ಕಳೆದ ಜನವರಿ 30 ರ ದಿನಾಂಕದಲ್ಲಿ ಸರ್ಕಾರ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು , ಒಟ್ಟು 148 ಇನ್ಸ್ಪೆಕ್ಟರ್ಗಳ ವರ್ಗಾವಣೆಯನ್ನು ಚುನಾವಣಾ ಆಯೋಗ ಮಾರ್ಗಸೂಚಿಯಂತೆ ಕೈಗೊಳ್ಳಲಾಗಿತ್ತು. ಈ ಆದೇಶದಲ್ಲಿ ಶಿವಮೊಗ್ಗದ ಕೆಲವು ಸ್ಟೇಷನ್ಗಳು ಸೇರಿದಂತೆ ಹಲವು ಸ್ಟೇಷನ್ಗಳಿಗೆ ನೂತನ ಇನ್ಸ್ಪೆಕ್ಟರ್ ಯಾರು ಎಂದು ಸೂಚಿಸಿರಲಿಲ್ಲ.
ಈ ನಡುವೆ ಜನವರಿ 31 ರ ಡೇಟ್ಗೆ ಮತ್ತೊಂದು ವರ್ಗಾವಣೆ ಆದೇಶವೂ ಹೊರಬಿದ್ದಿದೆ ಆ ಪಟ್ಟಿಯಲ್ಲಿ 42 ಇನ್ಸ್ಪೆಕ್ಟರ್ಗಳ ವರ್ಗಾವಣೆಯ ವಿವರಗಳಿವೆ. ವಿಷಯ ಅಂದರೆ, ಹಿಂದಿನ ದಿನದ ಪಟ್ಟಿಯಲ್ಲಿ ವರ್ಗವಾದ ಕೆಲವರ ಆದೇಶವೂ ಸಹ ಮರುದಿನ ಬಿಡುಗಡೆಯಾದ ಪಟ್ಟಿಯಲ್ಲಿ ಬದಲಾಗಿದೆ. ಕೆಲವರಿಗೆ ಬೇರೆಯದ್ದೆ ಸ್ಥಳಗಳಿಗೆ ನಿಯುಕ್ತಿಯಾಗಿದೆ.
ಹೀಗೆ ಎರಡು ದಿನಗಳಲ್ಲಿ ಹೊರಬಿದ್ದ ಎರಡು ಆದೇಶಗಳಲ್ಲಿ ಕೆಲವರ ಸ್ಥಳ ನಿಯುಕ್ತಿ ಬದಲಾಗಿರುವುದಕ್ಕೆ ಕಾರಣವೇನು ಎಂಬುದು ಕುತೂಹಲ ಮೂಡಿಸಿದೆ. ಚುನಾವಣೆಯ ಹೊತ್ತಿನಲ್ಲಿಯು ಪವರ್ ಪಾಲಿಟಿಕ್ಸ್ ನಡೆಯಿತೇ ಎಂಬ ಮಾತುಗಳು ವಿಪಕ್ಷಗಳಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ, ಕೆಲವರಿಗೆ ಅನುಕೂಲ ಮಾಡಿಕೊಡಲು, ಕೆಲವರಿಗೆ ಅನಾನುಕೂಲ ಮಾಡಿಕೊಡಲಾಗಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.
ಶಿವಮೊಗ್ಗದ ಅಪ್ಡೇಟ್
2ನೇ ಪಟ್ಟಿಯಲ್ಲಿ ವರ್ಗಾವಣೆಯಾಗಿರುವ ಇನ್ಸ್ಪೆಕ್ಟರ್ಗಳ ಪಟ್ಟಿಯಲ್ಲಿ, ಶಿವಮೊಗ್ಗದ ಕುಂಸಿ ಠಾಣೆಯಲ್ಲಿದ್ದ ಹರೀಶ್ ಪಾಟೀಲ್ರವರನ್ನು ಮಹಿಳಾ ಠಾಣೆ ಹಾವೇರಿ ಜಿಲ್ಲೆಗೆ ವರ್ಗಾಯಿಸಲಾಗಿದೆ. ಕೋಟೆ ಠಾಣೆಗೆ ವರ್ಗಾವಾಗಿದ್ದ ಮಹಂತೇಶ್ ಬಸಾಪುರೆಯವರನ್ನ ಕಲಬುರಗಿಯ ರೋಜಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಇನ್ನೂ ಶಾಂತಿನಾಥ್ ಪಾಯಪ್ಪರಪ್ಪ ಬೆಳಗಾವಿ ಬಾಗೇವಾಡಿ ವರ್ಗವಾಗಿದ್ದವರು, ಅವರನ್ನು ಶಿವಮೊಗ್ಗದ ಭದ್ರಾವತಿ ನಗರ ವೃತ್ತಕ್ಕೆ ವರ್ಗಾಯಿಸಲಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com