ಕೆ.ಎಸ್​. ಈಶ್ವರಪ್ಪನವರ ಮನೆಗೆ ಕಾಶಿ ಜಗದ್ಗುರುಗಳ ಭೇಟಿ! ಮಾಜಿ ಸಚಿವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿ.ವೈ. ವಿಜಯೇಂದ್ರ

Malenadu Today

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS

ಶಿವಮೊಗ್ಗ/ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ!75 ಜನ್ಮದಿನದ ಅಂಗವಾಗಿ ಅವರ ನಿವಾಸಕ್ಕೆ ಆಗಮಿಸುತ್ತಿರುವ ಅಭಿಮಾನಿಗಳು ಈಶ್ವರಪ್ಪನವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ಇದೇ ವೇಳೇ ಕಾಶಿ ಜಗದ್ಗುರುಗಳು ಈಶ್ವರಪ್ಪನವರ ನಿವಾಸಕ್ಕೆ ಬಂದು ಮಾಜಿ ಸಚಿವರಿಗೆ ಆಶೀರ್ವಾದ ಮಾಡಿದರು. ಈ ವೇಳೆ ಈಶ್ವರಪ್ಪನವರ ಕುಟುಂಬಸ್ಥರು ಸ್ವಾಮೀಜಿಗಳ ಪಾದ ಪೂಜೆ ನೆರವೇರಿಸಿದರು. 

Malenadu Today

ಕಾಶಿ ಜಗದ್ಗುರುಗಳ ಹಾರೈಕೆಗೆ ಧನ್ಯವಾದ

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್​.ಈಶ್ವರಪ್ಪ,  ಕಾಶಿ ಜಗದ್ಗುರುಗಳು ಬಂದು ಆಶೀರ್ವಾದ ಮಾಡಿರುವುದು ನನ್ನ ಜೀವನದ ಭಾಗ್ಯ ಎಂದರು,  ಬರುವ ದಿನಗಳಲ್ಲಿ ಸಮಾಜ, ದೇಶ, ಧರ್ಮದ  ಸೇವೆ ಮಾಡುವಲ್ಲಿ ಇನ್ನಷ್ಟು ಸ್ಫೂರ್ತಿ ಸಿಕ್ಕಿದೆ ಎಂದು ಈಶ್ವರಪ್ಪನವರು, ಇಡೀ ಕುಟುಂಬದ 18 ಸದಸ್ಯರು ಚಾರಧಾಮ್​ ಪ್ರವಾಸ ಮಾಡಿದ್ದೇವೆ. ಬಹಳ ಹಿಂದಿನಿಂದಲೂ ಇದ್ದ ಆಸೆ ಅದಾಗಿತ್ತು. ಇದೀಗ ಆ ಆಸೆ ಈಡೇರಿದೆ. ಯಮುನೋತ್ರಿಗೆ ಹೋಗುವಾಗ 4 ಗಂಟೆ ಮಳೆಯಲ್ಲಿ ಸಾಕಷ್ಟು ನೆನೆದೆವು. ಹೀಗಾಗಿ ಕುಟುಂಬ ಸದಸ್ಯರ ಹಲವು ಅನಾರೋಗ್ಯಗೊಂಡಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ನನ್ನ ಮೊಮ್ಮ ಇನ್ನೂ ಸಹ ಆಸ್ಪತ್ರೆಯಲ್ಲಿದ್ಧಾನೆ ಎಂದರು.

Malenadu Today

 

ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ

ಪಕ್ಷ ಏನು ಜವಾಬ್ದಾರಿ ಕೊಡುತ್ತೋ ಅದನ್ನು ತೆಗೆದುಕೊಂಡು ನಿರ್ವಹಿಸುತ್ತೇನೆ ಎಂದಿರುವ ಕೆ.ಎಸ್​.ಈಶ್ವರಪ್ಪರವರು, ಅದೇ ಆಗಬೇಕು ಇದೇ ಆಗಬೇಕು ಅಂದೇನಿಲ್ಲ.ಜವಾಬ್ದಾರಿ ಇಲ್ಲ ಅಂದ್ರು ಹಾಗೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು,  ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವಂತಹ ಜವಾಬ್ದಾರಿ ಬಿಜೆಪಿಯ ಕೋಟ್ಯಾಂತರ ಕಾರ್ಯಕರ್ತರಿಗೆ ಇದೆ ಎಂದ ಈಶ್ವರಪ್ಪನವರು ಆ ದಿಕ್ಕಿನಲ್ಲಿ ನಾನು ಒಬ್ಬ ಸೇರಿಕೊಳ್ಳುತ್ತೇನೆ ವಿಶೇಷವೇನಿಲ್ಲ ಎಂದು ತಿಳಿಸಿದರು. 

Malenadu Today

ವಿಜಯೇಂದ್ರ ಶುಭ ಹಾರೈಕೆ

ಇನ್ನೂ ಇದೇ ವೇಳೇ ಶಿಕಾರಿಪುರದ ಬಿಜೆಪಿ ಶಾಸಕ ಬಿವೈ ವಿಜಯೇಂದ್ರರವರು, ಈಶ್ವರಪ್ಪನವರ ಮನೆಗೆ ಭೇಟಿಕೊಟ್ಟರು. ಮಾಜಿಸಚಿವರ ಮನೆಗೆ ಬರುತ್ತಲೇ ಈಶ್ವರಪ್ಪನವರನ್ನ ಅಭಿನಂದಿಸಿದ ವಿಜಯೇಂದ್ರ ಹೂಗುಚ್ಚವನ್ನು ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಮಾಜಿ ಸಚಿವರ ಕಾಲಿಗೆ ಬಿದ್ದು ವಿಜಯೇಂದ್ರರವರು ನಮಸ್ಕರಿಸಿದರೆ, ಈಶ್ವರಪ್ಪನವರು ವಿಜಯೇಂದ್ರರ ಬೆನ್ನುತಟ್ಟಿ ಧನ್ಯವಾದ ಹೇಳಿದರು.

 

 

 

Share This Article