KARNATAKA NEWS/ ONLINE / Malenadu today/ Oct 13, 2023 SHIVAMOGGA NEWS
ಶಿವಮೊಗ್ಗದ ಮೆಗ್ಗಾನ್ (McGANN Teaching District Hospital, SIMS) ಆಸ್ಪತ್ರೆಯಲ್ಲಿ ಹುಟ್ಟಿದ ಮಗು ಯಾವುದು ಎಂಬ ಗೊಂದಲದಿಂದ ಎರಡು ಕುಟುಂಬಗಳು ಪರದಾಡುವಂತಾದ ಸನ್ನಿವೇಶ ನಿನ್ನೆ ನಿರ್ಮಾಣವಾಗಿತ್ತು. ಹೆರಿಗೆ ಆದ ಬಳಿಕ ಹಾಕುವ ಟ್ಯಾಗ್ನಲ್ಲಿ ಆದ ವ್ಯತ್ಯಾಸದಿಂದಾಗಿ ಇಬ್ಬರು ತಾಯಂದಿರಿಗೆ ಹುಟ್ಟಿದ ಮಗು ಅದಲು ಬದಲಾಗಿತ್ತು. ಇದರಿಂದಾಗಿ ಮೆಗ್ಗಾನ್ ಕೆಲಕಾಲ ಆಕ್ರೋಶವೂ ವ್ಯಕ್ತವಾಗಿತ್ತು.
ಸಮಿನಾ ಹಾಗೂ ಕವನ (ಹೆಸರು ಬದಲಾಯಿಸಲಾಗಿದೆ) ಎಂಬವರಿಗೆ ಮೆಗ್ಗಾನ್ ನಲ್ಲಿ ಹೆರಿಗೆಯಾಗಿತ್ತು. ಆ ಬಳಿಕ ಇಬ್ಬರಿಗೂ ಅವರವರ ಮಕ್ಕಳನ್ನು ಸಿಬ್ಬಂದಿ ತೋರಿಸಿದ್ದರು. ಈ ವೇಳೆ ಗಂಡು ಮಗುವನ್ನು ಸಮಿನಾ ಮತ್ತವರ ಕುಟುಂಬಕ್ಕೆ ತೋರಿಸಿದ್ದ ಸಿಬ್ಬಂದಿ ಕವನರಿಗೆ ಹೆಣ್ಣು ಮಗುವನ್ನು ತೋರಿಸಿದ್ದರು. ಆದರೆ ಕವನ ಮತ್ತವರ ಕುಟುಂಬ ತಮಗೆ ಗಂಡು ಮಗುವಾಗಿದ್ದು ಹೆಣ್ಣು ಮಗು ಏಕೆ ಕೊಡುತ್ತಿದ್ದೀರಿ ಎಂದು ತಿಳಿಸಿದ್ದರು. ಈ ವೇಳೆ ಗೊಂದಲಕ್ಕೆ ಬಿದ್ದ ಸಿಬ್ಬಂದಿ ಸಮಿನಾರಿಗೆ ನೀಡಿದ್ದ ಗಂಡುಮಗುವನ್ನು ವಾಪಸ್ ಪಡೆದು, ಹೆಣ್ಣುಮಗುವನ್ನು ಅವರಿಗೆ ನೀಡಿದ್ದಾರೆ.
ಇದರಿಂದಾಗಿ ಮೆಗ್ಗಾನ್ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ಆಸ್ಪತ್ರೆ ಸಿಬ್ಬಂದಿ ಹುಟ್ಟಿದ ಮಕ್ಕಳ ಡಿಎನ್ಎ ಪರೀಕ್ಷೆ ಮಾಡಿ ಆನಂತರ ಪೋಷಕರಿಗೆ ಮಕ್ಕಳನ್ನು ಒಪ್ಪಿಸಲು ಮುಂದಾಗಿದ್ದರು. ಅಷ್ಟರಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಸ್ವೀಕರಿಸಿದ್ದರಿಂದ ಪ್ರಕರಣ ಹೆಚ್ಚು ದೊಡ್ಡದಾಗಿಲ್ಲ.
ಇನ್ನಷ್ಟು ಸುದ್ದಿಗಳು
‘ಮಾರಿ ಹಬ್ಬದ’ ಮಾತು ’| KS ಈಶ್ವರಪ್ಪ ವಿರುದ್ದ ಜಯನಗರ ಪೊಲೀಸ್ ಸ್ಟೇಷನ್ನಲ್ಲಿ ಸುಮೊಟೋ FIR
ಆಕಸ್ಮಿಕ ಘಟನೆ | ರಾಘವೇಶ್ವರ ಶ್ರೀಗಳ ತಾಯಿಗೆ ಗಾಯ | ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com