ಚಿರತೆ ದಾಳಿಯಿಂದ ತನ್ನ ಮಾಲೀಕನನ್ನ ಕಾಪಾಡಿತೆ ಹಸು! ಏನಿದು ಗೌರಿ ಕಥೆ!?

Did the cow save its owner from leopard attack? What is Gauri's story?

ಚಿರತೆ ದಾಳಿಯಿಂದ ತನ್ನ ಮಾಲೀಕನನ್ನ ಕಾಪಾಡಿತೆ ಹಸು! ಏನಿದು ಗೌರಿ ಕಥೆ!?

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS

ದಾವಣಗೆರೆ/(Davanegere News)  ಜಿಲ್ಲೆಯ ಚೆನ್ನಗಿರಿ ತಾಲ್ಲೂಕು ಇತ್ತೀಚೆಗೆ ಆನೆ ದಾಳಿಯಿಂದ ಸುದ್ದಿಯಾಗಿತ್ತು. ಇದೀಗ ಅಲ್ಲಿನ ಉಬ್ರಾಣಿ ಹತ್ತಿರ ಹಸುವೊಂದು ಚಿರತೆಯಿಂದ ತನ್ನ ಮಾಲೀಕನನ್ನ ಕಾಪಾಡಿ ಸುದ್ದಿಯಾಗಿದೆ.   

ನಡೆದಿದ್ದೇನು?

ದಾವಣಗೆರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಲ್ಲಿನ ಕೊಡಕಿನಕೆರೆ ಗ್ರಾಮದ ಹಾಲಪ್ಪ ಎಂಬವರು ತೋಟದಲ್ಲಿ ಹಸು ಮೇಯಿಸುತ್ತಿದ್ದಾಗ, ಅವರ ಮೇಲೆ ಚಿರತೆ ದಾಳಿ ನಡೆಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಚಿರತೆಯನ್ನು ನೋಡಿದ ಹಸುವು ಚಿರತೆ ಮೇಲೆಯೇ ಎರಗಿ ದಾಳಿ ಮಾಡಿದೆ.  ತನ್ನ ಕೊಂಬಿನಿಂದ ಹಸುವು ಗುದ್ದಿದ ಹೊಡೆತ ಚಿರತೆ ಇನ್ನೊಂದು ಕಡೆಗೆ ಹೋಗಿ ಬಿದ್ದಿದೆ. ತಕ್ಷಣವೇ ಹಾಲಪ್ಪ ಎಚ್ಚೆತ್ತುಕೊಂಡು ಅಲ್ಲಿಯೇ ಇದ್ದ ದೊಣ್ಣೆ ಹಿಡಿದು ಹೆದರಿಸಿದ್ದಾರೆ. ಚಿರತೆ ಅಲ್ಲಿಂದ ಓಡುತ್ತಾ ಕಾಡಿನಲ್ಲಿ ಮರೆಯಾಗಿದೆ. 

ಸದ್ಯ ಈ ಘಟನೆ ಎಲ್ಲೆ ಡೆ ಹರಿದಾಡುತ್ತಿದ್ದು, ಹಾಲಪ್ಪ ಹಾಗೂ ಅವರು ಸಾಕಿರುವ ಗೌರಿ ಹೆಸರಿನ ಹಸು ಸುದ್ದಿಯಲ್ಲಿದ್ದಾರೆ. ಇನ್ನೂ ಗ್ರಾಮಸ್ಥರು ಚಿರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅದನ್ನ ಹಿಡಿಯುವಂತೆ ಅರಣ್ಯಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ಧಾರೆ.  


ಕರೆಂಟ್ ಬಿಲ್ ಶಾಕ್! ಕಳೆದ ಸಲಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಬರುತ್ತಿದೆಯಾ ವಿದ್ಯುತ್ ಬಿಲ್! ಪವರ್​ ತಲೆನೋವು ಏನಿದು!

ಬೆಂಗಳೂರು/ ಉಚಿತ ವಿದ್ಯುತ್​ನ ಸಮಾಲೋಚನೆಯ ನಡುವೆ, ಇದೀಗ ಗ್ರಾಹಕರ ವಿದ್ಯುತ್ ವಿತರಣ ಕಂಪನಿಗಳು ದುಬಾರಿ ಬಿಲ್ ನೀಡುತ್ತಿದೆ. ಕಳೆದ ತಿಂಗಳಿಗಿಂತಲೂ ದುಪ್ಪಟ್ಟು ಬಿಲ್​ಗಳನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿಯು ಈ ಬಿಲ್ ವಿತರಣೆಯಾಗುವ ಸಾಧ್ಯತೆ ಇದೆ. 

ಡಬ್ಬಲ್​ ಬಿಲ್ ಗ್ಯಾರಂಟಿ

500 ಬಿಲ್ ಕಟ್ಟುತ್ತಿದ್ದವರಿಗೆ ಸಾವಿರ ರೂಪಾಯಿ, ಸಾವಿರ ರೂಪಾಯಿ ಕಟ್ಟುತ್ತಿದ್ದವರಿಗೆ 2 ಸಾವಿರ ರೂಪಾಯಿ ಜೂನ್​ ತಿಂಗಳ ಬಿಲ್​ ನಲ್ಲಿ ಬರುತ್ತಿದೆ. ಇದು ಮಧ್ಯಮವರ್ಗದ ಮಂದಿಯನ್ನ ಹೈರಾಣಾಗಿಸುತ್ತಿದೆಯಷ್ಟೆ ಅಲ್ಲದೆ ಹಲವೆಡೆ ಪ್ರತಿಭಟನೆಗಳು ಸಹ ಆರಂಭವಾಗಿದೆ. ಇನ್ನೂ ಸೋಶಿಯಲ್ ಮೀಡಿಯಾಗಳಲ್ಲಿ ಜನರು ತಮ್ಮ ಕರೆಂಟ್ ಬಿಲ್​ಗಳನ್ನು ಅಪ್​ಲೋಡ್ ಮಾಡುತ್ತಿದ್ದ ಏಪ್ರಿಲ್​ ತಿಂಗಳ ಬಿಲ್ ಹಾಗೂ ಮೇ ತಿಂಗಳ ಬಿಲ್​ಗಳನ್ನು ಪ್ರದರ್ಶನ ಮಾಡುತ್ತಿದ್ದು, ಯಾಕೀಗೇ ಎಂದು ಪ್ರಶ್ನಿಸುತ್ತಿದ್ದಾರೆ. 

ಕರೆಂಟ್ ಬಿಲ್​ನಲ್ಲಿ ರಾಜಕಾರಣ

ಇನ್ನೂ ಈ ವಿಚಾರದಲ್ಲಿಯು ರಾಜಕಾರಣ ತಲೆದೂರಿಕೊಂಡು ಬಂದಿದ್ದು, ಕೆಲವರು ಇದು ಬಿಜೆಪಿ ಅಧಿಕಾರದಲ್ಲಿದ್ಧಾಗಿನ ಬಿಲ್​, ಇದು ಕಾಂಗ್ರೆಸ್ ಸರ್ಕಾರದ ಬಿಲ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯವರೇ ಬೆಲೆ ಹೆಚ್ಚು ಮಾಡಿದ್ದರು ಎಂಬ ಟೀಕೆಯು ವ್ಯಕ್ತವಾಗುತ್ತಿದೆ. ಇದಕ್ಕೆ ಉತ್ತರವಾಗಿ ಬಿಜೆಪಿ ಹೆಚ್ಚು ಮಾಡಿದ್ದರೇ, ಕಾಂಗ್ರೆಸ್​ನವರು ಕಡಿಮೆ ಮಾಡಲಿ ಎಂಬ ಪ್ರತಿಪಾದನೆಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ 

ಹೆಚ್ಚುವರಿ ಬಿಲ್ ಏಕೆ? 

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕಳೆದ ಮೇ 12ರಂದು ಗೃಹಬಳಕೆಯ ಪ್ರತಿ ಯುನಿಟ್‌ಗೆ ಸರಾಸರಿ 70 ಪೈಸೆಯಷ್ಟು ದರ ಹೆಚ್ಚಳ ಮಾಡಿತ್ತು. ಈ ದರವೂ ಏಪ್ರಿಲ್​ ಒಂದರಿಂದಲೇ ಪೂರ್ವನ್ವಯವಾಗಲಿದೆ ಎಂದು ತಿಳಿಸಿತ್ತು. ಹಾಗಾಗಿ ಏಪ್ರಿಲ್ ಮತ್ತು ಮೇ ತಿಂಗಳ ಹೆಚ್ಚುವರಿ ದರವನ್ನು ಜೂನ್​ ತಿಂಗಳ ಬಿಲ್​ನಲ್ಲಿ ಸೇರಿಸಿ ನೀಡಲಾಗುತ್ತಿದೆ. ಇದು ದುಬಾರಿ ಬಿಲ್​ ಬರಲು ಮೊದಲ ಕಾರಣ ಎನ್ನಲಾಗಿದೆ. 

ಆದರೆ ಸಾರ್ವಜನಿಕರು ಬಿಲ್​ಗಳನ್ನು ನೋಡಿಯೇ ಹೆದರುತ್ತಿದ್ದು, ತಿಂಗಳ ಬಜೆಟ್​ನಲ್ಲಿ ಬಿಲ್ ಹೊಂದಿಸುವುದು ಹೇಗೆ ಎಂಬ ಚರ್ಚೆ ಆರಂಭವಾಗಿದೆ.