ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್​ ಬಗ್ಗೆ ಡೌಟ್​ ಇದೆ ಎಂದ ಶಾಸಕ ಎಸ್​.ಎನ್​. ಚನ್ನಬಸಪ್ಪ

There is doubt about the suspicious box found at Shimoga railway station, MLA S.N. Channabasappa

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್​ ಬಗ್ಗೆ ಡೌಟ್​ ಇದೆ ಎಂದ ಶಾಸಕ ಎಸ್​.ಎನ್​. ಚನ್ನಬಸಪ್ಪ
MLA S.N. Channabasappa

Shivamogga Feb 15, 2024 |  ಕಳೆದ ನವೆಂಬರ್‌ನಲ್ಲಿ  ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಅನುಮಾನಸ್ಪದ ಬಾಕ್ಸ್​ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಿದೆ. 

ಆದಿನ ಪತ್ತೆಯಾದ ಬಾಕ್ಸ್​ಗಳಿಗೂ ಹಾಗೂ ಪೊಲೀಸರು ಎಫ್‌ಎಸ್‌ಎಲ್ ತನಿಖೆಗೆ ಕಳುಹಿಸಿದ ಬಾಕ್ಸ್‌ಗಳಿಗೂ ವ್ಯತ್ಯಾಸವಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಎಸ್​.ಎನ್​.ಚನ್ನಬಸಪ್ಪ ಹೇಳಿದ್ದೇನು? 

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡ್ತಿದ್ದ ಶಾಸಕ S N Channabasappa ಪತ್ತೆಯಾದ ಎರಡು ಬಾಕ್ಸ್‌ಗಳ ಬೀಗ ಸ್ಫೋಟಿಸಿ ಅದರಲ್ಲಿದ್ದ ಬಿಳಿ ಪೌಡರ್ ಮಾದರಿ ವಸ್ತುವಿನ ಬಗ್ಗೆ ಬಾಂಬ್ ನಿಷ್ಕ್ರಿಯ ದಳದ ಪೊಲೀಸರೇ ಅನುಮಾನ ವ್ಯಕ್ತಪಡಿಸಿದ್ದರು. ಆನಂತರ ಅದನ್ನು ಎಫ್‌ಎಸ್ಎಲ್ ವರದಿಗೆ ಕಳುಹಿಸಿದ ಬಳಿಕ ಅದು ಏನೆಂದು ತಿಳಿಯುತ್ತದೆ ಎಂದು ಹೇಳಿದ್ದರು.. 

ಬಾಕ್ಸ್​ ಓಪನ್ ಮಾಡಿದ ಕೆಲ ನಿಮಿಷಗಳಲ್ಲೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಬಾಕ್ಸ್‌ನಲ್ಲಿ ಸಿಕ್ಕ ವಸ್ತು ಉಪ್ಪು ಎಂದು ಹೇಳಿಕೆ ನೀಡಿದರು. ಎಫ್ ಎಸ್‌ಎಲ್ ವರದಿ ಬರುವ ಮೊದಲೇ ಹೇಗೆ ಅವರು ಈ ರೀತಿ ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಾಧ್ಯ. ಸಿಕ್ಕಿರುವ ಬಾಕ್ಸ್‌ ಗೂ, ಎಫ್‌ಎಸ್‌ಎಲ್‌ಗೆ ಕಳುಹಿಸಿದಬಾಕ್ಸ್‌ ಗೂವ್ಯತ್ಯಾಸವಿರುವ ಅನುಮಾನವಿದೆ ಈ ಬಗ್ಗೆ ತನಿಖೆಯಾಗಬೇಕು ಎಂದರು.

ಮಂಡ್ಯದ ಕೇಸರಿ ಧ್ವಜ ಹಾರಿಸಿದ ವಿವಾದ ಪ್ರಸ್ತಾಪಿಸಿದ  ಶಾಸಕ ಚೆನ್ನಿಯವವರು, ಶಿವಮೊಗ್ಗದಲ್ಲಿ ಔರಂಗಜೇಬನ ಕಟೌಟ್ ಹಾಕಿದಾಗ ನೋವಾಗದವರಿಗೆ ಕೇಸರಿ ಧ್ವಜ ಹಾರಿಸಿದರೆ ಬಹಳ ನೋವಾಗುತ್ತದೆ ಎಂದು ಕಾಂಗ್ರೆಸ್‌ನವರ ವಿರುದ್ಧ ಬೇಸರ ವ್ಯಕ್ತಪಡಿಸಿದರು. 

ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ

ಶಿವಮೊಗ್ಗದಲ್ಲಿ ಕಾನೂನ ಸುವ್ಯವಸ್ಥೆ ಸರ್ಕಾರ ಹೇಳುವ ರೀತಿ ಇಲ್ಲ. ಅಲ್ಲಿ ಬಾಂಬ್ ತಯಾರಕರೂ ವಾಸ ಮಾಡುತ್ತಿದ್ದಾರೆ. ಹಿಂದೂಗಳು ಬಹಳ ಆತಂಕದಿಂದ ಜೀವನ ಸಾಗಿಸುವ ಸ್ಥಿತಿ ಇದೆ. ಸಣ್ಣಪುಟ್ಟ ವಿಚಾರಗಳಿಗೂ ಚೂರಿ ಹಾಕುವ ಘಟನೆಗಳು ನಡೆಯುತ್ತಿವೆ. ನಾಲ್ಕು ತಿಂಗಳಲ್ಲೇ ಎರಡು ಹತ್ಯೆ ನಡೆದಿವೆ. 

ಈ ಹಿಂದೆ ಹಿಂದುಗಳ ಮನೆಗಳ ಮೇಲೆ ನಡೆದ ದಾಳಿ, ಮುಸ್ಲಿಂ ಗೂಂಡಾಗಳಿಂದ ಹಾನಿಗೋಳಗಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಗೃಹ ಸಚಿವರು ಖುದ್ದು ಜಿಲ್ಲೆಗೆ ಬಂದು ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಚನ್ನಬಸಪ್ಪ ಮನವಿ ಮಾಡಿದರು.