Thirthahalli : ಚಿತೆಯಲ್ಲಿ ಸುಟ್ಟ ಶವದ ಮೂಳೆ ಬಿಟ್ಟು ಬೂದಿಕದ್ದ ಕಳ್ಳರು! ತೀರ್ಥಹಳ್ಳಿಯಲ್ಲೊಂದು ವಿಚಿತ್ರ ಘಟನೆ! ನಡೆದಿದ್ದೇನು?

Thirthahalli : Thieves who left the bone of a burnt corpse in the pyre and stole the ashes! A strange incident in Thirthahalli! What happened?

Thirthahalli : ಚಿತೆಯಲ್ಲಿ ಸುಟ್ಟ ಶವದ ಮೂಳೆ ಬಿಟ್ಟು ಬೂದಿಕದ್ದ ಕಳ್ಳರು! ತೀರ್ಥಹಳ್ಳಿಯಲ್ಲೊಂದು ವಿಚಿತ್ರ ಘಟನೆ! ನಡೆದಿದ್ದೇನು?
Thirthahalli : ಚಿತೆಯಲ್ಲಿ ಸುಟ್ಟ ಶವದ ಮೂಳೆ ಬಿಟ್ಟು ಬೂದಿಕದ್ದ ಕಳ್ಳರು! ತೀರ್ಥಹಳ್ಳಿಯಲ್ಲೊಂದು ವಿಚಿತ್ರ ಘಟನೆ! ನಡೆದಿದ್ದೇನು?

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ  ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಕ್ಲಾಪುರ ಸಮೀಪದ ಹೊರಬೈಲಿನ ಸ್ಮಶಾನದಲ್ಲಿ ಸುಟ್ಟ ಶವದ ಬೂದಿಯನ್ನ  ಕಳ್ಳರು ಕದ್ದಿರುವ ಘಟನೆ ಬಗ್ಗೆ ವರದಿಯಾಗಿದೆ. 

ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ ಇವತ್ತಿಗೆ 4 ದಿನದ ಹಿಂದೆ ಊರಿನ ಮಹಿಳೆಯೊಬ್ಬರ ಶವವನ್ನು ಸಂಸ್ಕಾರ ಮಾಡಲಾಗಿತ್ತು. ಮಾರನೇ ದಿನ ಕುಟುಂಬದವರು ಸ್ಮಶಾನಕ್ಕೆ ಬಂದು ಅಳಿದುಳಿದ ಕಟ್ಟಿಗೆ ಕೊಳ್ಳಿ ದೂಡಿ ಹೋಗಿದ್ದರು.  ಮೂರನೇ ದಿನ ಬೂದಿ ವಿಸರ್ಜನೆಗೆ ಎಂದು ಬಂದಿದ್ದ ವೆಳೆ, ಚಿತೆಯ ಮೇಲೇ ಬೂದಿಯೇ ಇರಲಿಲ್ಲ. ಇದು ಕುಟುಂಬಸ್ಥರಿಗೆ ಆಶ್ವರ್ಯ ಮೂಡಿಸಿದೆ. 

ನೀರಿನ ಕಂದಾಯದ ಬಗ್ಗೆ ಇಲ್ಲೊಂದು ಸುದ್ದಿ!ಪಶುವೈದ್ಯಕೀಯ ಹುದ್ದೆಗಳ ನೇಮಕಕ್ಕೆ ಸಂದರ್ಶನ! ಪೊಲೀಸ್​​ ಸ್ಟೇಷನ್​ಗಳಲ್ಲಿ ನಿಂತಿರೋ ವಾಹನಗಳ ಹರಾಜು! ಶಿವಮೊಗ್ಗದ ದಿನದ ಮಾಹಿತಿ

 ಸುಟ್ಟ ಶವದ ಬೂದಿಯನ್ನು ಕದ್ದೊಯ್ದಿದ್ದ ಕಳ್ಳರು ಕಳ್ಳರು, ಸಂಸ್ಕಾರಕ್ಕೆ ಬೇಕಾಗುವ  ಮೂರು ಮೂಳೆಯನ್ನು ಅಲ್ಲೆ ಬಿಟ್ಟು ಹೋಗಿದ್ದರು. ಇದು ಇನ್ನಷ್ಟು ಅಚ್ಚರಿಗೆ ಕಾರಣವಾಗಿದೆ. ಕೊನೆಗೆ ಕುಟುಂಬಸ್ಥರು ಮೂರು ಮೂಳೆಗಳನ್ನು ತಂದು ಅಪರಕ್ರಿಯೆಗಳನ್ನು ನಡೆಸಿದ್ದಾರೆ. 

Shimoga Sogane airport : ಮೋದಿ ಆಗಮನಕ್ಕೆ ಕಾಯುತ್ತಿದೆ ಶಿವಮೊಗ್ಗವಿಮಾನ ನಿಲ್ದಾಣ! ಉದ್ಘಾಟನೆಗೆ ಸಿದ್ದಗೊಂಡ AIRPORTನ ಡ್ರೋಣ್ ದೃಶ್ಯ ನೋಡಿದ್ರಾ

ಚಿತೆಯ ಮೇಲಿನ ಬೂದಿಯ ಜೊತೆಜೊತೆಗೆ ಸ್ಮಶಾನದಲ್ಲಿದ್ದ ಕಬ್ಬಿಣದ ರಾಡ್​ಗಳನ್ನು ಸಹ ಕಳ್ಳರು ಕದ್ದೊಯ್ದಿದ್ಧಾರೆ. ಆದರೆ ಬೂದಿ ಕದ್ದು ಏನು ಮಾಡುತ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದು ಆಯಾಮದಲ್ಲಿ ಶವದಜೊತೆಗೆ ಚಿನ್ನಬೆಳ್ಳಿ ಹಾಕಿ ಅಂತ್ಯಸಂಸ್ಕಾರ ಮಾಡಿದ್ದರಬಹುದು, ಅದನ್ನ ಪಡೆಯಲು ಬೂದಿ ಕದ್ದಿರಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯು ಈ ಘಟನೆ ಸಾಕಷ್ಟು ಕುತೂಹಲ ಮೂಡಿಸಿದೆ. 

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com