ಹೊಸನಗರದಲ್ಲಿ ಹೊನಲು ಬೆಳಕಿನ ಕ್ರಿಕೆಟ್​ ಕ್ರೀಡಾಕೂಟ! ನಟಿ ಖುಷಿ ಹಾರೈಕೆ! ಪಂದ್ಯಾವಳಿಯ ವಿಶೇಷ ಏನು ಗೊತ್ತಾ!?

Fedlight Cricket Tournament in Hosanagara. Actress Khushi says all the best. Do you know what's so special about the tournament!?

ಹೊಸನಗರದಲ್ಲಿ ಹೊನಲು ಬೆಳಕಿನ ಕ್ರಿಕೆಟ್​ ಕ್ರೀಡಾಕೂಟ! ನಟಿ ಖುಷಿ ಹಾರೈಕೆ!  ಪಂದ್ಯಾವಳಿಯ ವಿಶೇಷ ಏನು ಗೊತ್ತಾ!?

MALENADUTODAY.COM | SHIVAMOGGA NEWS

ಹೊಸನಗರ ತಾಲೂಕಿನಲ್ಲಿ ಸತತ ಎರಡನೇ ಬಾರಿ ಅದ್ದೂರಿ  ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜನೆ ಮಾಡಿದ್ದು, ಈ ಕ್ರೀಡಾಕೂಟದಲ್ಲಿ ರಾಜ್ಯ ಹಾಗೂ ರಾಷ್ಟ ಮಟ್ಟದ ಆಟಗಾರರು ಭಾಗವಹಿಸುತ್ತಿರುವುದು ಕ್ರಿಡಕೂಟಕ್ಕೆ ಮತ್ತಷ್ಟು ಮೆರಗು ನೀಡಿದೆ.

ಪಂದ್ಯಾವಳಿಯು ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ನಡೆಯಲಿದ್ದು, ಪಂದ್ಯಾವಳೀಯ ನೇರ ಪ್ರಸಾರವನ್ನ ಯೂಟ್ಯೂಬ್ ಚಾನೆಲ್ " (Msports )"Mಸ್ಪೋರ್ಟ್ಸ್ ನಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ..

ರಾಗಿಗುಡ್ಡದಲ್ಲಿ ನಿರ್ಮಾಣವಾಗಲಿದೆ 108 ಅಡಿ ಎತ್ತರದ ಶಿವನಮೂರ್ತಿ

ಪಂದ್ಯಾವಳಿಯೂ ಫೆಬ್ರವರಿ 23 ರಿಂದ 4ದಿನಗಳ ತಾಲೂಕಿನ ನೆಹರು ಮೈದಾನದಲ್ಲಿನಡೆಯಲಿದೆ. ಮೊದಲ  ಪಂದ್ಯವನ್ನು ಹೊಸನಗರದ ರಾಮಚಂದ್ರಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಮಳಲಿ ಮಠದ ಶ್ರೀಗಳು ಉದ್ಘಾಟನೆ ಮಾಡಲಿದ್ಧಾರೆ. ಇನ್ನೂ ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ, ಕಾಂತಾರಾ ಸಿನಿಮಾದ ದೀಪಕ್ ರೈ,ಪವರ್ ಟಿವಿ ನಿರೂಪಕಿ ಮೊದಲಾದವರು ಕ್ರೀಡಾಕೂಟಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ...

ವಿಶೇಷವಾಗಿ ವೀಕ್ಷಕ ವಿವರಣೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾದ ಪ್ರಶಾಂತ್ ಅಂಬಲಪಾಡಿ, ವಿನಯ್ ಉದ್ಯವಾರ್ ಪ್ರವೀಣ್ ಆಚಾರ್ ಅವರ ಮೋಹಕ ಮಾತಿನ ವೈಖರಿ ಕ್ರೀಡಾಕೂಟಕ್ಕೆ ಇನ್ನಷ್ಟು ಕೂತೂಹಲ ಹೆಚ್ಚಿಸಿದೆ. ತನ್ನ ವಿಶಿಷ್ಟ ಶೈಲಿಯಿಂದ ಕ್ರೀಡಾಂಗಣ ತೀರ್ಪುಗಾರರಾಗಿ ಕ್ರಿಕೆಟ್ ರಸಿಕರ ಪ್ರೇಕ್ಷಕರ ಗಮನ ಸೆಳೆಯುವ ಮದನ್ ಮಡಿಕೇರಿ ಅವರು ಭಾಗವಹಿಸುತ್ತಿರುವುದು ಗಮನಾರ್ಹ ಸಂಗತಿ ಆಗಿದೆ..ಇವರೊಟ್ಟಿಗೆ ಪ್ರಶಾಂತ್ ಗೋಪಾಡಿ, ಭರತ್ ಶೆಟ್ಟಿ ಸಹ ಭಾಗವಹಿಸುತ್ತಿದಾರೆ ಎಂದು ಆಯೋಜಕರು ತಿಳಿಸಿದ್ದಾರೆ...

ಹೊಸನಗರ ಬ್ರದರ್ಸ್​ ಎರಡನೇ ವರ್ಷ ಸಹ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿದ್ದು  ರಾಜ್ಯ ಮಟ್ಟದ ಮುಕ್ತ ಟೆನ್ನಿಸ್ ಕ್ರಿಕೆಟ್ ಪಂದ್ಯದಲ್ಲಿ ರಾಜ್ಯದ ಅಗ್ರಗಣ್ಯ ತಂಡಗಳು ಭಾಗವಹಿಸಲಿವೆ. 

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com