ಅಶ್ಲೀಲ ವಿಡಿಯೋ ಮತ್ತು ಹಣ ವಸೂಲಿ! ಪ್ರತೀಕ್​ ಗೌಡ ವಿರುದ್ಧ ವಿಶ್ವ ಹಿಂದೂ ಪರಿಷತ್ ಮುಖಂಡರಿಂದಲೇ ದೂರು! 2 ಎಫ್​ಐಆರ್!

VHP leader files complaint against Prateek Gowda for obscene video and extortion 2 FIRs!

ಅಶ್ಲೀಲ ವಿಡಿಯೋ ಮತ್ತು ಹಣ ವಸೂಲಿ! ಪ್ರತೀಕ್​ ಗೌಡ ವಿರುದ್ಧ ವಿಶ್ವ ಹಿಂದೂ ಪರಿಷತ್ ಮುಖಂಡರಿಂದಲೇ ದೂರು! 2 ಎಫ್​ಐಆರ್!

KARNATAKA NEWS/ ONLINE / Malenadu today/ Jun 20, 2023 SHIVAMOGGA NEWS

ತೀರ್ಥಹಳ್ಳಿ ಅಶ್ಲೀಲ ವಿಡಿಯೋಗಳು ವೈರಲ್ ಆದ ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಗಣೇಶ್ ಪ್ರಸಾದ್ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಾಗಿದೆ. ಹಾಗೂ ಪೋಕ್ಸೋ ಕೇಸ್​ನಡಿಯಲ್ಲಿಯು ಎಫ್​ಐಆರ್ ದಾಖಲಾಗಿದೆ. 

ಎಫ್​ಐಆರ್​ ನಲ್ಲಿ ಏನಿದೆ?

ತೀರ್ಥಹಳ್ಳಿ, ಪಟ್ಟಣದ ಬಾಳೇಬೈಲು ವಾಸಿಯಾದ ಪ್ರತೀಕ್ ಗೌಡ ಬಿನ್ ಜಯಶೀಲ ಎಂಬ ಯುವಕ ಕಾಲೇಜು ವಿದ್ಯಾರ್ಥಿನಿಯರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ಹಾಗೂ ಫೋಟೋ ಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ, ಹರಿಬಿಟ್ಟಿರುವ ಬಗ್ಗೆ ಗಣೇಶ್​ ಪ್ರಸಾದ್​ ಎಂಬವರು ದೂರು ಕೊಟ್ಟಿದ್ದಾರೆ. 

ದಿನಾಂಕ: 15-06-2023 ಮತ್ತು ದಿನಾಂಕ: 16-06-2023 ರಂದು ಗಣೇಶ್​ ಪ್ರಸಾದ್​ರಿಗೆ ಈ ವಿಷಯ ತಿಳಿದುಬಂದಿದ್ದು, ಅದರ ಬಗ್ಗೆ ವಿಚಾರಿಸಿದಾಗ,  ಪ್ರತೀಕ್ ಗೌಡ ಹಾಗೂ ಆತನ ಸಹಚರರು ಅಶ್ಲೀಲ ವಿಡಿಯೋಗಳನ್ನು ಸಂತ್ರಸ್ತ ಹೆಣ್ಣುಮಕ್ಕಳಿಗೆ ತೋರಿಸಿ ಹಣಕ್ಕಾಗಿ ಪೀಡಿಸ್ತಿದ್ದರು ಎಂಬುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು,  ಸಾರ್ವಜನಿಕ ವಲಯದಲಿ... ಆತಂಕ ಉಂಟಾಗಿದ್ದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದ ಹಾಗೂ ಅಶ್ಲೀಲ ವಿಡಿಯೋ/ಫೋಟೋ ಚಿತ್ರೀಕರಿಸಿದ ಹಾಗೂ ಅದಕ್ಕಾಗಿ ಹಣ ವಸೂಲಿ ಮಾಡಿದ ಆರೋಪದಡಿಯಲ್ಲಿ ದೂರು ಕೊಟ್ಟಿದ್ದಾರೆ. 

ಇದೇ ದೂರನ್ನ ಆಧರಿಸಿ ಪೊಲೀಸರು  INFORMATION TECHNOLOGY ACT 2008 (U/s-66(E),67(A)); IPC 1860 (U/s-34,386) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

ಇನ್ನೂ : INFORMATION TECHNOLOGY ACT 2008 (U/s-66(E),67(A)) ಗಳು ಏನು ಹೇಳುತ್ತದೆ ಎಂಬುದನ್ನ ನೋಡುವುದಾದರೆ, ಆಕ್ಟ್​ 66 ಇ ಯಾವುದೇ ವ್ಯಕ್ತಿಯ ಖಾಸಗಿ ಚಿತ್ರವನ್ನು ಅವನ ಅಥವಾ ಅವಳ ಒಪ್ಪಿಗೆಯಿಲ್ಲದೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಸೆರೆಹಿಡಿದು, ಪ್ರಕಟಿಸುವ ಅಥವಾ ಪ್ರಸಾರ ಮಾಡುವ, ಆ ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸುವ ಸಂದರ್ಭಗಳಲ್ಲಿ, ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಬಹುದು ಹಾಗೂ ಎರಡು ಲಕ್ಷ ರೂ.ಗಿಂತ ಹೆಚ್ಚಿನ ದಂಡ ವಿಧಿಸಬಹುದು. 

67 ಎ ಯನ್ನು ಗಮನಿಸುವುದಾದರೆ, ವಿದ್ಯುನ್ಮಾನ ರೂಪದಲ್ಲಿ ಲೈಂಗಿಕವಾಗಿ ಪ್ರಚೋದಿಸುವ ಕ್ರಿಯೆ ಇತ್ಯಾದಿಗಳನ್ನು ಒಳಗೊಂಡಿರುವ ವಿಷಯವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು. - ಲೈಂಗಿಕವಾಗಿ ಪ್ರಚೋದನಕಾರಿ ಕೃತ್ಯ ಅಥವಾ ನಡವಳಿಕೆಯನ್ನು ಒಳಗೊಂಡಿರುವ ಯಾವುದೇ ವಿಷಯವನ್ನು ವಿದ್ಯುನ್ಮಾನ ರೂಪದಲ್ಲಿ ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಅಥವಾ ಪ್ರಸಾರ ಮಾಡುವ ಯಾವುದೇ ವ್ಯಕ್ತಿಗೆ ಮೊದಲ ಬಾರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.

ಅಂತಿಮವಾಗಿ  IPC 1860 (U/s-34,386) ಒಬ್ಬ ವ್ಯಕ್ತಿಯನ್ನು ಸಾವಿನ ಭಯ ಹುಟ್ಟಿಸಿ ಅಥವಾ ತೀವ್ರ ಗಾಯಗೊಳಿಸುವ ಮೂಲಕ ಸುಲಿಗೆ ಮಾಡುವುದು. ಈ ಆರೋಪ ಸಾಬೀತಾದರೆ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡವನ್ನೂ ವಿಧಿಸಲಾಗುತ್ತದೆ. ಇನ್ನೂ ಈ ಪೈಕಿ ಸೆಕ್ಷನ್​ 34 ಕೃತ್ಯವನ್ನು ಹಲವರು ಎಸೆಗಿದ್ದರೇ ಸಮಾನ ಶಿಕ್ಷೆಯ ಪ್ರಮಾಣವನ್ನು ತಿಳಿಸುತ್ತದೆ. 


ಹೊಳೆ ಹೊನ್ನೂರು ಪೊಲೀಸ್ ಸ್ಟೇಷನ್​​ನ ನಾಲ್ವರು ಪೊಲೀಸರ ವಿರುದ್ಧ FIR

ಹೊಳೆಹೊನ್ನೂರು:  ಪೊಲೀಸ್ ಸ್ಟೇಷನ್​ನ ನಾಲ್ವರು ಪೊಲೀಸರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಗ೦ಡನ ಆತ್ಮಹತ್ಯೆಗೆ ಪೊಲೀಸರು ನೀಡಿದ ಮಾನಸಿಕ, ದೈಹಿಕ ಹಿಂಸೆಯೇ ಕಾರಣ ಎಂದು ಆರೋಪಿಸಿ ಪತ್ನಿ ದಾಖಲಿಸಿದ್ದ ದೂರಿನ ಹಿನ್ನೆಲೆ ಹೊಳೆಹೊನ್ನೂರು ಠಾಣೆಯ ನಾಲ್ವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಏನಿದು ಘಟನೆ?

ಜೂನ್ 11ರ೦ದು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ 112ರ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಈ ಪೈಕಿ ಮಂಜುನಾಥ್ ಎಂಬವವನ್ನು ಸಹ ಸ್ಟೇಷನ್​ನಲ್ಲಿ ವಿಚಾರಣೆ ನಡೆಸಿದ್ದರು. ಆನಂತರ ಆತನ ಸಹೋದರ ಬಂದು ಮಂಜುನಾಥ್​ನನ್ನ ಬಿಡಿಸಿಕೊಂಡು ಹೋಗಿದ್ದರು. 

ಮಳೆಯ ಅಭಾವದ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಶಂಕಿತ ಕಾಲರಾ ಪ್ರಕರಣಳು ಪತ್ತೆ! ಕಾದಾರಿಸಿದ ನೀರನ್ನೆ ಕುಡಿಯಿರಿ!

ಈ ಘಟನೆ ನಂತರ  ಮಂಜುನಾಥ್​ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದನು. ಗಂಡ ಆತ್ಮಹತ್ಯೆಗೆ ಶರಣಾಗಲು ಪೊಲೀಸರು ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆ ಕಾರಣವಾಗಿದೆ.ಪೊಲೀಸರ ಟಾರ್ಚರ್​ನಿಂದಲೇ  ಪತಿ ಮ೦ಜುನಾಥ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಕಮಲಾಕ್ಷಿ  ಠಾಣೆಗೆ ದೂರು ನೀಡಿದ್ದರು. 

ಸದ್ಯ ಪ್ರಕರಣ ಸಂಬಂಧ  ಹೊಳೆಹೊನೂರು ಠಾಣೆಯ ಪೊಲೀಸ್ ಸಿಬ್ಬಂದಿ ಬಿಲಾಲ್, ಲಿಂಗೇಗೌಡ, ಸುದರ್ಶನ್ ಹಾಗೂ ವಿಶ್ವನಾಥ್‌ ವಿರುದ್ಧ ಎಫ್‌ಐಆ‌ ದಾಖಲಾಗಿದೆ.

ಹೊಸನಗರ ತಾಲ್ಲೂಕಿನಲ್ಲಿ ರೈಲಿಗೆ ಮುತ್ತಿಗೆ ಹಾಕಲು ಯತ್ನ! ಕಾರಣವೇನು?