ಚುನಾವಣೆಯು ಹತ್ತಿರವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಚುನಾವಣಾ ಆಯೋಗ ಮಾರ್ಗಸೂಚಿಗಳಂತೆ ಭರ್ಜರಿ ವರ್ಗಾವಣೆಯನ್ನು ಕೈಗೊಂಡಿದೆ. ಪೊಲೀಸ್ ಇಲಾಖೆಯ ಸರ್ಜರಿಯ ಬಳಿಕ ಇದೀಗ ತಹಶೀಲ್ದಾರ್ ಕುರ್ಚಿಗಳಿಗೆ ಸರ್ಕಾರ ಕೈ ಹಾಕಿದೆ. ಇದಕ್ಕೆ ಪೂರಕ ಸರ್ಕಾರ ನಿನ್ನೆ 74 ತಹಶೀಲ್ದಾರ್ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ಈ ಪೈಕಿ ಶಿವಮೊಗ್ಗದ ಮೂವರು ತಹಶೀಲ್ದಾರ್ಗಳು ಸಹ ವರ್ಗಾವಣೆ ಗೊಂಡಿದ್ಧಾರೆ.
- ಶಿವಮೊಗ್ಗ ತಾಲೂಕು ತಹಶೀಲ್ದಾರ್ ಎನ್ ಜೆ ನಾಗರಾಜಪ್ಪ ಮಂಡ್ಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ
- ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಉಡುಪಿಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.
- ಹೊಸನಗರ ತಾಲೂಕಿನ ತಹಶೀಲ್ದಾರ್ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.
- ಇನ್ನೂ ಚುನಾವಣಾ ತಹಶೀಲ್ದಾರ್ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ತಹಶೀಲ್ದಾರ್ ಆಗಿರುವ ನಂದಕುಮಾರ್ ವರ್ಗಾವಣೆ ಗೊಂಡಿದ್ದಾರೆ.
- ವರ್ಗಾವಣೆಗೊಂಡಿರುವ ಶಿವಮೊಗ್ಗದ ಮೂರು ತಾಲ್ಲೂಕುಗಳ ತಹಶೀಲ್ದಾರ್ ಸ್ಥಾನಗಳಿಗೆ ಯಾರು ವರ್ಗವಾಗಲಿದ್ದಾರೆ ಎಂಬುದರ ಬಗ್ಗೆ ತಿಳಿಸಲಾಗಿಲ್ಲ.
ಒಟ್ಟು, ಕಂದಾಯ ಇಲಾಖೆಯ 76 ತಹಶೀಲಾರ್‌ಗಳನ್ನು ವರ್ಗಾವಣೆ ಮಾಡಿ, ಸೂಚಿಸಿದ ಸ್ಥಳದಲ್ಲಿ ತಕ್ಷಣವೇ ಕೂಡಲೇ ಸೂಚಿಸಿದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತ ಸೂಚನ ನೀಡಿದೆ.
TAGGED:#KarnatakaNews#ShivamoggaNewskannada latest newskannada live newskannada news channelkannada news livekannadanewskarnataka latest newslatest newslive karnataka newslive newsnews first kannadasandalwood newsSHIVAMOGGAshivamogga face-off latest news updatesshivamogga harshashivamogga incidentshivamogga latest newsshivamogga liveshivamogga live newsshivamogga news today ವಧು ಬೇಕುshivamogga today newsshivamogga today news mtoday newsಶಿವಮೊಗ್ಗ news today
