ಟಿಪ್ಪು ನಗರದಲ್ಲಿ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ ನಲ್ಲಿ ಆಗಿದ್ದೇನು? ಎಸ್​ಪಿ ಮಿಥುನ್​ ಕುಮಾರ್​ ಸ್ಪಷ್ಟನೆ ಏನು ಗೊತ್ತಾ?

What happened in Tipu Nagar? What happened in Draupadamma Circle? Do you know what SP Mithun Kumar's clarification is?

ಟಿಪ್ಪು ನಗರದಲ್ಲಿ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ ನಲ್ಲಿ ಆಗಿದ್ದೇನು? ಎಸ್​ಪಿ ಮಿಥುನ್​ ಕುಮಾರ್​  ಸ್ಪಷ್ಟನೆ ಏನು ಗೊತ್ತಾ?

KARNATAKA NEWS/ ONLINE / Malenadu today/ Jun 26, 2023 SHIVAMOGGA NEWS

ಶಿವಮೊಗ್ಗ ದ ಟಿಪ್ಪು ನಗರ ಹಾಗೂ ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಹಲ್ಲೆ ಘಟನೆ ಬೆನ್ನಲ್ಲೆ ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿದೆ. 

ಹೆಚ್ಚುವರಿ ಪೊಲೀಸರ ನಿಯೋಜನೆ

ಈ ಮೊದಲು ಅಮಿರ್​ ಅಹಮದ್​ ಸರ್ಕಲ್​ ಹಾಗೂ ಸಿಗೇಹಟ್ಟಿ ಸರ್ಕಲ್​ ನಲ್ಲಿ ಎರಡು ಕೆಎಸ್​ಆರ್​ಪಿ ತುಕಡಿಗಳನ್ನ ನಿಯೋಜಿಸಲಾಗಿತ್ತು. ಇದೀಗ ನಿನ್ನೆ ಘಟನೆ ನಡೆದ ಟಿಪ್ಪು ನಗರ ಹಾಗೂ ದ್ರೌಪದಮ್ಮ ಸರ್ಕಲ್​ ಬಳಿ ಸೇರಿದಂತೆ ಒಟ್ಟು ಐದು ಕೆಎಸ್​​ಆರ್​ಪಿ ತುಕಡಿಗಳನ್ನ ನಿಯೋಜಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್​ಪಿ ಮಿಥುನ್​ಕುಮಾರ್​, ಮುಂಬರುವ ಹಬ್ಬದ ಹಿನ್ನೆಲೆಯಲ್ಲಿ ಬಂದೋಬಸ್ತ್​ ಮಾಡಲಾಗಿದೆ ಎಂದಿದ್ದಾರೆ. 

ಎಲ್ಲವೂ ನಾರ್ಮಲ್​?

ಇನ್ನು ಘಟನೆ ನಡೆದ ಸ್ಥಳದಲ್ಲಿ ಸನ್ನಿವೇಶ ಸಾಮಾನ್ಯವಾಗಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ. ಮೇಲಾಗಿ ರೌಡಿಶೀಟರ್​ಗಳ ನಡುವೆ  ನಡೆದ ಹಲ್ಲೆ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.ಈ ಬಗ್ಗೆ ಎಸ್​ಪಿಯುವರು ಮಾತನಾಡಿದ್ದು, ಮೊದಲ ಘಟನೆಯ ಬಗ್ಗೆ ವಿವರಿಸಿದ್ಧಾರೆ. 

ಮೊದಲನೇ ಪ್ರಕರಣದಲ್ಲಿ ನಡೆದಿದ್ದೇನು?

ನಿನ್ನೆ ಸಂಜೆ ನಾಲ್ಕುಗಂಟೆ ಸುಮಾರಿಗೆ, ಟಿಪ್ಪು ನಗರದ ವಿನಾಯಕ ಸರ್ಕಲ್​ ನಲ್ಲಿ ನಾಲ್ಕೈದು ಮಂದಿ ನಿಂತಿದ್ದರು. ಅಲ್ಲಿಗೆ ಒಬ್ಬ ಆಟೋ ಡ್ರೈವರ್ ಕುಡಿದು ಆಟೋ ಓಡಿಸಿಕೊಂಡು ಬಂದು ಟೀ ವೀಲ್ಹರ್​ಗೆ ಆಟೊದಿಂದ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬೈಕ್​ನ ಮಿರರ್​ ಒಡೆದುಹೋಗಿದೆ. ಇದಕ್ಕೆ ಪ್ರತಿಯಾಗಿ ಅಲ್ಲಿದ್ದ ನಾಲ್ಕೈದು ಮಂದಿ , ಆಟೋ ಸವಾರರನನ್ನ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಅಲ್ಲದೆ ಸ್ವಲ್ಪದೂರದಲ್ಲಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಆಟೋ ಸವಾರನ ಕಡೆಯುವರು ಸಹ ನಾಲ್ಕೈದು ಮಂದಿ ಹಲ್ಲೆ ಮಾಡಿದ್ದಾರೆ. 

ಎರಡು ಕೇಸ್​ ದಾಖಲು , ಅರೆಸ್ಟ್​ 

ಇನ್ನೂ ಈ ಸಂಬಂಧ ಎರಡು ಪ್ರಕರಣ ದಾಖಲಾಗಿದ್ದು, ಮೊದಲನೇ ಕೇಸ್​ನಲ್ಲಿ ನಾಲ್ವರು ಹಾಗು ಎರಡನೇ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಿಥುನ್​ ಕುಮಾರ್ ತಿಳಿಸಿದ್ದಾರೆ. 

ಎರಡನೇ ಪ್ರಕರಣದಲ್ಲಿ ನಡೆದಿದ್ದೇನು?

ಇನ್ನೂ ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ಮಾಹಿತಿ ನೀಡಿದ ಎಸ್​ಪಿಯವರು, ಒಬ್ಬ ವ್ಯಕ್ತಿ ವಿಜಯ್​ ಕುಮಾರ್ ಎಂಬವರನ್ನ ಆತನ ಸ್ನೇಹಿತರು ಕರೆಸಿಕೊಂಡಿದ್ದಾರೆ. ದ್ರೌಪದಮ್ಮ ಸರ್ಕಲ್​ ಬಳಿಗೆ ವಿಜಯ್​ ಕುಮಾರ್​ನನ್ನ ಕರೆಸಿಕೊಂಡ ಆರೋಪಿಗಳು ಆತನ ಬೆನ್ನಿಗೆ ಸ್ಕ್ರೂ ಡ್ರೈವರ್​ ಸ್ಟ್ಯಾಬ್​ ಮಾಡಿದ್ದಾರೆ. 

ಇನ್ನೂ ಘಟನೆಯಲ್ಲಿ ಪಾಲ್ಗೊಂಡಿರುವ ಆರೋಪಿಗಳು ಎರಡು ಕೋಮುಗಳಿಗೆ ಸೇರಿದ್ದಾರೆ. ಹಲ್ಲೆಗೊಳಗಾದ ವಿಜಯ್​ ಕುಮಾರ್ ಹಾಗು ಆರೋಪಿಗಳಿಗೆ ಕ್ರಿಮಿನಲ್ ಹಿಸ್ಟರಿ ಇದ್ದು, 307, 392, 398 ನಂತಹ ಕೇಸ್​ಗಳು ಇದೆ. ಇನ್ನೂ ಈ ಘಟನೆಗೂ ಹಾಗು ಟಿಪ್ಪು ನಗರದಲ್ಲಿ ನಡೆದ ಘಟನೆಗೂ ಸಂಬಂಧವಿಲ್ಲ ಎಂದು ಎಸ್​ಪಿ ಮಿಥುನ್​ ಕುಮಾರ್​ ತಿಳಿಸಿದ್ದಾರೆ. 

ಬಜರಂಗದಳ ರಾಜೇಶ್ ಗೌಡ ಹೇಳಿದ್ದೇನು?

ನಡೆದ ಘಟನೆಯ ಬಗ್ಗೆ ಮಾತನಾಡಿದ ಬಜರಂಗ ದಳದ ಶಿವಮೊಗ್ಗದ ಸಂಚಾಲಕ ರಾಜೇಶ್​ ಗೌಡ, ಬೇರೆಯದ್ದೆ ರೀತಿಯಲ್ಲಿ ಘಟನೆಯನ್ನು ವ್ಯಾಖ್ಯಾನಿಸಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಟಿಪ್ಪು ನಗರ ಹಾಗು ದ್ರೌಪದಮ್ಮ ಸರ್ಕಲ್​ ಬಳಿ ನಡೆದ ಘಟನೆಗಳು ಬೇರೆ ಬೇರೆಯಲ್ಲ. ಎರಡು ಘಟನೆಯು ಗೋವಿನ ರಕ್ಷಣೆ ಮಾಡಿದ್ದಕ್ಕೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಅವರು ಹೇಳುವ ಪ್ರಕಾರ, ನಿನ್ನೆ ತುಂಗಾನಗರದ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂಬಂಧ ಪೊಲೀಸರಿಗೆ ಮಾಹಿತಿ ಬಜರಂಗದಳ ಮಾಹಿತಿ ನೀಡಿತ್ತು. ಇದೇ ಕಾರಣ ದ್ವೇಷದ ಹಿನ್ನೆಲೆಯಲ್ಲಿ ಸಂದೇಶ್​ ಎಂಬವರಿಗೆ ಹಲ್ಲೆ ಮಾಡಲಾಗಿದೆ. ಸಂದೇಶ್​ ಬಜರಂಗದಳ ಕಾರ್ಯಕರ್ತನಾಗಿದ್ದು, ಅವರ ಮಾವ ಜಿತೇಂದ್ರ ಗೌಡ ವಿಶ್ವ ಹಿಂದೂ ಪರಿಷತ್​ನಲ್ಲಿ ಪ್ರಮಖ ಸ್ಥಾನದಲ್ಲಿದ್ದಾರೆ. ಇನ್ನೂ ಸಂದೇಶ್​ರನ್ನ ನೋಡಲು ಬಂದಿದ್ದ ವಿಜಯ್​ ಕುಮಾರ್​ರ ಮೇಲೂ ಹಲ್ಲೆ ನಡೆದಿದ್ದು ಘಟನೆಯನ್ನ ರಾಜೇಶ್ ಗೌಡ ಖಂಡಿಸಿದ್ದಾರೆ.