್ ಗಳ ನೆಟ್ ವರ್ಕ್ ಸಿಗುತ್ತಿದೆ. ಹೀಗಾಗಿ, ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶಕ್ಕೆ ಬಿಎಸ್‌ಎನ್‌ಎಲ್‌ ಮೊಬೈಲ್ ಟವರ್ ಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದರು. 

ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣ ಹಾಗೂ ಶಿವಮೊಗ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ನಾಲ್ಕು ರೈಲ್ವೆ ಮೇಲು ಸೇತುವೆಗಳು, ಕೋಟೆಗಂಗೂರು ಕೋಚಿಂಗ್ ಡಿಪೋ, ತಾಳಗುಪ್ಪ ತಡಸ-ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗದ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಶಿವಮೊಗ್ಗ ಕ್ಷೇತ್ರಕ್ಕೆ ಕುಂಸಿ, ಹಾರನಹಳ್ಳಿ, ಅರಸಾಳು, ಬೈಂದೂರು, ಶಿರೂರು, ಬಿಜೂರು ಹಾಗೂ ಸೇನಾಪುರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚಿನ ರೈಲುಗಳು ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸುವ ಹಲವು ರೈಲುಗಳ ವೇಗ ಹೆಚ್ಚಿಸಿ ಸಮಯ ಬದಲಾವಣೆ ಮಾಡುವಂತೆ ಸಹ ಕೋರಿದರು.

ಶರಾವತಿ ಹಿನ್ನೀರಿನಲ್ಲಿ ಮುಳುಗಿತು ಲಾರಿ! ಲಾಂಚ್​ ಹತ್ತಿಸುವಾಗ ನಡೆದ ಘಟನೆ!

ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಕಾಮಗಾರಿಗೆ ಅಂಬಾರಗೊಡ್ಡು ಕಡೆಯಿಂದ ಜಲ್ಲಿತುಂಬಿಕೊಂಡು ಡಿಬಿಎಲ್ ಕಂಪನಿಯ ಲಾಂಚ್‌ಗೆ ಹತ್ತಿಸಲು ಹೋಗುತ್ತಿದ್ದ 10 ಚಕ್ರದ ಲಾರಿ ಬ್ರೇಕ್ ವಿಫಲವಾಗಿ ನೀರಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.ಸಿಗಂದೂರು ಬದಿಯಲ್ಲಿ ನಡೆಯುತ್ತಿದ್ದ ಸೇತುವೆ ಕಾಮಗಾರಿಗೆ ಜಲ್ಲಿ ತುಂಬಿ ಕೊಂಡು ಅಂಬಾರಗೊಡ್ಡು ಕಡೆಯಿಂದ ಹೊರಟಿದ್ದ ಲಾರಿಯನ್ನು ಹಿಮ್ಮುಖವಾಗಿ ಲಾಂಚಿಗೆ ಹತ್ತಿಸುವಾಗ ಚಾಲಕನ ನಿಯಂತ್ರಣ ತಪ್ಪಿ, ಬ್ರೇಕ್ ವಿಫಲವಾಗಿ ಲಾರಿ ಶರಾವತಿ ಹಿನ್ನೀರಿಗೆ ಜಾರಿದೆ. ಅಪಾಯದ ಸೂಚನೆ ಅರಿತ ಚಾಲಕ ಕೂಡಲೆ ಹೊರಕ್ಕೆ ಹಾರಿ ಬಚಾವಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸೇತುವೆ ಕಾಮಗಾರಿ ಮಾಡುತ್ತಿರುವ ಡಿಬಿಎಲ್ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ. 

ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು