ಜನವರಿ 01ರಿಂದ ಬೆಂಬಲಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭ| ದರ ಎಷ್ಟು ಗೊತ್ತಾ?| ಮಾಂಡೋಸ್​ ಚಂಡಮಾರುತದಿಂದ ಹಾನಿ, ಡಿಸಿ ಹೇಳಿದ್ದೇನು?

ದರ ರೂ.1940/-ನ್ನು ರೂ.2040/-ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಕ್ವಿಂಟಾಲ್ ಗ್ರೇಡ್-ಎ ಭತ್ತಕ್ಕೆ ನಿಗಧಿಪಡಿಸಲಾಗಿದ್ದ ದರ ರೂ.1,960/-ನ್ನು ರೂ.2060ಕ್ಕೆ ಹೆಚ್ಚಿಸಿ ಆದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಜನವರಿ 01ರಿಂದ ಬೆಂಬಲಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ  ಆರಂಭ| ದರ ಎಷ್ಟು ಗೊತ್ತಾ?| ಮಾಂಡೋಸ್​ ಚಂಡಮಾರುತದಿಂದ ಹಾನಿ, ಡಿಸಿ ಹೇಳಿದ್ದೇನು?

ಶಿವಮೊಗ್ಗ : ಡಿಸೆಂಬರ್ 12 : ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ರಾಜ್ಯದ ರೈತರಿಂದ ಕನಿಷ್ಟ ಬೆಂಬಲಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಖರೀದಿಸಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಇದೇ ಜನವರಿ 01ರಿಂದ ಮಾರ್ಚ್ 31ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಗಳ ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತ ಖರೀದಿಸಲಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ತಿಳಿಸಿದ್ದಾರೆ. 

ಇದನ್ನು ಸಹ ಓದಿ : ಕಾಂಗ್ರೆಸ್ ಕೊಟ್ಟಿದ್ದು​ ₹85 ಸಾವಿರ ಕೋಟಿ, ಬಿಜೆಪಿ ಕೊಡ್ತಿರೋದು ₹4 ಕೋಟಿ ಪರಿಹಾರ. ಅಡಿಕೆ ಕಾವಲು ಸಮಿತಿಯ ರಕ್ಷಣೆಯಲ್ಲಿಯೇ ಅಡಿಕೆ ದರ ಕುಸಿತ

ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ತಾಲೂಕಿಗೊಂದರಂತೆ ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಗೊಳ್ಳಲಿದೆ. ಅಗತ್ಯವಿರುವಲ್ಲಿ ರೈತರ ನೋಂದಣಿಯನ್ನಾಧರಿಸಿ, ಶಿರಾಳಕೊಪ್ಪ ಮತ್ತು ಆನವಟ್ಟಿಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸೂಚಿಸಲಾಗುವುದು ಎಂದರು. 

ಇದನ್ನು ಸಹ ಓದಿ : ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಕಳೆದ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ನಿಗಧಿಪಡಿಸಲಾಗಿದ್ದ ದರ ರೂ.1940/-ನ್ನು ರೂ.2040/-ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಕ್ವಿಂಟಾಲ್ ಗ್ರೇಡ್-ಎ ಭತ್ತಕ್ಕೆ ನಿಗಧಿಪಡಿಸಲಾಗಿದ್ದ ದರ ರೂ.1,960/-ನ್ನು ರೂ.2060ಕ್ಕೆ ಹೆಚ್ಚಿಸಿ ಆದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರು ತಿಳಿಸಿ ಪ್ರಮುಖ ಅಂಶಗಳು

  1. ಭತ್ತ ಖರೀದಿ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ.
  2. ಪ್ರತಿ ರೈತರಿಂದ ಪ್ರತಿ ಎಕರೆಗೆ 25ಕ್ವಿಂಟಾಲ್‍ನಂತೆ ಗರಿಷ್ಟ 40ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು.
  3. ರೈತರು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ಐಡಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅರ್ಹ ರೈತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
  4. ಏಜೆನ್ಸಿಯವರು ಭತ್ತ ಖರೀದಿಸಿದ ನಂತರ ರೈತರ ಬ್ಯಾಂಕ್ ಖಾತೆಗಳಿಗೆ 15ದಿನಗಳೊಳಗಾಗಿ ಹಣವನ್ನು ನೇರ ನಗದು ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಗ್ರಹಣಾ ಏಜೆನ್ಸಿಯ ಭತ್ತ ಖರೀದಿ ಕೇಂದ್ರಕ್ಕೆ ಗ್ರೇಡರ್‍ಗಳ ನೇಮಕ, ತಪಾಸಣೆ,  ಮತ್ತಿತರ ವಿಷಯಗಳ ಕುರಿತು ಕೃಷಿ ಇಲಾಖಾ ಅಧಿಕಾರಿಗಳು ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಸೂಚಿಸಿರುವ ಅವರು, ಏಜೆನ್ಸಿಯವರು ಜಿಲ್ಲೆಯ ರೈತರಿಂದ ಭತ್ತವನ್ನು ಖರೀದಿಸಿ, ಗೋದಾಮುಗಳಲ್ಲಿ ಸಂಗ್ರಹಿಸಿ, ಭತ್ತದ ಹಲ್ಲಿಂಗ್‍ಗಾಗಿ ನೋಂದಾಯಿತ ಅಕ್ಕಿಗಿರಣಿಗಳಿಗೆ ಸಾಗಾಣಿಕೆ ಮಾಡುವಂತೆ ಸೂಚಿಸಿದರು.

ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುವ ಅಕ್ಕಿಯನ್ನು ಕಡ್ಡಾಯವಾಗಿ ಸಾರವರ್ಧಿತಗೊಳಿಸಬೇಕಾಗಿರುವುದರಿಂದ ಅಕ್ಕಿಗಿರಣಿಗಳಲ್ಲಿ ಬ್ಲೆಂಡರ್ ಯಂತ್ರವನ್ನು ಅಳವಡಿಸಿಕೊಂಡಿರುವ ಅಕ್ಕಿಗಿರಣಿಗಳನ್ನು ಮಾತ್ರ ಭತ್ತ ಹಲ್ಲಿಂಗ್ ಮಾಡಲು ನೋಂದಾಯಿಸಿಕೊಂಡು ನಿಯಮಾನುಸಾರ ಮಿಶ್ರಣಗೊಳಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.  ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಅವೀನ್ ಆರ್. ಸೇರಿದಂತೆ ಆಹಾರ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನು ಸಹ ಓದಿ : ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಮಾಂಡೋಸ್​ ಚಂಡಮಾರುತದಿಂದ ಹಾನಿ, ಡಿಸಿ ಹೇಳಿದ್ದೇನು? 

ಮಾಂಡೋಸ್ ಚಂಡಮಾರುತದಿಂದ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಇದರಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾನಿಗೊಳಗಾಗಿರುವ ಬಗ್ಗೆ ಮಾಹಿತಿ ಇದ್ದು, ಆಯಾ ತಾಲೂಕಿನ ತಹಶೀಲ್ದಾರರಿಗೆ ಖುದ್ದಾಗಿ ಬಾದಿತ ಸ್ಥಳಕ್ಕೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ವಾಸ್ತವ ವರದಿ ನೀಡುವಂತೆ ಸೂಚಿಸಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ವತಿಯಿಂದ ಜಂಟಿ ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ತಿಳಿಸಿದ್ದಾರೆ. 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link