siddaramaiah viral video | 500 ರೂಪಾಯಿ ಕೊಟ್ಟು ಜನರನ್ನ ಕರ್ಕೊಂಡು ಬರಬೇಕು ಎಂದರಾ ಸಿದ್ದರಾಮಯ್ಯ! ವೈರಲ್ ವಿಡಿಯೋದಲ್ಲಿ ಇರೋದೇನು?

siddaramaiah viral video |In a video that has gone viral on social media, opposition leader Siddaramaiah is seen saying that people should be brought to the party's event at a cost of Rs 500 each.

siddaramaiah viral video | 500 ರೂಪಾಯಿ ಕೊಟ್ಟು ಜನರನ್ನ ಕರ್ಕೊಂಡು ಬರಬೇಕು ಎಂದರಾ ಸಿದ್ದರಾಮಯ್ಯ!  ವೈರಲ್ ವಿಡಿಯೋದಲ್ಲಿ ಇರೋದೇನು?
siddaramaiah viral video | 500 ರೂಪಾಯಿ ಕೊಟ್ಟು ಜನರನ್ನ ಕರ್ಕೊಂಡು ಬರಬೇಕು ಎಂದರಾ ಸಿದ್ದರಾಮಯ್ಯ! ವೈರಲ್ ವಿಡಿಯೋದಲ್ಲಿ ಇರೋದೇನು?

MALENADUTODAY.COM | #KANNADANEWSWEB

siddaramaiah viral video | ಪಕ್ಷಗಳ ಸಮಾವೇಶಕ್ಕೆ ಜನರನ್ನ ದುಡ್ಡು ಕೊಟ್ಟು ಕರೆತರೋದು ಸಹಜ! ಜನರ ಮಾಬ್​ ನೋಡಿ, ಮತದಾರನ ಹಾಕು ವೋಟು ನಿರ್ಧಾರವಾಗಲಿ ಎಂಬ ಕಾರಣಕ್ಕೆ ಲಕ್ಷ ಲಕ್ಷ ಜನರನ್ನು ಸೇರಿಸಲು ನಾಯಕರು ಹರಸಾಹಸ ಪಡುತ್ತಾರೆ. ಅದಕ್ಕಾಗಿ ನಾನಾ ರೀತಿಯ ಗಿಫ್ಟ್​ಗಳನ್ನು ಹಣವನ್ನು, ಎಣ್ಣೆ ಪ್ಯಾಕೆಟ್​ಗಳನ್ನು ನೀಡಲಾಗುತ್ತದೆ ಎಂಬುದು ಜಗವೇ ತಿಳಿದ ರಹಸ್ಯ. ಆದರೆ, ಇದೀಗ ಜನರನ್ನು 500 ರೂಪಾಯಿ ಕೊಟ್ಟು ಕರೆದುಕೊಂಡು ಬನ್ನಿ ಎಂದು ಸಿದ್ದರಾಮಯ್ಯರು ಹೇಳಿದ್ದಾರೆ ಎಂಬ 20 ಸೆಕೆಂಡ್​ನ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಕೇವಲ 20 ಸೆಕೆಂಡ್​ನ ವಿಡಿಯೋದಲ್ಲಿ ಸಿದ್ದರಾಮಯ್ಯ ಹಾಗೂ ಬೆಳಗಾವಿಯ ನಾಯಕರು ಸಮಾವೇಶದ ಬಗ್ಗೆ ಮಾತನಾಡುತ್ತಾರೆ. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ಈ ವೇಳೆ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​ ಹಾಗೂ ಇತರೇ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತನಾಡ್ತಿದ್ದ ಸಿದ್ದರಾಮಯ್ಯ,  ನಿಮ್ಮ ಕ್ಷೇತ್ರದವರೇ ಇರೋದಿಲ್ಲ, ಬೇರೆ ಕ್ಷೇತ್ರದವರು ಇರುತ್ತಾರೆ, ಎಲೆಕ್ಷನ್​ ಇರೋದ್ರರಿಂದ ಅವರು ಸಹ ಜನರನ್ನು ಸೇರಿಸುತ್ತಾರೆ. 500 ರೂಪಾಯಿ ಕೊಟ್ಟು ಕರ್ಕೊ ಬರಬೇಕು ಪ್ರತಿಯೊಬ್ಬರನ್ನು ಎಂದು ಹೇಳುವ ಆಡಿಯೋ ವಿಡಿಯೋದಲ್ಲಿಯೇ ಸೆರೆಯಾಗಿದೆ. ಆದರೆ 20 ಸೆಕೆಂಡ್​ನ ನಂತರ ವಿಡಿಯೋ ಮುಂದುವರಿದಿಲ್ಲ. ಅಲ್ಲಿಗೆ ಕಟ್ ಆಗಿದ್ಯಾ? ಅಥವಾ ಹಣ ಕೊಟ್ಟು ಜನರನ್ನು ಕರೆದುಕೊಂಡು ಬರುವ ಮಾತಿಗಷ್ಟೆ ವಿಡಿಯೋ ಎಡಿಟ್ ಆಗಿದ್ಯಾ? ಎಂಬುದು ಪ್ರಶ್ನೆಯಾಗಿದೆ. 

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

ಇನ್ನೂ ಪ್ರಜಾಧ್ವನಿ ಯಾತ್ರೆಯಲ್ಲಿನ ಬಸ್​ನಲ್ಲಿ ಪ್ರಯಾಣದ ವೇಳೇ ನಾಯಕರ ಆಪ್ತರಿಗಷ್ಟೆ ಅವಕಾಶವಿದ್ದು, ಈ ವಿಡಿಯೋ ದೃಶ್ಯ ತೆಗೆದವರು ಯಾರು? ಹಾಗೂ ನಾಯಕರ ನಡುವಿನ  ಗೌಪ್ಯ ಚರ್ಚೆಯ ವಿಷಯಗಳನ್ನು ಕೇಳಿಸಿಕೊಂಡು ವಿಡಿಯೋ ಮಾಡಲು ಅವಕಾಶವಾಗಿದ್ದು ಹೇಗೆ? ಮತ್ತು ಇದನ್ನು ವೈರಲ್ ಮಾಡಿರೋದು ಯಾರು ಎಂಬುದು ಸಹ ಕುತೂಹಲ ಮೂಡಿಸುತ್ತಿದೆ. ಆದರೆ ಸೋಶಿಯಲ್ ಮೀಡಿಯಾದ ಜಗತ್ತಿನ ನಡುವೆ ಸದ್ಯ ಸಿದ್ದರಾಮಯ್ಯರ ಈ ವಿಡಿಯೋ ವೈರಲ್​ ಆಗುತ್ತಿದ್ದು, ಬಿಜೆಪಿಯ ಟೀಕೆಗೆ ಗುರಿಯಾಗುತ್ತಿದೆ. 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #