ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು!? ಇಬ್ಬರಿಗೂ ಓಕೆ ಅಂದ್ರಾ ಡಿಕೆಎಸ್​!?

KPCC president DK Shivakumar has instructed SP Dinesh and Ayanur Manjunath, who are seeking tickets from south-west graduate constituency, to work

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು!? ಇಬ್ಬರಿಗೂ ಓಕೆ ಅಂದ್ರಾ ಡಿಕೆಎಸ್​!?

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga| Malnenadutoday.com |   ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನಷ್ಟು ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣವಾಗಿರುವುದು ಆಕಾಂಕ್ಷಿಗಳಾಗಿದ್ದ ಆಯನೂರು ಮಂಜುನಾಥ್ ಹಾಗೂ ಎಸ್.ಪಿ.ದಿನೇಶ್  ಇಬ್ಬರಿಗೂ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಸೂಚಿಸಿರುವುದು. 

ಇಬ್ಬರಿಗೂ ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್, ಕ್ಷೇತ್ರದಿಂದ ನಿಮ್ಮಿಬ್ಬರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿಗೆ ಕಳುಹಿಸಲಾಗಿದೆ. ಅಭ್ಯರ್ಥಿ ಯಾರು ಎಂಬುದು ಫೈನಲ್ ಆಗಿಲ್ಲ. ಹೀಗಾಗಿ  ಪದವೀಧರರನ್ನು ಸಂಪರ್ಕಿಸಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವಂತೆ ನೋಡಿಕೊಳ್ಳಿ ಎಂದು ಡಿಕೆಶಿ ಸೂಚಿಸಿದ್ದಾರೆ

READ : ಮೊದಲ ದಿನವೇ 400 ಮಂದಿ ಪ್ರಯಾಣ! ಏರ್​ಪೋರ್ಟ್​ನಲ್ಲಿ ಸಂಸದರು ನೀಡಿದರು ಮತ್ತೊಂದು ಗುಡ್ ನ್ಯೂಸ್!

ಇತ್ತೀಚೆಗೆ ಕಾಂಗ್ರೆಸ್​​ಗೆ ಬಂದಿರುವ  ಆಯನೂರು ಮಂಜುನಾಥ್ ಅವರು ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀ ನಾಮೆ ನೀಡಿ ಜೆಡಿಎಸ್ ಅಭ್ಯರ್ಥಿ ಯಾಗಿ ಎಲೆಕ್ಷನ್​ಗೆ ನಿಂತು ಸೋಲನ್ನ ಅನುಭವಿಸಿದ್ದರು. 

 

ಸದ್ಯ ಇವರ ಪರವಾಗಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಆಯನೂರು ಮಂಜುನಾಥ್ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ ಎನ್ನಲಾಗಿದೆ. 

READ :ದಿನವಿಡಿ ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ POWER CUT ! ಎಲ್ಲೆಲ್ಲಿ? ವಿವರ ಇಲ್ಲಿದೆ

ಇನ್ನೂ ಇತ್ತ ಈ ಹಿಂದೆ ಎರಡು ಸಲ ವಿಧಾನಪರಿಷತ್ ಚುನಾವಣೆಯಲ್ಲಿ ಎಸ್.ಪಿ.ದಿನೇಶ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮಾಜಿ ಸಭಾಪತಿ  ಡಿ.ಹೆಚ್. ಶಂಕರಮೂರ್ತಿ  ಹಾಗೂ  ಆಯನೂರು ಮಂಜುನಾಥ್​ ರವರ ವಿರುದ್ಧ ಪರಾಭವಗೊಂಡಿದ್ದರು   

ಸದ್ಯ ಇಬ್ಬರಿಗೂ ಚುನಾವಣೆಗೆ ಸಿದ್ದರಾಗಿ ಎಂದಿರುವುದು ನಾಯಕರಷ್ಟೆ ಅಲ್ಲದೆ ಕಾರ್ಯಕರ್ತರಲ್ಲಿಯು ಕುತೂಹಲ ಹಾಗೂ ಗೊಂದಲ ಮೂಡಿಸಿದೆ.