ವಿಮಾನ ನಿಲ್ದಾಣ ಆಯ್ತು, ಈಗ ರೈಲ್ವೆ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾ ಹೆಸರು ಇಡುವಂತೆ ಆಗ್ರಹ! ಕಾರಣವೇನು?

It has been demanded to name Jambagaru railway station in Sagar taluk of Shimoga district after Ram Manohar Lohia.ಶಿವಮೊಗ್ಗ ಜಿಲ್ಲೆ ಸಾಗರ ತಾಲಲ್ಲೂಕಿನ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾರವರ ಹೆಸರು ಇಡುವಂತೆ ಒತ್ತಾಯಿಸಲಾಗಿದೆ

ವಿಮಾನ ನಿಲ್ದಾಣ ಆಯ್ತು, ಈಗ ರೈಲ್ವೆ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾ ಹೆಸರು ಇಡುವಂತೆ ಆಗ್ರಹ! ಕಾರಣವೇನು?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ  ತಾಲ್ಲೂಕಿನ ಸಾಗರದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ  (Ram Manohar Lohia) ಅವರ ಹೆಸರು ನಾಮಕರಣ ಮಾಡಬೇಕು ಎಂಬ ಆಗ್ರಹವೊಂದು ಕೇಳಿಬಂದಿದೆ.  ಈ ಸಂಬಂಧ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. 

ರಾಮಮನೋಹರ ಲೋಹಿಯಾ ಅವರು 1951ರ ಜೂನ್ 13ರಂದು ಜಂಬಗಾರು ರೈಲ್ವೆ ನಿಲ್ದಾಣದಲ್ಲಿ 'ಉಳುವವನೇ ಹೊಲ ದೊಡೆಯ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು. ಈ ಹೋರಾಟಕ್ಕೆ 2024 ರ ಜೂನ್13 ಕ್ಕೆ 75 ವರ್ಷ ತುಂಬುತ್ತವೆ. ಅಮೃತ ವರ್ಷದ ನೆನಪಿಗೆ ಈ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾ ಅವರ ಹೆಸರು ಮಾಡಬೇಕು ಎಂದು ಟ್ರಸ್ಟ್ ನ ಸದಸ್ಯರು ಆಗ್ರಹಿಸಿದ್ದಾರೆ. 

ಈ ಹಿಂದೇ ಶ್ರೀನಿವಾಸ್ ಪ್ರಸಾದ್​ ರವರು ಕೇಂದ್ರ ಸಚಿವರಾಗದ್ದ ಸಂದರ್ಭದಲ್ಲಿ ಅವರ ಮೂಲಕ ಎಲ್​ಕೆ ಆಡ್ವಾಣಿಯವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಹೆಸರು ನಾಮಕರಣ ಮಾಡಿಲ್ಲ. ಇದೀಗ ರಾಜ್ಯ ಸರ್ಕಾರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾರವರ ಹೆಸರನ್ನ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಟ್ರಸ್ಟ್ ಸದಸ್ಯರು ಆಗ್ರಹಿಸಿದ್ದಾರೆ. 


   

ಇನ್ನಷ್ಟು ಸುದ್ದಿಗಳು