KARNATAKA NEWS/ ONLINE / Malenadu today/ Jun 27, 2023 SHIVAMOGGA NEWS
ಯುವತಿಯೊಬ್ಬಳನ್ನ ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಂಡು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿ ತಂದೆಯೊಬ್ಬರು ದೂರು ನೀಡಿದ್ದಾರೆ. ತಮ್ಮ ಅವಳಿ ಮಕ್ಕಳ ಪೈಕಿ ಓರ್ವಳನ್ನ ಯುವಕನೊಬ್ಬ ಕಿಡ್ನ್ಯಾಪ್ ಮಾಡಿರುವುದಾಗಿ ದೂರು ನೀಡಿದ್ಧಾರೆ. ಈ ಬಗ್ಗೆ ತಮ್ಮ ಇನ್ನೊಬ್ಬ ಮಗಳು ಮಾಹಿತಿ ನೀಡಿದ್ದರ ಆಧರಿಸಿ ದೂರು ನೀಡುತ್ತಿರುವುದಾಗಿ ಎಫ್ಐಆರ್ ಉಲ್ಲೇಖಿಸಲಾಗಿದೆ.
ನಡೆದಿದ್ದೇನು
ಸಾಗರ ರಸ್ತೆಯಲ್ಲಿರುವ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಕಳೆದ 23 ನೇ ತಾರೀಖು ಎಂದಿನಂತೆ ಕಾಲೇಜಿಗೆ ಹೊರಟಿದ್ದಾರೆ. ಈ ಮಧ್ಯೆ ಮಲವಗೊಪ್ಪದ ಯುವಕನೊಬ್ಬ ಬೈಕ್ನಲ್ಲಿ ಬಂದು ಒರ್ವಳನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂಬುದು ಆರೋಪ. ಈ ಸಂಬಂಧ ಜೊತೆಯಲ್ಲಿದ್ದ ಸಹೋದರಿ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆನಂತರ ಯುವಕನ ಮನೆಗೂ ಸಹ ಹೋಗಿ ತಂದೆ ತಮ್ಮ ಮಗಳ ಬಗ್ಗೆ ವಿಚಾರಿಸಿದ್ದಾರೆ. ಅವರು ಸಮರ್ಪಕವಾಗಿ ಉತ್ತರ ಕೊಡದ ಕಾರಣ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅನಾರೋಗ್ಯ ಕಾರಣಕ್ಕೆ ಬಿ.ಕೆ ಸಂಗಮೇಶ್ವರ್ ಲಂಡನ್‌ಗೆ ಹೋಗಿದ್ರಾ? ಏನಿದು ಪ್ರಶ್ನೆ? ಶಾಸಕರು ಕೊಟ್ಟ ಉತ್ತರವೇನು ಗೊತ್ತಾ?
ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಗ್ಯ ಸರಿ ಇಲ್ಲ ಎಂದು ಅಪಪ್ರಚಾರ ಮಾಡಲಾಗ್ತಿದ್ದು, ಅವರು, ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ, ಸಿಂಗಾಪುರಕ್ಕೆ ತೆರಳಿದ್ದಾರೆ ವದಂತಿ ಹಬ್ಬಿಸಲಾಗುತ್ತಿದೆಯಂತೆ. ಹೀಗೆಂದು ಸ್ವತಃ ಶಾಸಕ ಸಂಗಮೇಶ್ವರ್ ಹೇಳಿದ್ದು, ಆರೋಗ್ಯದ ವಿಚಾರದಲ್ಲಿಯು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಫಾರೆಸ್ಟ್ ಜಾಗ ಒತ್ತುವರಿಗಾಗಿ, ಅರಣ್ಯ ಅಧಿಕಾರಿಗೆ ಹನಿಟ್ರ್ಯಾಪ್! ತೀರ್ಥಹಳ್ಳಿಯಲ್ಲಿ ನಡೆದಿದ್ದೇನು ಗೊತ್ತಾ? ಹಳೆ ಲೇಡಿ ಹೊಸ ಗ್ಯಾಂಗ್!
ಅಲ್ಲದೆ , ನನ್ನ ಆರೋಗ್ಯ ಚೆನ್ನಾಗಿದೆ ಎಂದ ಅವರು, ಕ್ಷೇತ್ರದ ಜನರು ಬೆಂಗಳೂರಿಗೆ ಬಂದು, ತಮ್ಮ ಬಳಿ ಮಾತನಾಡಿ , ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು ಎಂದಿದ್ಧಾರೆ. ಈ ಮೂಲಕ ಇಷ್ಟು ದಿನ ಬೆಂಗಳೂರಿನಲ್ಲಿ ಉಳಿದುಕೊಂಡ ಬಗ್ಗೆ ಸಂಗಮೇಶ್ ಸಮರ್ಥನೆ ನೀಡಿದರು.
ಟಿಪ್ಪು ನಗರದಲ್ಲಿ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್ ನಲ್ಲಿ ಆಗಿದ್ದೇನು? ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ಏನು ಗೊತ್ತಾ?
ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದ ಸಂಗಮೇಶ್ವರ್ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆ ಸಲುವಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ಧಾರೆ.