ಬಿಜೆಪಿ ಸೇರಿದ ಡಾ.ಧನಂಜಯ್​ ಸರ್ಜಿ, ಕೆ.ಎಸ್.​ ಪ್ರಶಾಂತ್/ ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ / ಸಾಗರ ಟಿಕೆಟ್ ಕುತೂಹಲ ಆರಂಭ

ಕೆ.ಎಸ್​.ಪ್ರಶಾಂತ್​ ರವರ ಸೇರ್ಪೆಡೆ ಸಾಗರ ತಾಲ್ಲೂಕಿನಲ್ಲಿ ಟಿಕೆಟ್ ಕುತೂಹಲ ಹುಟ್ಟುಹಾಕಿದೆ. ಈಗಾಗಲೇ ಶಾಸಕ ಹರತಾಳು ಹಾಲಪ್ಪರವರಿಗೆ ಮುಂದಿನ ಟಿಕೆಟ್ ಎನ್ನಲಾಗುತ್ತಿದೆ. ಆದಾಗ್ಯು ಮಾಜಿ ಶಾಸಕರು ಕೆ.ಜಿ.ಶಿವಪ್ಪರವರ ಪುತ್ರ ಕೆ.ಎಸ್​. ಪ್ರಶಾಂತ್​ರವರು ಸಹ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿ ಸೇರಿದ ಡಾ.ಧನಂಜಯ್​ ಸರ್ಜಿ, ಕೆ.ಎಸ್.​ ಪ್ರಶಾಂತ್/ ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ / ಸಾಗರ ಟಿಕೆಟ್ ಕುತೂಹಲ  ಆರಂಭ

ಚುನಾವಣೆ ಸಮೀಪಿಸ್ತಿದೆ, ಬೆನ್ನಲ್ಲೆ ರಾಜಕಾರಣದಲ್ಲಿಯು ಸಂಚಲನ ಶುರುವಾಗಿದೆ. ಪಕ್ಷಾಂತರಗಳು ಆರಂಭಗೊಂಡಿದ್ದು, ಶಿವಮೊಗ್ಗ ಜಿಲ್ಲಾ ರಾಜಕೀಯ ಸಾಕಷ್ಟು ಕುತೂಹಲ ಮೂಡಿಸ್ತಿದೆ. ಇತ್ತೀಚೆ್ಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಜೆಡಿಎಸ್​ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಹೆಚ್​.ಟಿ. ಬಳಿಗಾರ್​ ರನ್ನ ಬಿಎಸ್​ವೈ ತಮ್ಮ ಕಡೆಗೆ ಬರುವಂತೆ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇದರ ಬೆನ್ನಲ್ಲೆ ಇವತ್ತು ಶಿವಮೊಗ್ಗ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಡಾ.ಧನಂಜಯ್ ಸರ್ಜಿ ಹಾಗೂ ಸಾಗರದ ಕೆ.ಎಸ್​.ಪ್ರಶಾಂತ್​ರವರು ಬಿಜೆಪಿ ಸೇರಿದ್ಧಾರೆ. ಸದ್ಯ ಜಿಲ್ಲಾ ರಾಜಕಾರಣದಲ್ಲಿ ಈ ಇಬ್ಬರು ಮುಖಂಡರ ನಡೆ ಕುತೂಹಲ ಮೂಡಿಸಿದೆ. ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಧನಂಜಯ್ ಸರ್ಜಿ ಹಾಗು ಕೆ.ಎಸ್​. ಪ್ರಶಾಂತ್ ಬಿಜೆಪಿ ಸೇರಿದ್ಧಾರೆ. 

ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಮತ್ತು ಸಂಸದ ಬಿವೈ ರಾಘವೇಂದ್ರರವರು ಇಬ್ಬರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ಧಾರೆ. ಇನ್ನೂ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ ಡಾ.ಧನಂಜಯ್​ ಸರ್ಜಿ ಆರ್​ಎಸ್​ಎಸ್​ ಉತ್ತಮ ಸಂಸ್ಕಾರವನ್ನು ನನ್ನಲ್ಲಿ ಬೆಳಸಿದೆ. ಪ್ರಧಾನಿ ನರೇಂದ್ರ ಮೋದಿಯವರ  ಸಾಧನೆಯನ್ನು ಮೀರಿಸಲು ಮೋದಿಯವರೇ ಮತ್ತೆ ಹುಟ್ಟಿ ಬರಬೇಕಾಗುತ್ತದೆ.

ಅದರ ಹೊರತಾಗಿ ಅವರಷ್ಟು ಸಾಧನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರು ನಿಬಾಯಿಸುತ್ತೇನೆ ಎಂದಿದ್ದಾರೆ. ಇನ್ನೂ ಸರ್ಜಿಯವರ ಆಗಮನದ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಬಿಜೆಪಿಗೆ ಇಬ್ಬರು ವಿದ್ಯಾವಂತರು ಬಂದು ಸೇರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. 

ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

 ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ 

ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಡಾ.ಧನಂಜಯ್ ಸರ್ಜಿ  (dr dhananjay sarji ) ಜೀವ ಪರ ಎಂಬ ಟ್ಯಾಗ್​ಲೈನ್​ ಅಡಿಯಲ್ಲಿ ಪಾಲಿಟಿಕ್ಸ್​ ಗೆ ಹೊಸ ಟ್ರೀಟ್ಮೆಂಟ್ ನೀಡುವ ಭರವಸೆ ವ್ಯಕ್ತಪಡಿಸಿದ್ದರು. ಅಲ್ಲದೆ ಇವರ ಎಂಟ್ರಿ ರಾಜಕೀಯ ಪಕ್ಷದಲ್ಲಿ ಸಂಚಲನ ಮೂಡಿಸಿದ್ದಷ್ಟೆ ಅಲ್ಲದೆ ಪ್ರಬಲ ಅಭ್ಯರ್ಥಿಗಳಿಗೆ ಸೋಲಿನ ಸಣ್ಣ ಆತಂಕ ಉಂಟಾಗಿತ್ತು. ಈ ನಡುವೆ ನಡೆದ ಬಿಜೆಪಿ ಸೇರ್ಪಡೆ ಆಪರೇಷನ್​ ಯಶಸ್ವಿಯಾಗಿದ್ದು, ಸರ್ಜಿಯವರನ್ನ ಕಮಲ ಪಾರ್ಟಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಬಿಜೆಪಿಗೆ ಎದುರಾಗಬಹುದಾಗಿದ್ದ ಒಂದು ಸ್ಪರ್ದೆ ನಿವಾರಣೆಯಾಗಿದೆ. 

ಇದನ್ನು ಸಹ ಓದಿ  : ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಸಾಗರದಲ್ಲಿ ಆರಂಭವಾಯ್ತು ಟಿಕೆಟ್ ಕುತೂಹಲ

ಇನ್ನೂ ಶಿವಮೊಗ್ಗದಲ್ಲಿ ಪ್ರತಿಸ್ಪರ್ಧಿ ಎದುರಾಗುವುದು ತಪ್ಪಿದರೆ, ಅತ್ತ ಕೆ.ಎಸ್​.ಪ್ರಶಾಂತ್​ ರವರ ಸೇರ್ಪೆಡೆ ಸಾಗರ ತಾಲ್ಲೂಕಿನಲ್ಲಿ ಟಿಕೆಟ್ ಕುತೂಹಲ ಹುಟ್ಟುಹಾಕಿದೆ. ಈಗಾಗಲೇ ಶಾಸಕ ಹರತಾಳು ಹಾಲಪ್ಪರವರಿಗೆ ಮುಂದಿನ ಟಿಕೆಟ್ ಎನ್ನಲಾಗುತ್ತಿದೆ. ಆದಾಗ್ಯು  ಮಾಜಿ ಶಾಸಕರು ಕೆ.ಜಿ.ಶಿವಪ್ಪರವರ ಪುತ್ರ ಕೆ.ಎಸ್​. ಪ್ರಶಾಂತ್​ರವರು ಸಹ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದೀಗ ಅವರ ಪಕ್ಷ ಸೇರ್ಪಡೆಯಿಂದಾಗಿ ಸಾಗರ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಎಂಬ ಕುತೂಹಲ ಮನೆ ಮಾಡಿದೆ. ಅದಾಗಲೇ ಅಲ್ಲಿಗೆ ಇವರು, ಇಲ್ಲಿಗೆ ಅವರು ಎಂಬ ಚರ್ಚೆಗಳು ಆರಂಭವಾಗಿದೆ ಒಟ್ಟಾರೆ, ಜಿಲ್ಲಾ ರಾಜಕಾರಣದಲ್ಲಿ ಕೇಸರಿ ಪಡೆ  ಕತೂಹಲ ಮೂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲೆ ಬೆಳವಣಿಗೆಗಳು ನಡೆಯುತ್ತವೆ ಎಂಬುದು ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿದೆ. 

BREAKING NEWS : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ​ ಶೀಘ್ರದಲ್ಲಿಯೇ ಹೊಸ ಅಧ್ಯಕ್ಷ? ಯಾರಾಗ್ತಾರೆ ಡಿಸ್ಟ್ರಿಕ್ಟ್​ ಪ್ರೆಸಿಡೆಂಟ್ ಇಲ್ಲಿದೆ ವರದಿ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link