ಶರಾವತಿ ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ಭಹಿಷ್ಕಾರ- ತೀ ನಾ ಶ್ರಿನಿವಾಸ್ ಎಚ್ಚರಿಕೆ

Will boycott Lok Sabha elections if demands of Sharavathi flood victims are not met: Ti Na Shrinivas

ಶರಾವತಿ ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ಭಹಿಷ್ಕಾರ- ತೀ ನಾ ಶ್ರಿನಿವಾಸ್ ಎಚ್ಚರಿಕೆ
ಶರಾವತಿ ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ಭಹಿಷ್ಕಾರ- ತೀ ನಾ ಶ್ರಿನಿವಾಸ್ ಎಚ್ಚರಿಕೆ

ಶರಾವತಿ ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸದಿದ್ದರೆ ಲೋಕಸಭಾ ಚುನಾವಣೆ ಭಹಿಷ್ಕಾರ- ತೀ ನಾ ಶ್ರಿನಿವಾಸ್

 ಲೋಕಸಭಾ ಚುನಾವಣೆ ಒಳಗೆ ಶರಾವತಿ ಮುಳುಗಡೆ ಸಂತ್ರಸ್ಥರ  ಸಮಸ್ಯೆಯನ್ನ ಬಗೆಹರಿಸದೆ ಇದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಮಲ್ನಾಡ್ ಹೊರಟ ಸಮಿತಿಯ ಸಂಚಾಲಕ ತೀ ನಾ ಶ್ರೀನಿವಾಸ್ ಎಚ್ಚರಿಸಿದ್ದಾರೆ.

 

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇಂದು ಮಲ್ನಾಡ್ ರೈತ ಹೋರಾಟ ಸಮಿತಿ ಹಾಗೂ ಅಂಬೇಡ್ಕರ್ ಕ್ರಾಂತಿ ಸೇನೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ಹಿಂದೆ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಸಂಸದರು ಹಾಗೂ ಸಚಿವರನ್ನು ಇಟ್ಕೊಂಡು ಸಭೆ ಮಾಡಿದ್ರು ಆದರೆ ಯಾವುದೇ ನಿರ್ಣಯ ಮಾಡಲಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ಶರಾವತಿ ಸಂತ್ರಸ್ತರ ಸಮಸ್ಯೆಯ ಸಲುವಾಗಿ ನಗರದ ಈಡಿಗರ ಭವನದಲ್ಲಿ ಸರಣಿ ಸಭೆ ನಡೆಸಿದ್ದರು ಆದ್ರೆ ಅವ್ರು ಕೂಡ  ಯಾವುದೇ ತೀರ್ಮಾನಕ್ಕೂ ಬಂದಿಲ್ಲ ಎಂದು ಹೇಳಿದರು.

 ಮುಂದುವರೆದು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು ಉಪಯೋಗವಾಗಿಲ್ಲ. ಈ ಹಿಂದೆ ವಿಧಾನ ಸಭೆ ಚುನಾವಣೆಗೂ ಮುನ್ನ ಮಧು ಬಂಗಾರಪ್ಪ ಸಂತ್ರಸ್ಥರ ವಿಷಯದ ಸಲುವಾಗಿ ಪಾದ ಯಾತ್ರೆ ಮಾಡಿದ್ದರು. ಈಗ ಅವ್ರು ಸಚಿವರಾಗಿದ್ದಾರೆ ಆದ್ರೆ ಈ ಸಮಸ್ಯೆ ಬಗ್ಗೆ ಮುಖ್ಯಂತ್ರಿಗಳಿಗೆ ಯಾವುದೇ ಒತ್ತಡ ಹಾಕುತ್ತಿಲ್ಲ. ರಾಜಕಾರಣಿಗಳೆಲ್ಲ  ಸುಳ್ಳು ಹೇಳೋದ್ರಲ್ಲಿ ನಂಬರ್ ಒನ್ ಎಂದು ಲೇವಡಿ ಮಾಡಿದ ತೀ ನಾ ಶ್ರೀನಿವಾಸ್, ಲೋಕಸಭಾ ಚುನಾವಣೆ ಒಳಗೆ ನಮ್ಮ ಸಮಸ್ಯೆಯನ್ನ ಬಗೆಹರಿಸದೆ ಇದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.