ಡಿಸೆಂಬರ್​ 17 ಕ್ಕೆ ಕಾಲೇಜುಗಳ ಬಂದ್​ ಗೆ ಕರೆಕೊಟ್ಟ ವಿದ್ಯಾರ್ಥಿ ಸಂಘಟನೆ ಎನ್​ಎಸ್​ಯುಐ

ಡಿಸೆಂಬರ್​ 17 ರಂದು ಎನ್‌ಎಸ್‌ಯುಐ ರಾಜ್ಯದಾದ್ಯಂತ ವಿಶ್ವವಿದ್ಯಾಲಯಗಳು ಹಾಗೂ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜು ಗಳ ಬಂದ್‌ಗೆ ಕರೆ ನೀಡಿದೆ

ಡಿಸೆಂಬರ್​ 17 ಕ್ಕೆ ಕಾಲೇಜುಗಳ ಬಂದ್​ ಗೆ ಕರೆಕೊಟ್ಟ ವಿದ್ಯಾರ್ಥಿ ಸಂಘಟನೆ ಎನ್​ಎಸ್​ಯುಐ

ಶಿವಮೊಗ್ಗ : ಕೇಂದ್ರ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೇ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಉಂಟುಮಾಡ್ತಿದೆ. ಈ ನಿಟ್ಟಿನಲ್ಲಿ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ ನೀತಿಯನ್ನು ಖಂಡಿಸಿ ಎನ್​ಎಸ್​ಯುಐ ವಿದ್ಯಾರ್ಥಿ ಸಂಘಟನೆ ಕಾಲೇಜುಗಳ ಬಂದ್​ಗೆ ಕರೆಕೊಟ್ಟಿದೆ. ಇದೇ ಡಿಸೆಂಬರ್​ 17 ರಂದು ಎನ್‌ಎಸ್‌ಯುಐ ರಾಜ್ಯದಾದ್ಯಂತ ವಿಶ್ವವಿದ್ಯಾಲಯಗಳು ಹಾಗೂ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜು ಗಳ ಬಂದ್‌ಗೆ ಕರೆ ನೀಡಿದೆ

ಇದನ್ನು ಸಹ ಓದಿ : ಕಾಂಗ್ರೆಸ್ ಕೊಟ್ಟಿದ್ದು​ ₹85 ಸಾವಿರ ಕೋಟಿ, ಬಿಜೆಪಿ ಕೊಡ್ತಿರೋದು ₹4 ಕೋಟಿ ಪರಿಹಾರ. ಅಡಿಕೆ ಕಾವಲು ಸಮಿತಿಯ ರಕ್ಷಣೆಯಲ್ಲಿಯೇ ಅಡಿಕೆ ದರ ಕುಸಿತ

ನೂತನ  ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಹೊರಬೀಳುವುದು ವಿಳಂಬವಾಗುತ್ತಿದೆ.ವಾರ್ಷಿಕ ಪ್ರವೇಶ ಶುಲ್ಕದಲ್ಲಿ ವಿಪರೀತ ಹೆಚ್ಚಳವಾಗಿದೆ. ಪ್ರಾಥಮಿಕ ಮತ್ತು ಪೌಢಶಾಲೆ ವಸತಿ ಸಮಸ್ಯೆ, 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯಾಗಿಲ್ಲ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯದ ಸಮಸ್ಯೆ ಉಂಟಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್‌ ವಿತರಣೆ ಸ್ಥಗಿ ತಗೊಳಿಸಲಾಗಿದೆ.

ಇದನ್ನು ಸಹ ಓದಿ : ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ವಿಸ್ತರಣೆ ಮಾಡುತ್ತಿಲ್ಲ. ಕುವೆಂಪು ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾ ನಕಲು, 1 ರಿಂದ 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ವಿದ್ಯಾರ್ಥಿ ವೇತನ ರದ್ದುಪಡಿಸಿರುವುದು, ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಮುಂತಾದ ಸಮಸ್ಯೆಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ ಉಂಟಾಗಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಎನ್​ಎಸ್​ಯುಐ ಜಿಲ್ಲಾಧ್ಯಕ್ಷ ವಿಜಯ್​ಕುಮಾರ್​ ಆರೋಪಿಸಿದ್ದಾರೆ. 

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಹಾಗೂ ರಾಜ್ಯ ಸರ್ಕಾರಗಳ ವಿರೋಧಿ ಎನ್.ಎಸ್.ಯು.ಐ. ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದಲೂ ಅಂದು ಪ್ರತಿಭಟನೆ ನಡೆಸುತ್ತಿದ್ದು, ಎಲ್ಲ ವಿದ್ಯಾರ್ಥಿಗಳೂ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಎನ್‌ಎಸ್ ಯುಐ ಅಧ್ಯಕ್ಷರಾದ ಎಸ್‌.ಎನ್‌. ವಿಜಯ್‌ ಕುಮಾ‌ರ್​ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಇದನ್ನು ಸಹ ಓದಿ : ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link