ಆಕ್ಸಿಡೆಂಟ್ ಆಗಿ ಹೆದ್ದಾರಿಗೆ ಅಡ್ಡ ನಿಂತ ಲಾರಿ! ಅಪಘಾತದಿಂದ ಜಸ್ಟ್​ ಮಿಸ್ ಆಯ್ತು ಬಸ್! ಏನಿದು ಹೊಸನಗರದ ದಾರಿಯಲ್ಲಿ ನಡೆದ ಘಟನೆ?

Lorry hits highway due to accident! Just missed the bus from the accident! What happened on the way to Hosanagara?

ಆಕ್ಸಿಡೆಂಟ್ ಆಗಿ ಹೆದ್ದಾರಿಗೆ ಅಡ್ಡ ನಿಂತ ಲಾರಿ!  ಅಪಘಾತದಿಂದ ಜಸ್ಟ್​ ಮಿಸ್ ಆಯ್ತು ಬಸ್!  ಏನಿದು ಹೊಸನಗರದ ದಾರಿಯಲ್ಲಿ ನಡೆದ ಘಟನೆ?

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS  

ಹೊಸನಗರ ತಾಲ್ಲೂಕಿನ ಸೂಡೂರು ಸೇತುವೆ ಬಳಿಯಲ್ಲಿ ಲಾರಿಯೊಂದು ಅಪ್​ಸೆಟ್ ಆಗಿ, ಮರಕ್ಕೆ ಗುದ್ದಿ,  ರಾಜ್ಯ ಹೆದ್ಧಾರಿಗೆ ಅಡ್ಡಲಾಗಿ ನಿಂತು ಬಿಟ್ಟಿತ್ತು. ಇನ್ನೂ ಇದೇ ಸಂದರ್ಭದಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಬಸ್​ವೊಂದು, ಲಾರಿ ಅಡ್ಡವಾಗಿ ನಿಂತಿರುವುದು ಗೊತ್ತಾಗದೇ ಡಿಕ್ಕಿಯಾಗುವ ಸನ್ನಿವೇಶ ಸೃಷ್ಟಿಯಾಗಿತ್ತು. ಕೊನೆಕ್ಷಣದಲ್ಲಿ ಚಾಲಕ ಬಸ್​ನ್ನ ನಿಯಂತ್ರಣಕ್ಕೆ ತೆಗೆದುಕೊಂಡರಾದರೂ, ಒಂದು ಕಡೆ ರಸ್ತೆಬದಿಯಲ್ಲಿ ಬಸ್ ವಾಲಿ ನಿಂತಿದೆ. 

ಒಂದರ ಹಿಂದೆ ಒಂದರಂತೆ ನಡೆದ ಎರಡು ಘಟನೆಗಳಿಂದ ಹೊಸನಗರ ಹೆದ್ದಾರಿ  ಸುಮಾರು ಐದು ಗಂಟೆಗಳ ಕಾಲ ಬಂದ್ ಆಗಿತ್ತು. ಆನಂತರ ಸ್ಥಳಕ್ಕೆ ಕ್ರೇನ್​ ತರಿಸಿ ಲಾರಿಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು.  




ನೇಣು ಬಿಗಿದುಕೊಂಡು ತೀರ್ಥಹಳ್ಳಿಯ ಯುವಕ ಆತ್ಮಹತ್ಯೆ! ಕಾರಣವೇನು? ಪೊಲೀಸ್​ ಇಲಾಖೆಗೆ ವಿರುದ್ಧವೇಕೆ ಕೇಳಿಬರ್ತಿದೆ ದೂರು?



ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ  ಕಟ್ಟೆಹಕ್ಲಿನಲ್ಲಿ  22 ವರ್ಷದ ಯುವಕನೊಬ್ಬ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ಯುವಕ ಸ್ಥಳೀಯ ನಿವಾಸಿ ಮಿಥುನ್​ ಶೆಟ್ಟಿ ಎಂದು ಗೊತ್ತಾಗಿದೆ. 

ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಈತನ ಸಾವಿಗೆ ಪೊಲೀಸ್ ಇಲಾಖೆಯ ಅಧಿಕೃತ ಕಾರಣ ಗೊತ್ತಾಗಿಲ್ಲ., ಸ್ಥಳೀಯರು ಕ್ರಿಕೆಟ್ ಬೆಟ್ಟಿಂಗ್​ನ ಸಾಲವೇ ಆತ್ಮಹತ್ಯೆಗೆ ಕಾರಣ ಎನ್ನುತ್ತಿದ್ದಾರೆ. ಪೊಲೀಸರು ಅಸ್ವಾಭಾವಿಕ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿಯೇ ಸದ್ದು ಮಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾತನಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ಧಾರೆ. 


ಯಶವಂತಪುರ-ಶಿವಮೊಗ್ಗ ರೈಲಿಗೆ ಸಿಲುಕಿಗೆ ತುಮಕೂರು ಮೂಲದ ಟ್ರೈನಿ ಪೊಲೀಸ್ ಕಾಲು ಕಟ್! ಶಿವಮೊಗ್ಗದ ಮಹಾದೇವಿ ಟಾಕೀಸ್ ಬಳಿಯ ನಿಲ್ದಾಣದಲ್ಲಿ ಘಟನೆ

ಯಶವಂತಪುರ – ಶಿವಮೊಗ್ಗ (16581/Yesvantpur - Shivamogga Town Express)  ರೈಲಿಗೆ ಸಿಲುಕಿ ತರಭೇತಿಯಲ್ಲಿರುವ ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ. ಈ ಘಟನೆ ಶಿವಮೊಗ್ಗ ನಗರದ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ನಡೆದ ಘಟನೆಯಲ್ಲಿ ನಾಗರಾಜ್​ ಎಂಬವರ ಕಾಲು ಕಟ್ ಆಗಿದ್ದು, ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಘಟನೆ ನಡೆದಿದ್ದೇಗೆ?

ಯಶವಂತಪುರದಿಂದ ಬರುತ್ತಿದ್ದ ಟ್ರೈನ್​ನಲ್ಲಿ ನಾಗರಾಜ್​ ರವರು ಆಗಮನಿಸಿದ್ದಾರೆ. ನಿಲ್ದಾಣದ ಬಳಿ ಅವರು ಇಳಿಯುವಾಗ ಎಡವಿ ಟ್ರೈನ್​ನ ಚಕ್ರಕ್ಕೆ ಕಾಲು ಸಿಲುಕಿಕೊಂಡಿದೆ. ತಕ್ಷಣವೇ ಅಲ್ಲಿದ್ದವರು ಬಂದು ನಾಗರಾಜ್​ರನ್ನ ರಕ್ಷಿಸಿದ್ಧಾರೆ. ಮೂಲತಃ ತುಮಕೂರಿನ ಕುಣಿಗಲ್ ಮೂಲದವರಾದ ನಾಗರಾಜ್​, ಕಡೂರಿನಲ್ಲಿರುವ ಪೊಲೀಸ್​ ತರಭೇತಿ ಸಂಸ್ಥೆಯಲ್ಲಿ ತರಭೇತಿ ಪಡೆಯುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.