Bigg Boss winner Rupesh Shetty : ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಆಗಮನ..ಯಾತಕ್ಕಾಗಿ ಗೊತ್ತಾ?

Malenadu Today

ಬಿಗ್ ಬಾಸ್ ವಿನ್ನರ್ ಸೀಸನ್ 9 ರ ವಿನ್ನರ್..ನಗುಮೊಗದ ರೂಪೇಶ್ ಶೆಟ್ಟಿ ಪ್ರಥಮ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದಾರೆ. ಫೆಬ್ರವರಿ 9 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ ಸಂಗೀತ ಸ್ಪರ್ಧೆಗೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಿವಮೊಗ್ಗದ ಕ್ರಿಯೇಟಿವ್ ಗ್ರೂಪ್ ನ ಮುಖ್ಯಸ್ಥ ಪರಮೇಶ್ವರ್​ ಹಾಗು ನ್ಯೂ ಲುಕ್ ಬ್ಯೂಟಿ ಪಾರ್ಲರ್ ಮಾಲೀಕರಾದ ಸುಪ್ರಿಯ ಹಾಗು ಮದರ್ ಛಾಯ್ಸ್  ಬೇಬಿ ಕೇರ್ ಶಾಪೆ ಮಾಲೀಕರಾದ ಗಾಯತ್ರಿಯವರು ಆಯೋಜಿಸಿರುವ ಸರಿಗಮಪ ಶಿವಮೊಗ್ಗ 2023 ರ ವಿನೂತನ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

BREAKING NEWS :148 ಇನ್​​ಸ್ಪೆಕ್ಟರ್​ಗಳ ಟ್ರಾನ್ಸಫರ್​ ! ಶಿವಮೊಗ್ಗದ 3 ಸರ್ಕಲ್​, 8 ಕ್ಕೂ ಹೆಚ್ಚು ಸ್ಟೇಷನ್​ಗಳ ಇನ್​ಸ್ಪೆಕ್ಟರ್​ಗಳ ವರ್ಗಾವಣೆ

ಕ್ರಿಯೇಟಿವ್ ಗ್ರೂಪ್ ಬಹಳ  ವರ್ಷಗಳಿಂದ ಶಿವಮೊಗ್ಗದಲ್ಲಿ ಸೋಲೊ ಸಿಂಗಿಂಗ್ ಕಾಂಪಿಟೇಶನ್ ನಡೆಸಿಕೊಂಡು ಬಂದಿದ್ದು ಈ ಬಾರಿ 300 ಮಂದಿ ಸಂಗೀತಗಾರರು ಭಾಗವಹಿಸಿದ್ದಾರೆ.ಎರಡು ಸುತ್ತಿನ ಸ್ಪರ್ಧೆಯಲ್ಲಿ ಅಂತಿಮವಾಗಿ 6 ಜೂನಿಯರ್ ಹಾಗು 8 ಸೀನಿಯರ್ ಸ್ಪರ್ಧಿಗಳು ಫೈನಲ್ ಹಂತ ತಲುಪಿದ್ದಾರೆ. ಈ ಭಾರಿ ಉತ್ಸಾಹಿ ಹಾಡುಗಾರರು ಹಾಡು ಹೇಳಲು ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಆತುರದಿಂದ ಕಾಯುತ್ತಿದ್ದಾರೆ.

*ಆನಂದಗಿರಿ ಬೆಟ್ಟದ ಮೇಲೆ ಅಗ್ನಿ ಪ್ರವೇಶ ಮಾಡಿ ಆತ್ಮಹತ್ಯೆ ಮಾಡಿಕೊಂಡರಾ ಆ ಮಹಿಳೆ! ತೀರ್ಥಹಳ್ಳಿ ಘಟನೆಯ ಬಗ್ಗೆ ಮಲೆನಾಡು ಟುಡೆಯ JP EXCLUSIVE ರಿಪೋರ್ಟ್*

ಫೆಬ್ರವರಿ 9 ರಂದು ಕುವೆಂಪು ರಂಗಮಂದಿರದಲ್ಲಿ ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಅಂದೇ ವಿಜೆಯತರನ್ನು ಘೋಷಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾಗಿ ಪ್ರಹ್ಲಾದ್ ದೀಕ್ಷಿತ್, ಜೋಗಿ ಸುನಿತಾ ಪಾಲ್ಗೊಳ್ಳಲಿದ್ದಾರೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ಶಿವಮೊಗ್ಗ ಜನರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಮನವಿ ಮಾಡಿದ್ದಾರೆ.

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Malenadu Today

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article